ಕಾಸರಗೋಡು: ರಾಜ್ಯ ಸರಕಾರದ ಸುವರ್ಣ ವಸತಿ ಸುರಕ್ಷಾ ಯೋಜನೆ ಲೈಫ್ ಮಿಷನ್ ನಲ್ಲಿ ಅರ್ಜಿಗಳ ಅರ್ಹತಾ ತಪಾಸಣೆ ಆರಂಭಗೊಂಡಿದೆ.
2020 ಆಗಸ್ಟ್, 2021 ಪೆಬ್ರವರಿ ತಿಂಗಳಲ್ಲಿ ಲಭಿಸಿದ ಅರ್ಜಿಗಳ ತಪಾಸಣೆ ಈ ವೇಳೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಭೂರಹಿತ ಮನೆಯಿಲ್ಲದವರ 11913 ಅರ್ಜಿಗಳು, ಭೂಮಿಯಿರುವ ಮನೆಯಿಲ್ಲದವರ 25042 ಅರ್ಜಿಗಳು ಸಹಿತ 36955 ಅರ್ಜಿಗಳು ಲಭಿಸಿವೆ. ಅರ್ಹತಾ, ಆದ್ಯತೆ ನಿಬಂಧನೆಗಳಿಗೆ ಸಂಬಂಧಿಸಿ ಸಮಗ್ರ ಮಾರ್ಹಸೂಚಿ ಸರಕಾರ ಪ್ರಕಟಿಸಿದೆ.
ನ.30 ರ ಮುಂಚಿತವಾಗಿ 38 ಗ್ರಾಮ ಪಂಚವಾಯತ್ ಗಳಲ್ಲಿ ಮತ್ತು 3 ನಗರಸಭೆಗಳಲ್ಲಿ ಲೈಫ್ ಯೋಜನೆ ನಿರ್ವಹಣೆ ಸಿಬ್ಬಂದಿ ಅರ್ಜಿದಾರರನ್ನು ಸಂಪರ್ಕಿಸಿ ಅರ್ಹತಾ ತಪಾಸಣೆ ನಡೆಸುವರು. ಸಲ್ಲಿಸಲಾದ ಅರಿಗಳ ಲೋಪದೋಷ ಸರಿಪಿಸಿ ದಾಖಲೆಗಳನ್ನು ಅಪ್ ಲೋಡ್ ನಡೆಸಲು ಕ್ಷೇತ್ರ ತಪಾಸಣೆ ವೇಳೆ ಅವಕಾಶಗಳಿವೆ. ಅರ್ಜಿಯೊಂದಿಗೆ ಸಲ್ಲಿಸಲಾದ ಪಡಿತರ ಚೀಟಿಯಲ್ಲಿ ತಿದ್ದುಪಡಿ ಸಾಧ್ಯವಿರುವುದಿಲ್ಲ. ತಪಾಸಣೆ ನ.30ರಂದು ಪೂರ್ಣಗೊಳ್ಳಲಿದೆ. ಡಿ.1ರಂದು ಕರಡು ಪಟ್ಟಿ ಪ್ರಕಟಿಸಲಾಗುವುದು. ಆಕ್ಷೇಪಗಳಿದ್ದಲ್ಲಿ ಬ್ಲೋಕ್, ಜಿಲ್ಲಾ ಮಟ್ಟದ ಅಪೀಲಿಗೆ ಅವಕಾಶಗಳಿವೆ. ಗ್ರಾಮ/ವಾರ್ಡ್ ಸಭಾ ಮಂಜೂರಾತಿಯ ನಂತರ 2022 ಫೆ.28ರಂದು ಅಂತಿಮ ಫಲಾನುಭವಿ ಪಟ್ಟಿ ಪ್ರಕಟಿಸಲಾಗುವುದು.
ಪಂಚಾಯತ್ ಮಟ್ಟದಲ್ಲಿ ಅತ್ಯಧಿಕ ಕುಂಬಳೆಯಲ್ಲಿ
ಲೈಫ್ ಮಿಷನ್ ಯೋಜನೆಗೆ ಲಭಿಸಿರುವ ಅರ್ಜಿಗಳಲ್ಲಿ ಪಂಚಾಯತ್ ಮಟ್ಟದಲ್ಲಿ ಅತ್ಯಧಿಕ ಅರ್ಜಿಗಳು ಕುಂಬಳೆ ಪಂಚಾಯತ್ ನಲ್ಲಿ ಲಭಿಸಿವೆ. ಜಾಗವಿರುವ ವಸತಿ ಮನೆಗಳಿಲ್ಲದ 811 ಮಂದಿ, ಜಾಗ ರಹಿತ ಮನೆಯಿಲ್ಲದ 810 ಮಂದಿ ಸಹಿತ 1621 ಅರ್ಜಿಗಳು ಪಂಚಾಯತ್ ನಲ್ಲಿ ಲಭಿಸಿವೆ.