ತಿರುವನಂತಪುರ: ರಾಜ್ಯದಲ್ಲಿ ಇಂದು 4677 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 823, ತಿರುವನಂತಪುರ 633, ಕೋಝಿಕ್ಕೋಡ್ 588, ತ್ರಿಶೂರ್ 485, ಕೊಟ್ಟಾಯಂ 369, ಕೊಲ್ಲಂ 330, ಕಣ್ಣೂರು 295, ಪಾಲಕ್ಕಾಡ್ 208, ಪತ್ತನಂತಿಟ್ಟ 202, ವಯನಾಡ್ 202, ಮಲಪ್ಪುರಂ 162, ಇಡುಕ್ಕಿ 150, ಆಲಪ್ಪುಳ 144, ಕಾಸರಗೋಡು 86 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 56,558 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆಯ ಅನುಪಾತ 10 ಕ್ಕಿಂತ ಹೆಚ್ಚಿನ 19 ಸ್ಥಳೀಯಾಡಳಿತ ಪ್ರದೇಶಗಳಲ್ಲಿ 21 ವಾರ್ಡ್ ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,69,347 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 1,64,542 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 4805 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 285 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ 49,459 ಕರೋನಾ ಪ್ರಕರಣಗಳಲ್ಲಿ, ಕೇವಲ 7.2 ಪ್ರತಿಶತದಷ್ಟು ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 33 ಮಂದಿ ಕೋವಿಡ್ ಬಾಧಿಸಿ ಮೃತರಾಗಿದ್ದಾರೆ. ಅಲ್ಲದೆ ಸುಪ್ರೀಂ ಕೋರ್ಟ್ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 355 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 39,125ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 16 ಮಂದಿ ಹೊರ ರಾಜ್ಯದವರು. 4320 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 308 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 33 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪತ್ತೆಯಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 6632 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 812, ಕೊಲ್ಲಂ 748, ಪತ್ತನಂತಿಟ್ಟ 312, ಆಲಪ್ಪುಳ 136, ಕೊಟ್ಟಾಯಂ 786, ಇಡುಕ್ಕಿ 290, ಎರ್ನಾಕುಳಂ 947, ತ್ರಿಶೂರ್ 695, ಪಾಲಕ್ಕಾಡ್ 285, ಮಲಪ್ಪುರಂ 160, ಕೋಝಿಕ್ಕೋಡ್ 772, ವಯನಾಡ್ 182, ಕಣ್ಣೂರು 437, ಕಾಸರಗೋಡು 70 ಎಂಬಂತೆ ಕೋವಿಡ್ ನಿಂದ ಮುಕ್ತರಾಗಿದ್ದಾರೆ. ಇದರೊಂದಿಗೆ 49,459 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 50,35,384 ಮಂದಿ ಜನರು ಕೊರೋನಾದಿಂದ ಮುಕ್ತರಾಗಿದ್ದಾರೆ.