ತಿರುವನಂತಪುರ: ರಾಜ್ಯದಲ್ಲಿ ಇಂದು 4972 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತಿರುವನಂತಪುರ 917, ತ್ರಿಶೂರ್ 619, ಕೋಝಿಕ್ಕೋಡ್ 527, ಕೊಟ್ಟಾಯಂ 476, ಎರ್ನಾಕುಳಂ 469, ಕೊಲ್ಲಂ 383, ಕಣ್ಣೂರು 291, ಪಥನಂತಿಟ್ಟ 270, ಪಾಲಕ್ಕಾಡ್ 238, ವಯನಾಡ್ 212, ಇಡುಕ್ಕಿ 206, ಅಲಪ್ಪುಳ 169, ಮಲಪ್ಪುರಂ 135, ಕಾಸರಗೋಡು 60 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 60,265 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆಯ ಅನುಪಾತ (WIPR) 10 ಕ್ಕಿಂತ ಹೆಚ್ಚಿನ 39 ಸ್ಥಳೀಯಾಡಳಿತ ಪ್ರದೇಶಗಳಲ್ಲಿ 46 ವಾರ್ಡ್ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,84,581 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 1,79,531 ಮಂದಿ ಮನೆ/ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 5,050 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 376 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ 52,710 ಕೊರೋನಾ ಪ್ರಕರಣಗಳಲ್ಲಿ, ಕೇವಲ 7.4 ಪ್ರತಿಶತದಷ್ಟು ಜನರು ಆಸ್ಪತ್ರೆ /ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ
57 ಮಂದಿ ಮೃತರಾಗಿದ್ದಾರೆ. ಇದಲ್ಲದೆ, 313 ಸಾವುಗಳು ವರದಿಯಾಗಿದ್ದು, ಸುಪ್ರೀಂ ಕೋರ್ಟ್ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 38,045ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 17 ಮಂದಿ ಹೊರ ರಾಜ್ಯದವರು. 4576 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 344 ಮಂದಿಯ ಸಂಪರ್ಕ ಮೂಲವು ಸ್ಪಷ್ಟವಾಗಿಲ್ಲ. ಮೂವತ್ತೈದು ಆರೋಗ್ಯ ಕಾರ್ಯಕರ್ತರಿಗೆ ಇಂದು ಕೋವಿಡ್ ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5978 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 921, ಕೊಲ್ಲಂ 353, ಪತ್ತನಂತಿಟ್ಟ 508, ಆಲಪ್ಪುಳ 229, ಕೊಟ್ಟಾಯಂ 264, ಇಡುಕ್ಕಿ 89, ಎರ್ನಾಕುಳಂ 1064, ತ್ರಿಶೂರ್ 514, ಪಾಲಕ್ಕಾಡ್ 330, ಮಲಪ್ಪುರಂ 191, ಕೋಝಿಕ್ಕೋಡ್ 729, ವಯನಾಡ್ 262, ಕಣ್ಣೂರು 376, ಕಾಸರಗೋಡು 148 ಎಂಬಂತೆ ಗುಣಮುಖರಾಗಿದ್ದಾರೆ.