ತಿರುವನಂತಪುರ: ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇದುವರೆಗೆ 36,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಸಾವಿನ ಸಂಖ್ಯೆ 36 ಕ್ಕೆ ಏರಿದೆ ಮತ್ತು ಮೇಲ್ಮನವಿಯಲ್ಲಿ 171 ಸಾವುಗಳು ಸೇರ್ಪಡೆಗೊಂಡಿದೆ. ರಾಜ್ಯದಲ್ಲಿ ಇದುವರೆಗೆ 36087 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಕೊರೋನಾ ಪಾಸಿಟಿವಿಟಿಯಾದ 30 ದಿನಗಳ ಒಳಗಾಗಿ ಸಾವನ್ನಪ್ಪಿದವರನ್ನೂ ಪಟ್ಟಿಯಲ್ಲಿ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ಅಂಕಿ ಅಂಶಗಳ ಸೇರ್ಪಡೆಯಿಂದ ಕೇರಳದಲ್ಲಿ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗಿದೆ.
ಕೇರಳದಲ್ಲಿ ಮೊದಲ ಕೊರೋನಾ ಸಾವು ಮಾರ್ಚ್ 2020ರ 28 ರಂದು ವರದಿಯಾಗಿದೆ. ಮೊದಲ ಅಲೆಯು ಮಾರ್ಚ್ 2021 ರ ಮಧ್ಯದ ವೇಳೆಗೆ 4406 ಜನರನ್ನು ಬಲಿಪಡೆಯಿತು. ಆದರೆ ಎರಡನೇ ತರಂಗವು ಅದರ ಸಾವಿನ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿದೆ. ಡೆಲ್ಟಾ ವೈರಸ್‍ನ ಎರಡನೇ ತರಂಗದ ಆಗಮನದಿಂದ ಕೇರಳದಲ್ಲಿ ಕೊರೋನಾ ಸಾವಿನ ಸಂಖ್ಯೆ ಏರಲಾರಂಭಿಸಿತು. ಕೊರೋನಾ ತಡೆಗಟ್ಟುವಿಕೆಯ ಮೇಲೆ ಸರ್ಕಾರದ ಅವೈಜ್ಞಾನಿಕ ನಿಯಂತ್ರಣವು ಹೆಚ್ಚಾದಂತೆ, ರೋಗಿಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆಯು ನಾಟಕೀಯವಾಗಿ ಹೆಚ್ಚಾಯಿತು.
ನಿರ್ಬಂಧಗಳಿದ್ದರೂ ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ. ನಿರ್ಬಂಧಗಳು ಅವೈಜ್ಞಾನಿಕ ಎಂದು ಸಾಬೀತುಪಡಿಸಲು ಈ ಅಂಕಿಅಂಶಗಳು ಮಾತ್ರ ಸಾಕಾಗಿದ್ದವು. ಜೂನ್ 2, 2021 ರಂದು, ಕೇರಳದಲ್ಲಿ ದೈನಂದಿನ ಸಾವಿನ ಪ್ರಮಾಣ ಮೊದಲ ಬಾರಿಗೆ 200 ದಾಟಿತು. ಸಾವಿನ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಕೇರಳ ಕೊರೊನಾ ಸಾವುಗಳನ್ನು ಕಡಿಮೆ ಅಂದಾಜು ಮಾಡುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಬಲವಾಗಿತ್ತು.
ಇದೇ ವೇಳೆ, ಕೊರೋನಾ ಮೃತರ ಸಂಖ್ಯೆ ಎರಡನೇ ತರಂಗಕ್ಕಿಂತ ಹೆಚ್ಚಾಗಿದೆ. ಪ್ರಸ್ತುತ ಕೇರಳವು ದೇಶದಲ್ಲೇ ಅತಿ ಹೆಚ್ಚು ದೈನಂದಿನ ರೋಗಿಗಳನ್ನು ಹೊಂದಿದೆ. ನಿನ್ನೆ ಕೇರಳದಲ್ಲಿ 5516 ಮಂದಿ ಜನರು ಕೋವಿಡ್ ಸೋಂಕಿಗೊಳಗಾಗಿದ್ದರು. 70,576 ಮಾದರಿಗಳನ್ನು ಮಾತ್ರ ಪರೀಕ್ಷಿಸಲಾಗಿತ್ತು ಎಂಬುದು ಗಮನಾರ್ಹ. ಲಾಕ್ ಡೌನ್ ಅ|ಥವಾ ಅರ್ಧ ನಿಯಂತ್ರಣ ಸರಿಯಾದ ಕ್ರಮವಾಗದು ಎಂದು ಸರ್ಕಾರವೇ ಅರಿತುಕೊಂಡಾಗ ನಿರ್ಬಂಧಗಳ ಸಡಿಲಿಕೆ ಮಾಡಲಾಯಿತು. ಈಗ ಸಾಮಾಜಿಕ ಅಂತರ ಮತ್ತು ಮಾಸ್ಕ್ ಹಾಗೂ ಸ್ಯಾನಿಟೈಸರ್ ಮಾತ್ರ ನಿಯಂತ್ರಣದ ಭಾಗವಾಗಿದೆಯಷ್ಟೆ. ಲಸಿಕೆಗಳು ಈ ಹಿಂದಿನ ವೇಗದಲ್ಲಿ ಅಲ್ಲದಿದ್ದರೂ ನಿಧಾನ ಗತಿಯಲ್ಲಿ ಸಾಗುತ್ತಿದೆ.