HEALTH TIPS

ಅಮೆರಿಕಾದಲ್ಲಿ 5 - 11 ವರ್ಷದೊಳಗಿನ ಮಕ್ಕಳಿಗೆ ಕೊವಿಡ್-19 ಲಸಿಕೆ ನೀಡಲು ಅನುಮೋದನೆ

                  ವಾಶಿಂಗ್ಟನ್: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಅತಿಹೆಚ್ಚು ನಲುಗಿದ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಗುರುತುಸಿಕೊಂಡಿರುವುದೇ ವಿಶ್ವದ ದೊಡ್ಡಣ್ಣ ಅಮೆರಿಕಾ. ಶುಕ್ರವಾರ ಅದೇ ಅಮೆರಿಕಾದಲ್ಲಿ 5 ರಿಂದ 11 ವರ್ಷದ ಮಕ್ಕಳಿಗೆ ಕೊವಿಡ್-19 ಲಸಿಕೆ ವಿತರಿಸಲು ಅನುಮೋದನೆ ನೀಡಲಾಗಿದೆ.

                  ಯುನೈಟೆಡ್ ಸ್ಟೇಟ್ಸ್ ಸರ್ಕಾರವು ಫೈಜರ್ ಕಂಪನಿಯ ಕೊರೊನಾವೈರಸ್ ಲಸಿಕೆಯನ್ನು 5 ರಿಂದ 11 ವಯೋಮಾನದ ಮಕ್ಕಳಿಗೆ ವಿತರಿಸುವುದಕ್ಕೆ ಅನುಮತಿ ನೀಡಿದೆ. ಸರ್ಕಾರದ ನಿರ್ಧಾರದಿಂದ ಈ ವಯೋಮಾನದ 28 ದಶಲಕ್ಷ ಮಕ್ಕಳು ಮತ್ತು ಯುವಕರಿಗೆ ಲಸಿಕೆ ಪಡೆದುಕೊಳ್ಳುವ ಅವಕಾಶವಿದೆ.
              ಯುಎಸ್ ಸರ್ಕಾರಕ್ಕೆ ಸಲಹೆ ನೀಡುವ ಉನ್ನತ ಮಟ್ಟದ ವೈದ್ಯಕೀಯ ಸಮಿತಿಯ ಅನುಮೋದನೆ ನಂತರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಫೈಜರ್ ಲಸಿಕೆಯನ್ನು ನೀಡುವುದರಿಂದ ಅಡ್ಡಪರಿಣಾಮ ಮತ್ತು ಅಪಾಯಕ್ಕಿಂತ ಪ್ರಯೋಜನಗಳು ಹೆಚ್ಚಾಗಿವೆ ಎಂದು ತಿಳಿದು ಬಂದಿದೆ.
                 18 ವರ್ಷದೊಳಗಿನವರಿಗೆ ಲಸಿಕೆ ವಿತರಣೆ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೊದಲ ಅಲೆ 60 ವರ್ಷ ಮೇಲ್ಪಟ್ಟವರಿಗೆ, ಎರಡನೇ ಅಲೆ 30 ರಿಂದ 60 ವರ್ಷದೊಳಗಿನವರಿಗೆ ಹಾಗೂ ಮೂರನೇ ಅಲೆಯು 18 ವರ್ಷದೊಳಗಿನ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಬಹುತೇಕ ರಾಷ್ಟ್ರಗಳಲ್ಲಿ ಕೊವಿಡ್-19 ಲಸಿಕೆಗಳ ವಿತರಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವಲ್ಲಿ ಕೆಲವೇ ಕೆಲವು ರಾಷ್ಟ್ರಗಳು ಮಾತ್ರ ಅನುಮೋದನೆ ನೀಡಿದೆ. ಯುನೈಟೆಡ್ ಸ್ಟೇಟ್ಸ್, ಚೀನಾ, ಚಿಲಿ ಮತ್ತು ಕ್ಯೂಬಾದಂತಹ ಬೆರಳೆಣಿಕೆಯಷ್ಟು ರಾಷ್ಟ್ರಗಳಲ್ಲಿ ಮಾತ್ರ 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ಲಸಿಕೆ ವಿತರಣೆಗೆ ಅನುಮತಿ ನೀಡಲಾಗಿದೆ.
                   ಪೋಷಕರ ನಿರೀಕ್ಷೆಯಂತೆ ಮಕ್ಕಳಿಗೆ ಕೊವಿಡ್-19 ಲಸಿಕೆ: "ತಾಯಿಯಾಗಿ ಮತ್ತು ವೈದ್ಯರಾಗಿ, ಪೋಷಕರು, ಆರೈಕೆ ಮಾಡುವವರು, ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಇಂದಿನ ಅನುಮೋದನೆಗಾಗಿ ಎದುರು ನೋಡುತ್ತಿದ್ದಾರೆ ಎಂಬುದನ್ನು ನಾನು ಅರಿತುಕೊಂಡಿದ್ದೇನೆ," ಎಂದು ಆಹಾರ ಮತ್ತು ಔಷಧ ಆಡಳಿತದ ಕಾರ್ಯನಿರ್ವಾಹಕ ಮುಖ್ಯಸ್ಥ ಜಾನೆಟ್ ವುಡ್‌ಕಾಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಕೊವಿಡ್-19 ವಿರುದ್ಧ 5 ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡುವುದರ ಮೂಲಕ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ," ಎಂದು ಉಲ್ಲೇಖಿಸಿದ್ದಾರೆ.
                  ಮಕ್ಕಳಿಗೆ ಲಸಿಕೆ ವಿತರಣೆ ಯಾವಾಗ ಪ್ರಾರಂಭ?: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಕೊರೊನಾವೈರಸ್ ಲಸಿಕೆ ವಿತರಿಸುವುದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಸಮಿತಿ ಶಿಫಾರಸ್ಸುಗಳ ಬಗ್ಗೆ ಮತ್ತೊಂದು ಹಂತದಲ್ಲಿ ಚರ್ಚೆ ನಡೆಸಲಾಗುತ್ತದೆ. ಮಂಗಳವಾರ ಸಮಿತಿ ಶಿಫಾರಸ್ಸು ಸಂಬಂಧ ಚರ್ಚಿಸುವುದಕ್ಕೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ(CDC)ವು ಸಭೆ ಕರೆಯಲಾಗಿದ್ದು, ತದನಂತರದಲ್ಲಿ ಲಸಿಕೆ ವಿತರಣೆ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ. ಫೈಜರ್ ಮತ್ತು ಅದರ ಪಾಲುದಾರ ಬಯೋಎನ್‌ಟೆಕ್ ಸಂಸ್ಥೆಗಳಿಂದ ಈ ವಾರದಲ್ಲಿ ಯುಎಸ್ ಸರ್ಕಾರವು 50 ಮಿಲಿಯನ್ ಹೆಚ್ಚಿನ ಕೊರೊನಾವೈರಸ್ ಲಸಿಕೆಯ ಡೋಸ್‌ಗಳನ್ನು ಖರೀದಿಸಿರುವ ಬಗ್ಗೆ ಘೋಷಿಸಿದೆ. ಈ ಲಸಿಕೆಯನ್ನು ಐದು ವರ್ಷದೊಳಗಿನ ಮಕ್ಕಳಿಗೆ ನೀಡುವುದಕ್ಕೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.
                 ಶೇ.90ರಷ್ಟು ಪರಿಣಾಮಕಾರಿ ಆಗಿರುವ ಲಸಿಕೆ ಫೈಜರ್ ಲಸಿಕೆ ಪರಿಣಾಮವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ನಡೆಸಿದ ವೈದ್ಯಕೀಯ ಪ್ರಯೋಗಗಳಲ್ಲಿ 2,000 ಮಕ್ಕಳನ್ನು ಬಳಸಿಕೊಳ್ಳಲಾಗಿತ್ತು. ಈ ವೇಳೆ ಲಸಿಕೆಯು ಮಕ್ಕಳ ಮೇಲೆ ಶೇ.90ರಷ್ಟು ಪರಿಣಾಮಕಾರಿ ಆಗಿದೆ ಎಂದು ಗೊತ್ತಾಗಿದ್ದು, ರೋಗದ ಲಕ್ಷಣಗಳಿಂದ ಮಕ್ಕಳನ್ನು ರಕ್ಷಿಸುತ್ತದೆ ಎಂದು ತಿಳಿದು ಬಂದಿದೆ. ಇದರ ಜೊತೆ ಲಸಿಕೆಯ ಸುರಕ್ಷತೆಗೆ ಸಂಬಂಧಿಸಿದಂತೆ 3,000 ಮಕ್ಕಳ ಮೇಲೆ ಪ್ರಯೋಗ ನಡೆಸಲಾಗಿದ್ದು, ಲಸಿಕೆಯಿಂದ ಯಾವುದೇ ರೀತಿ ಅಡ್ಡ ಪರಿಣಾಮ ಅಥವಾ ಅಪಾಯ ಇಲ್ಲ ಎಂಬುದು ಗೊತ್ತಾಗಿದೆ.
                ಮಕ್ಕಳಿಗೆ ನೀಡುವ ಎರಡು ಡೋಸ್ ಲಸಿಕೆ ನಡುವಿನ ಅಂತರ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ನೀಡುವ ಕೊವಿಡ್-19 ಲಸಿಕೆಯ ಎರಡು ಡೋಸ್ ನೀಡಲಾಗುತ್ತದೆ. 10 ಮಕ್ರೋಗ್ರಾಮ್ಸ್ ನ ಎರಡು ಡೋಸ್ ಲಸಿಕೆಯ ನಡುವೆ ಮೂರು ವಾರಗಳ ಅಂತರವಿರಬೇಕು. ವಯಸ್ಕರ ರೀತಿಯಲ್ಲಿ ಮಕ್ಕಳಿಗೆ ಕೊರೊನಾವೈರಸ್ ಸೋಂಕು ತೀವ್ರವಾಗಿ ಕಾಣಿಸಿಕೊಳ್ಳುವುದಿಲ್ಲ. ಸಿಡಿಸಿ ಪ್ರಕಾರ, ಕೊವಿಡ್-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ 5 ರಿಂದ 11 ವರ್ಷ ವಯಸ್ಸಿನ 8,300 ಮಕ್ಕಳು ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದು, 146 ಮಕ್ಕಳು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಮಕ್ಕಳಲ್ಲಿ ಮಲ್ಟಿಸಿಸ್ಟಮ್ ಉರಿಯೂತದ ಸಿಂಡ್ರೋಮ್‌ನ (MIS-C) 5,000 ಕ್ಕೂ ಹೆಚ್ಚು ಪೀಡಿಯಾಟ್ರಿಕ್ ಪ್ರಕರಣಗಳು ಕಂಡುಬಂದಿವೆ. ಇದು ಅಪರೂಪದ ವೈರಲ್ ಸೋಂಕಾಗಿದ್ದು, ಸೋಂಕಿನ ತೀವ್ರತೆ ಹೆಚ್ಚಾದ ಹಿನ್ನೆಲೆ 46 ಮಕ್ಕಳು ಸಾವನ್ನಪ್ಪಿದ್ದಾರೆ. ಕೊವಿಡ್-19 ಬಗ್ಗೆ ಯುಎಸ್ ಸುರಕ್ಷತಾ ಕ್ರಮಗಳು ಮಯೋಕಾರ್ಡಿಟಿಸ್ ಮತ್ತು ಪೆರಿಕಾರ್ಡಿಟಿಸ್ (ಹೃದಯದ ಉರಿಯೂತ ಮತ್ತು ಹೃದಯದ ಸುತ್ತ ಉರಿಯೂತ) ರೀತಿಯ ಅತ್ಯಂತ ಅಪರೂಪದ ಅಡ್ಡ ಪರಿಣಾಮಗಳ ಬಗ್ಗೆ ಆರೋಗ್ಯ ಅಧಿಕಾರಿಗಳು ಮೇಲ್ವಿಚಾರಣೆ ಮುಂದುವರಿಸಿದ್ದಾರೆ. ವೈದ್ಯಕೀಯ ಪ್ರಯೋಗಗಳು ಇವುಗಳ ಪತ್ತೆಗೆ ತುಂಬಾ ಸರಳವಾಗಿವೆ. ಊಹೆಯ ಪ್ರಕಾರ ಅವುಗಳು ಪರಿಣಾಮವು ಟೆಸ್ಟೋಸ್ಟೆರಾನ್ ಮಟ್ಟಗಳಿಗೆ ಸಂಬಂಧಿಸಿದ್ದು, ಅತ್ಯಂತ ಅಪರೂಪ ಆಗಿರುತ್ತವೆ ಎಂದು ಭಾವಿಸಲಾಗಿದೆ. ಮೊದಲ ಡೋಸ್ ಹೆಚ್ಚು ಪರಿಣಾಮ ಬೀರಿರುವ ಯುವಕರ ಪ್ರಮಾಣ ಅಲ್ಪ ಪ್ರಮಾಣದಲ್ಲಿದೆ. 
              ಕೊವಿಡ್-19 ಸಂಬಂಧಿತ mRNA ಲಸಿಕೆಯ ಎರಡೂ ಡೋಸ್ ಲಸಿಕೆ ಪಡೆದವರಿಗೆ ಹೆಚ್ಚು ಪರಿಣಾಮಕಾರಿ ಎಂದು ಗೊತ್ತಾಗುತ್ತಿದೆ. ಕೋವಿಡ್ ಸ್ವತಃ ಮಯೋಕಾರ್ಡಿಟಿಸ್‌ನ ಹೆಚ್ಚು ತೀವ್ರ ಸ್ವರೂಪಗಳಿಗೆ ಕಾರಣವಾಗಬಹುದು, ಏಕೆಂದರೆ ಸಮುದಾಯದೊಳಗೆ ಸೋಂಕು ಹರಡುವ ಪ್ರಮಾಣವನ್ನು ಇದು ಅವಲಂಬಿಸಿರುತ್ತದೆ. ಮಕ್ಕಳು ಸ್ವತಃ ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವುದರ ಹೊರತಾಗಿ ಲಸಿಕೆ ವಿತರಣೆ ಮಾಡಬೇಕಿದೆ. ಆ ಮೂಲಕ ಮಕ್ಕಳಿಗೆ ಸಂಬಂಧಿಸಿದಂತೆ ಶಾಲಾ ಹಾಗೂ ಇತರ ಚಟುವಟಿಕೆಗಳಿಗೆ ಅಡ್ಡಿಪಡಿಸದಿರಲು ಸಾಧ್ಯವಾಗುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳುತ್ತಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries