ದುಬೈ: ಭಾರತಕ್ಕೆ ಎಸ್- 400 ಕ್ಷಿಪಣಿ ನಿರೋಧಕ ವ್ಯವಸ್ಥೆ ಪೂರೈಕೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಷ್ಯಾ ಸರ್ಕಾರ ಹೇಳಿದೆ. ಪೂರೈಕೆ ಪ್ರಕ್ರಿಯೆ ಯೋಜಿಸಿದಂತೆ ನಡೆಯುತ್ತಿವೆ ಎಂದು ರಷ್ಯಾದ ಸೇನಾ-ತಾಂತ್ರಿಕ ಸಹಕಾರ ಕುರಿತ ಫೆಡರಲ್ ಸೇವೆ (ಎಫ್ ಎಸ್ ಎಂ ಟಿ ಸಿ)ಗಳ ನಿರ್ದೇಶಕ ಡಿಮಿಟ್ರಿ ಶುಗೇವ್ ದುಬೈ ಏರ್‌ಶೋಗೆ ಮುನ್ನ "ಸ್ಪುಟ್ನಿಕ್"ಗೆ ತಿಳಿಸಿದ್ದಾರೆ.
ಭಾರತಕ್ಕೆ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಗಳ ಸರಬರಾಜು ಪ್ರಾರಂಭವಾಗಿದ್ದು, ನಿಗದಿತ ವೇಳಾಪಟ್ಟಿಯಂತೆ ಮುಂದುವರಿಯುತ್ತಿದೆ ಎಂದು ಶುಗೇವ್ ಹೇಳಿದರು.
ಈಗಾಗಲೇ ಚೀನಾ, ಟರ್ಕಿಯಲ್ಲಿ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ಸೇವೆಗೆ ಪ್ರವೇಶಿಸಿದೆ. 2018 ಅಕ್ಟೋಬರ್ ನಲ್ಲಿ ರಷ್ಯಾ ಹಾಗೂ ಭಾರತ ಎಸ್-400 ಪೂರೈಕೆ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದವು.