ಉನ್ನಾವೋ: ಉತ್ತರ ಪ್ರದೇಶ ರಾಜ್ಯದಲ್ಲಿ ಕೋವಿಡ್ ಲಸಿಕೆಯ ನಕಲಿ ಅಭಿಯಾ ನದ ಬೃಹತ್ ಜಾಲ ಪತ್ತೆಯಾಗಿದೆ. ಸುಮಾರು 3 ಸಾವಿರ ಡೋಸ್‍ಗಳು ಖಾಸಗಿ ಕೆಲಸಗಾರರ ಮನೆಯಲ್ಲಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.
ಉನ್ನಾವೋ ಜಿಲ್ಲೆಯ ಮಿಜಾಂಗಂಜ್ ಪ್ರದೇಶದಲ್ಲಿ ಜಾಲ ಬೆಳಕಿಗೆ ಬಂದಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ಬಹಳಷ್ಟು ಮಂದಿಗೆ ಲಸಿಕೆ ಹಾಕದೆ ನೀವು ಯಶಸ್ವಿಯಾಗಿ ಎರಡನೇ ಡೋಸ್ ಲಸಿಕೆ ಪಡೆದಿದ್ದೀರಾ, ಅಭಿನಂದನೆಗಳು ಎಂಬ ಸಂದೇಶ ರವಾನೆಯಾಗಿದೆ.
ಖಾಸಗಿ ಕೆಲಸಗಾರರ ಮನೆಯಲ್ಲಿ ನಿಗದಿ ಉಷ್ಣಾಂಶವಿಲ್ಲದ ಜಾಗದಲ್ಲಿ ಮೂರು ಸಾವಿರ ಲಸಿಕಾ ಡೋಸ್‍ಗಳನ್ನು ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ದಾಸ್ತಾನು ಮಳಿಗೆಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ರಾಣಿ ಎಂಬವರ ಮನೆಯಲ್ಲಿ ಲಸಿಕೆಗಳು ಪತ್ತೆಯಾಗಿವೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಿಜೆಪಿ ಶಾಸಕ ದಿವಾಕರ್ ಅವರು, ಇದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡವಿದೆ. ಮುಖ್ಯಮಂತ್ರಿ ಗಂಭೀರ ಸ್ವರೂಪದ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದಲ್ಲಿ ಮೊದಲು ಮಹಾರಾಷ್ಟ್ರದಲ್ಲಿ ಈ ರೀತಿಯ ನಕಲಿ ಲಸಿಕಾ ಅಭಿ ಯಾನದ ಜಾಲ ಬೆಳಕಿಗೆ ಬಂದಿತ್ತು. ಅನಂತರ ಸರ್ಕಾರ ಬಿಗಿ ಕ್ರಮ ಕೈಗೊಂಡಿದ್ದರಿಂದ ಎಲ್ಲಿಯೂ ನಕಲು ಮಾಡಲು ಅವಕಾಶ ಇರಲಿಲ್ಲ.