ಇತ್ತೀಚೆಗಷ್ಟೇ ಶತಮಾನದ ಅತಿ ಸುದೀರ್ಘವಾದ ಚಂದ್ರಗ್ರಹಣ ಮುಗಿದಿದೆ. ಇದೀಗ ಈ ವರ್ಷದ ಕೊನೆಯ ಸೂರ್ಯಗ್ರಹಣ ಡಿಸೆಂಬರ್ 4ರಂದು ಘಟಿಸಲಿದೆ. ಇದು ವಿಶ್ವದ ಕೆಲವು ಕಡೆ ಮಾತ್ರ ಕಂಡು ಬರಲಿದೆ.
ಗ್ರಹಣ ಎನ್ನುವುದು ನಭೋಮಂಡಲದಲ್ಲಿ ನಡೆಯುವ ಅನೇಕ ಕೌತುಕ ಘಟನೆಗಳಲ್ಲಿ ಒಂದಾಗಿದೆ. ವಿಜ್ಞಾನಿಗಳು ಆ ಘಟನೆಯನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಜ್ಯೋತಿಷ್ಯವು ಅದನ್ನು ವೈದಿಕ ಶಾಸ್ತ್ರದ ಮೂಲಕ ನೋಡುತ್ತದೆ. ಗ್ರಹಣದಂದು ಏನು ಮಾಡಬಾರದು, ಏನು ಮಾಡಬೇಕು ಎಂದು ಹೇಳಲಾಗಿದೆ. ಅಲ್ಲದೆ ಗ್ರಹಣದ ಪ್ರಭಾವ ಪ್ರತಿಯೊಬ್ಬ ವ್ಯಕ್ತಿ ಹಾಗೂ ದೇಶದ ಮೇಲೆ ಇರುತ್ತದೆ ಎಂದು ಜ್ಯೋತಿಷ್ಯ ಬಲವಾಗಿ ನಂಬುವುದು.
ಸೂರ್ಯಗ್ರಹಣ ಎಂದರೇನು?
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಆಗ ಸೂರ್ಯ ರಶ್ಮಿಯು ಭೂಮಿಗೆ ಬೀಳದೆ ಕತ್ತಲು ಆವರಿಸುತ್ತದೆ. ಇದನ್ನು ಸೂರ್ಯಗ್ರಹಣ ಅಥವಾ ಸೂರ್ಯನಿಗೆ ಗ್ರಹಣ ಹಿಡಿದಿದೆ ಎಂದು ಹೇಳಲಾಗುವುದು.
ಯಾವಾಗ ಸೂರ್ಯಗ್ರಹಣ, ಭಾರತದಲ್ಲಿ ಕಾಣಿಸುವುದಿಲ್ಲ ಏಕೆ?
ಸೂರ್ಯಗ್ರಹಣ UTC ಕಾಲಮಾನದ ಪ್ರಕಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿ ಬೆಳಗ್ಗೆ 08:06ಕ್ಕೆ ಮುಕ್ತಾಯ. ಭಾರತದಲ್ಲಿ ಆವಾಗ ಸಮಯ ರಾತ್ರಿ 12.30, ನಮ್ಮ ಭಾರತೀಯ ಕಾಲಮಾನ 01:36ಕ್ಕೆ ಸೂರ್ಯಗ್ರಹಣ ಮುಕ್ತಾಯ. ಆದ್ದರಿಂದ ಭಾರತದಲ್ಲಿ ಸೂರ್ಯಗ್ರಹಣ ಕಾಣಿಸುವುದಿಲ್ಲ.
ಎಲ್ಲೆಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ?
ದಕ್ಷಿಣ ಅಮೆರಿಕ, ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ನ್ಲಿ ಕಂಡು ಬರಲಿದೆ. ಇದನ್ನು ಬೇಕಾದರೆ ಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾಗಿದೆ.
ಚಂದ್ರಗ್ರಹಣವಾದ ಎರಡು ವಾರದಲ್ಲಿಯೇ ಸೂರ್ಯಗ್ರಹಣ
ನವೆಂಬರ್ 19ಕ್ಕೆ ಚಂದ್ರಗ್ರಹಣವಾಗಿತ್ತು. ಇದಾಗಿ 2 ವಾರಗಳಲ್ಲಿ ಸೂರ್ಯಗ್ರಹಣ ಬಂದಿದೆ.
ಸೂರ್ಯ ಸಾಮಾನ್ಯವಾಗಿ ಚಂದ್ರ ಗ್ರಹಗಿಂತ 400 ಪಟ್ಟು ದೊಡ್ಡದಾಗಿದೆ, ಅಲ್ಲದೆ ಚಂದ್ರನಿಂದ 400 ಪಟ್ಟು ದೂರದಲ್ಲಿದೆ. ಇದರಿಂದ ಸೂರ್ಯ ಹಾಗೂ ಚಂದ್ರ ಒಂದೇ ಗಾತ್ರದಲ್ಲಿ ಇರುವಂತೆ ಭಾಸವಾಗುತ್ತದೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ.
ಅಂದಾಜಿನ ಪ್ರಕಾರ ಪ್ರತೀ 18 ತಿಂಗಳಿಗೊಮ್ಮೆ ಸೂರ್ಯಗ್ರಹಣ ಸಂಭವಿಸುವುದು, ಆದರೆ ಗ್ರಹಣ ಸ್ವಲ್ಪ ಹೊತ್ತು ಮಾತ್ರ ಇರುತ್ತದೆ. ಈ ಬಾರಿಯ ಸುರ್ಯಗ್ರಹಣ 1 ಗಂಟೆ 43 ನಿಮಿಷ ಇರುತ್ತದೆ.
ಸೂರ್ಯಗ್ರಹಣ ನೋಡುವುದು ಹೇಗೆ?
1. ಸೂರ್ಯಗ್ರಹಣವನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಾರದು.
2. ದೂರದರ್ಶಕದಿಂದ ವೀಕ್ಷಿಸಬಹುದು
3. ಬಾಕ್ಸ್ ಪಿನ್‌ರಂಧ್ರ ಮಾಡಿಯೂ ನೋಡಬಹುದು.
* ಶೂ ಬಾಕ್ಸ್ ತೆಗೆದು ಅದರ ಒಂದು ಬದಿ ಚಿಕ್ಕ ರಂಧ್ರ ಮಾಡಿ
* ಬಾಕ್ಸ್‌ನ ಮತ್ತೊಂದು ಬದಿಯ ಒಳಗಡೆ ಬಿಳಿ ಪೇಪರ್ ಅನ್ನು ಟೇಪ್ ಹಾಕಿ ಮಟಿಸಿ.
* ಸೂರ್ಯಗ್ರಹಣ ಪೇಪರ್‌ನ ಮೇಲೆ ಬೀಳುವುದನ್ನು ವೀಕ್ಷಿಸಲು ಬಾಕ್ಸ್‌ನ ಕೆಳಗಡೆ ಚಿಕ್ಕ ರಂಧ್ರ ಮಾಡಿ.
* ಈಗ ಸೂರ್ಯನಿಗೆ ಬೆನ್ನು ಮಾಡಿ ನಿಂತುಕೊಳ್ಳಿ. ಈಗ ಬಾಕ್ಸ್ ಅನ್ನು ಒಂದು ರಂಧ್ರ ಮಾಡಿದ ಕಡೆ ಸೂರ್ಯನ ಕಡೆಗೆ ಇರುವಂತೆ ನಿಮ್ಮ ತಲೆ ಮೇಲೆ ಹಿಡಿದು ಬಾಕ್ಸ್‌ನ ಒಳಗಡೆ ನೋಡಿದರೆ ಬಿಳಿಯಾದ ಪೇಪರ್‌ನಲ್ಲಿ ಸೂರ್ಯಗ್ರಹಣವನ್ನು ವೀಕ್ಷಿಸಬಹುದು.