HEALTH TIPS

ಫೆಬ್ರವರಿ ವೇಳೆಗೆ ಯುರೋಪ್ ರಾಷ್ಟ್ರಗಳಲ್ಲಿ 5 ಲಕ್ಷ ಜನರನ್ನು ಬಲಿ ತೆಗೆದುಕೊಳ್ಳಲಿದೆ ಕೊರೊನಾವೈರಸ್!

                ಕೋಪನ್ ಹ್ಯಾಗನ್: ಯುರೋಪ್‌ನಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ಮತ್ತು ಸಾವಿನ ಪ್ರಕರಣಗಳ ವೇಗ ಹೆಚ್ಚಿದೆ. 2022ರ ಆರಂಭದ ವೇಳೆಗೆ ಯುರೋಪ್ ರಾಷ್ಟ್ರಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ಇದೇ ಕೊವಿಡ್-19 ಸೋಂಕಿನಿಂದ ಪ್ರಾಣ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

               "ಯುರೋಪಿಯನ್ ಪ್ರದೇಶದ 53 ದೇಶಗಳಲ್ಲಿ ಪ್ರಸ್ತುತ ಕೊರೊನಾವೈರಸ್ ಸೋಂಕಿನ ಹರಡುವಿಕೆ ವೇಗವು ತೀವ್ರ ಕಳವಳಕಾರಿಯಾಗಿದೆ" ಎಂದು WHO ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲೂಗೆ ಹೇಳಿದ್ದಾರೆ. ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರಿದರೆ ಫೆಬ್ರವರಿ ವೇಳೆಗೆ "ಮತ್ತೊಂದು ಅರ್ಧ ಮಿಲಿಯನ್ COVID-19 ಸಾವಿನ ಪ್ರಕರಣಗಳು" ವರದಿಯಾಗಲಿವೆ ಎಂದು ತಿಳಿಸಿದ್ದಾರೆ.

                ಯುರೋಪಿಯನ್ ಪ್ರದೇಶವು 53 ದೇಶಗಳು ಮತ್ತು ಪ್ರಾಂತ್ಯಗಳನ್ನು ವ್ಯಾಪಿಸಿದೆ. ಇದರ ಜೊತೆಗೆ ಮಧ್ಯ ಏಷ್ಯಾದ ಹಲವಾರು ರಾಷ್ಟ್ರಗಳನ್ನು ಒಳಗೊಂಡಿದ್ದು, ಈ ದೇಶಗಳಲ್ಲಿ ಕೊವಿಡ್-19 ಹರವುವಿಕೆ ಮತ್ತು ತೀವ್ರತೆ ಅಪಾಯ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.
            ಯುರೋಪಿಯನ್ ರಾಷ್ಟ್ರಗಳ ಕೊವಿಡ್-19 ಕಥೆ: ಯುರೋಪಿಯನ್ ರಾಷ್ಟ್ರಗಳಲ್ಲಿ ಕಳೆದೊಂದೇ ದಿನದಲ್ಲಿ 2,38,321 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 3,436 ಮಂದಿ ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಟ್ಟಿದ್ದು, 1,53,044 ಸೋಂಕಿತರು ಗುಣಮುಖರಾಗಿದ್ದಾರೆ. ಯುರೋಪ್ ರಾಷ್ಟ್ರಗಳಲ್ಲಿ ಈವರೆಗೂ ಒಟ್ಟು 6,54,39,184 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 5,86,91,400 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೂ ಯುರೋಪಿಯನ್ ದೇಶದಲ್ಲಿ 13,16,517 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಇದರ ಹೊರತಾಗಿ 54,31,267 ಸಕ್ರಿಯ ಪ್ರಕರಣಗಳಿವೆ. ಅಪಾಯ ಎದುರಿಸುತ್ತಿರುವ ಟಾಪ್-5 ರಾಷ್ಟ್ರಗಳು: ಒಟ್ಟು 53 ಯುರೋಪಿಯನ್ ರಾಷ್ಟ್ರಗಳ ಪಟ್ಟಿಯಲ್ಲಿ ಕೊರೊನಾವೈರಸ್ ಸೋಂಕಿನಿಂದ ಜಗತ್ತಿನ ಬಲಿಷ್ಠ ರಾಷ್ಟ್ರಗಳೇ ಹೆಚ್ಚು ಅಪಾಯವನ್ನು ಎದುರಿಸುತ್ತಿವೆ. ಕೊವಿಡ್-19 ಸೋಂಕಿನಿಂದ ಅತಿಹೆಚ್ಚು ಅಪಾಯ ಎದುರಿಸುತ್ತಿರುವ ಟಾಪ್-5 ಪಟ್ಟಿಯಲ್ಲಿ ಯುನೈಟೆಡ್ ಕಿಂಗ್ ಡಮ್, ರಷ್ಯಾ, ಫ್ರಾನ್ಸ್, ಸ್ಪೇನ್ ಮತ್ತು ಇಟಲಿ ಗುರುತಿಸಿಕೊಂಡಿವೆ. ಈ ರಾಷ್ಟ್ರಗಳಲ್ಲೇ ಅತಿಹೆಚ್ಚು ಹೊಸ ಪ್ರಕರಣಗಳ ಜೊತೆಗೆ ಸಾವಿನ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries