ನವದೆಹಲಿ: ಭಾರತದಲ್ಲಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆನ್ನುವ ಅಘಾತಕಾರಿ ವಿಷಯ ಬಯಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆಯಿಂದ ಈ ಅಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಮಕ್ಕಳು ಅಪೌಷ್ಟಿಕತೆಯ ಪಟ್ಟಿಯಲ್ಲಿ ಮಹಾರಾಷ್ಟ್ರ, ಬಿಹಾರ ಮತ್ತು ಗುಜರಾತ್ ಅಗ್ರಸ್ಥಾನದಲ್ಲಿವೆ. ದೇಶದಲ್ಲಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಅವರಲ್ಲಿ ಅರ್ಧದಷ್ಟು ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರಕಾರ, ಅಕ್ಟೋಬರ್ 14 ರ ಹೊತ್ತಿಗೆ ದೇಶದಲ್ಲಿ 17,76,902 ತೀವ್ರ ಅಪೌಷ್ಟಿಕ ಮಕ್ಕಳು ಮತ್ತು 15,46,420 ಮಧ್ಯಮ ತೀವ್ರ ಅಪೌಷ್ಟಿಕ ಮಕ್ಕಳು ಇದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಪೌಷ್ಟಿಕ ಮಕ್ಕಳ ಸಂಖ್ಯೆ 6,16,772 ರಷ್ಟಿದ್ದು, ನಂತರದ ಸ್ಥಾನದಲ್ಲಿ ಬಿಹಾರ (4,75,824) ಮತ್ತು ನಂತರ ಗುಜರಾತ್ (3,20,465) ಇದೆ. ಜೊತೆಗೆ ಹೆಚ್ಚಿನ ಸಂಖ್ಯೆಯ ಅಪೌಷ್ಟಿಕ ಮಕ್ಕಳನ್ನು ಹೊಂದಿರುವ ಇತರ ರಾಜ್ಯಗಳಲ್ಲಿ ಆಂಧ್ರ ಪ್ರದೇಶ (2,67,228), ಕರ್ನಾಟಕ (2,49,463), ಮತ್ತು ಉತ್ತರ ಪ್ರದೇಶ (1,86,640) ಸ್ಥಾನಪಡೆದುಕೊಂಡಿವೆ.
ನವೆಂಬರ್ 2020 ಮತ್ತು ಈ ವರ್ಷದ ಅಕ್ಟೋಬರ್ 14 ರ ನಡುವೆ ತೀವ್ರತರವಾದ ಅಪೌಷ್ಟಿಕತೆಯ ಮಕ್ಕಳ ಸಂಖ್ಯೆಯಲ್ಲಿ 91% ಏರಿಕೆಯಾಗಿದೆ. ನವೆಂಬರ್ 2020 ರಲ್ಲಿ ಅಂತಹ ಮಕ್ಕಳ ಸಂಖ್ಯೆ 9,27,606 ಆಗಿತ್ತು. ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ ಎಂದು ಆರ್‌ಟಿಐ ಪ್ರಶ್ನೆಗೆ ಸಚಿವಾಲಯ ಉತ್ತರ ನೀಡಿದೆ. ಕಳೆದ ವರ್ಷ ಅಭಿವೃದ್ಧಿಪಡಿಸಲಾದ ಪೋಶನ್ ಟ್ರ್ಯಾಕರ್ ಅಪ್ಲಿಕೇಶನ್‌ನಲ್ಲಿ ಸಂಖ್ಯೆಗಳನ್ನು ನೋಂದಾಯಿಸಲಾಗಿದೆ. ನವೆಂಬರ್ 2020 ಮತ್ತು ಅಕ್ಟೋಬರ್ 14, 2021 ರ ನಡುವೆ SAM ಮಕ್ಕಳ ಸಂಖ್ಯೆಯಲ್ಲಿ 91 ಪ್ರತಿಶತದಷ್ಟು ಏರಿಕೆ ಕಂಡುಬಂದಿದೆ. ಅಂದರೆ 9,27,606 (9.27 ಲಕ್ಷ) ದಿಂದ ಈಗ 17.76 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ ಈ ಎರಡು ಅಂಕಿಅಂಶಗಳ ಡೇಟಾ ಸಂಗ್ರಹಣೆಯ ವಿಧಾನ ವಿಭಿನ್ನವಾಗಿದೆ.
ಕಳೆದ ವರ್ಷ ಗುರುತಿಸಲಾದ SAM ಮಕ್ಕಳ ಸಂಖ್ಯೆಯನ್ನು ಆರು ತಿಂಗಳಿಂದ ಹಿಡಿದು ಆರು ವರ್ಷಗಳವರೆಗಿನ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿತ್ತು. ಇತ್ತೀಚಿನ ಅಂಕಿಅಂಶಗಳು ಪೋಶನ್ ಟ್ರ್ಯಾಕರ್ ಮೂಲಕ, ಅಲ್ಲಿ ಅಂಗನವಾಡಿಗಳಿಂದ ನೇರವಾಗಿ ಸಂಖ್ಯೆಗಳನ್ನು ನಮೂದಿಸಲಾಗಿದೆ ಮತ್ತು ಮಕ್ಕಳ ವಯಸ್ಸಿನ ಗುಂಪನ್ನು ನಿರ್ದಿಷ್ಟಪಡಿಸಲಾಗಿಲ್ಲ. MAM (moderate acute malnutrition) ಮತ್ತು SAM (severe acute malnutrition) ಎರಡೂ ಮಗುವಿನ ಆರೋಗ್ಯದ ಮೇಲೆ ತೀವ್ರವಾದ ಆರೋಗ್ಯ ಪರಿಣಾಮಗಳನ್ನು ಹೊಂದಿವೆ. SAM ನಿಂದ ಬಳಲುತ್ತಿರುವ ಮಕ್ಕಳು ತಮ್ಮ ಎತ್ತರಕ್ಕೆ ತುಂಬಾ ಕಡಿಮೆ ತೂಕವನ್ನು ಹೊಂದಿರುತ್ತಾರೆ ಮತ್ತು ಅವರ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯಿಂದಾಗಿ ರೋಗಗಳ ಸಂದರ್ಭದಲ್ಲಿ ಸಾಯುವ ಸಾಧ್ಯತೆ ಒಂಬತ್ತು ಪಟ್ಟು ಹೆಚ್ಚಿರುತ್ತದೆ. MAM ನಿಂದ ಬಳಲುತ್ತಿರುವವರು ಬಾಲ್ಯದಲ್ಲಿ ಅನಾರೋಗ್ಯ ಮತ್ತು ಮರಣದ ಅಪಾಯವನ್ನು ಹೊಂದಿರುತ್ತಾರೆ.ಉತ್ತರ ಪ್ರದೇಶವು 1,86,640 (1.86 ಲಕ್ಷ) ಅಪೌಷ್ಟಿಕ ಮಕ್ಕಳನ್ನು ಹೊಂದಿದೆ. ಇದರಲ್ಲಿ 1,14,094 MAM ಮಕ್ಕಳು ಮತ್ತು 72,546 SAM ಮಕ್ಕಳು ಇದ್ದಾರೆ. ತಮಿಳುನಾಡು 1,78,060 (1.78 ಲಕ್ಷ) ಅಪೌಷ್ಟಿಕ ಮಕ್ಕಳನ್ನು ಹೊಂದಿದೆ . ಇದರಲ್ಲಿ 1,20,076 MAM ಮಕ್ಕಳು ಮತ್ತು 57,984 SAM ಮಕ್ಕಳು ಇದ್ದಾರೆ. ಅಸ್ಸಾಂನಲ್ಲಿ 1,76,462 (1.76 ಲಕ್ಷ) ಅಪೌಷ್ಟಿಕತೆಯ ಪ್ರಕರಣಗಳಿದ್ದು ಇದರಲ್ಲಿ 1,17,016 MAM ಮಕ್ಕಳು ಮತ್ತು 59,446 SAM ಮಕ್ಕಳು ಇದ್ದಾರೆ. ತೆಲಂಗಾಣ 1,52,524 (1.52 ಲಕ್ಷ) ಅಪೌಷ್ಟಿಕತೆಯ ಪ್ರಕರಣಗಳಿದ್ದು 95,033 MAM ಮತ್ತು 57,491 SAM ಮಕ್ಕಳು ಇದ್ದಾರೆ.