ಕರೊನಾ ಉಗಮದ ವಿಚಾರದಲ್ಲಿ ವಿಶ್ವದೇಶಗಳ ಆಕ್ರೋಶಕ್ಕೆ ತುತ್ತಾಗಿರುವ ಚೀನಾದ ಇಮೇಜ್ ಕುಸಿಯುತ್ತಲೇ ಸಾಗಿದೆ. ಆ ದೇಶದ ಕುತಂತ್ರಗಳು ಮತ್ತು ಕಿತಾಪತಿಗಳು ಒಂದೊಂದಾಗಿ ಬಯಲಾಗುತ್ತಲೇ ಇದ್ದು, ಉಯ್ಘರ್ ಮತ್ತಿತರ ಅಲ್ಪಸಂಖ್ಯಾತ ಸಮುದಾಯದವರ ಅಂಗಾಂಗಗಳನ್ನು ಮಾರಾಟ ಮಾಡಿ ಹಣಮಾಡುತ್ತಿರುವ ಆರೋಪ ಕೇಳಿಬಂದಿದೆ.
ನವದೆಹಲಿ: ಈ ಸಾರಿ ದೀಪಾವಳಿಯ ಮಾರಾಟಕ್ಕೆ ವರ್ತಕರು ಚೀನಾ ಸರಕನ್ನು ಬಹಿಷ್ಕರಿಸಿದ್ದು, ಆತ್ಮನಿರ್ಭರ ಭಾರತದ ಆಶಯಕ್ಕೆ ಒತ್ತು ನೀಡಿದ್ದಾರೆ. ಇದರಿಂದ ಚೀನಾಕ್ಕೆ 50 ಸಾವಿರ ಕೋಟಿ ರೂಪಾಯಿ ಮೌಲ್ಯದ ನಷ್ಟವಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಚೀನಾದಲ್ಲಿ ತಯಾರಿಕೆಯಾದ ಪಟಾಕಿ, ಸಿಡಿಮದ್ದಿಗೆ ಸಂಬಂಧಿಸಿದ ಇನ್ನಿತರ ಕಡಿಮೆ ಬೆಲೆಯ ಸಾಮಗ್ರಿಗಳನ್ನು ಅಖಿಲ ಭಾರತ ವರ್ತಕರ ಮಹಾಒಕ್ಕೂಟ (ಸಿಎಐಟಿ) ಬಹಿಷ್ಕರಿಸಿದೆ. ಇದರಿಂದ ದೇಶೀಯವಾಗಿ ತಯಾರಿಸಲಾದ ಸರಕು ಮಾರುಕಟ್ಟೆಗೆ ಬಂದಿದೆ. ಹೀಗಾಗಿ ದೇಶೀಯ ಸಾಮಗ್ರಿಗಳ ಮಾರಾಟ ಹೆಚ್ಚಳವಾಗಿದೆ. ಅಂದಾಜಿನಂತೆ ದೀಪಾವಳಿಯ ಸಂದರ್ಭದಲ್ಲಿ ಜನರು 2 ಲಕ್ಷ ಕೋಟಿ ರೂಪಾಯಿಗಳಷ್ಟು ವೆಚ್ಚ ಮಾಡುತ್ತಾರೆ ಎಂದು ಹೇಳಲಾಗಿದೆ. ಈಗ ಇಷ್ಟೂ ಮೊತ್ತದ ದೇಶೀಯ ಸರಕು ಬಿಕರಿ ಆಗಲಿದೆ.
ಈಗ ದೇಶದ ಪ್ರಮುಖ ನಗರಗಳಲ್ಲಿ ಜನರು ಹೆಚ್ಚು ಜಾಗೃತರಾಗಿದ್ದಾರೆ. ಸರಕನ್ನು ಖರೀದಿಸುವುದಕ್ಕೂ ಮುನ್ನ ಅದು ಯಾವ ದೇಶದಲ್ಲಿ ತಯಾರಾಗಿದೆ, ಕಂಪನಿಯ ಮೂಲ ದೇಶ ಯಾವುದು ಎಂಬು ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದಾರೆ. ಇದರಿಂದಲೂ ಚೀನಾ ಸರಕಿನ ಮಾರಾಟಕ್ಕೆ ಹಿನ್ನಡೆಯಾಗಿದೆ ಮತ್ತು ದೇಶೀಯ ಸರಕಿಗೆ ಬೇಡಿಕೆ ಹೆಚ್ಚಿದೆ ಎಂಬ ಅಂಶ ಬೆಂಗಳೂರು ಸೇರಿದಂತೆ ದೇಶದ 20 ಪ್ರಮುಖ ನಗರಗಳಲ್ಲಿ ನಡೆಸಿದ ಸಮೀೆಯಿಂದ ತಿಳಿದುಬಂದಿದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವಿಣ್ ಖಂಡೆವಾಲ್ ಹೇಳಿದ್ದಾರೆ. ರಾಖಿ ಹಬ್ಬದಿಂದ ಹೊಸ ವರ್ಷದವರೆಗಿನ ಅವಧಿಯಲ್ಲಿ ಭಾರತೀಯ ವರ್ತಕರು ಅಂದಾಜು 70 ಸಾವಿರ ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಾರೆ. ಆದರೆ ಈ ವರ್ಷ ರಾಖಿ ಸೀಸನ್ನಲ್ಲಿ ಚೀನಾಕ್ಕೆ 5 ಸಾವಿರ ಕೋಟಿ ರೂ. ಹಾಗೂ ಗಣೇಶ ಹಬ್ಬದ ಸಂದರ್ಭದಲ್ಲಿ 500 ಕೋಟಿ ರೂ. ನಷ್ಟವಾಗಿದೆ ಎನ್ನಲಾಗಿದೆ.
ಕಳೆದ ವರ್ಷದಂತೆ ಈ ವರ್ಷವೂ ಚೀನಾದ ದೀಪಾವಳಿ ಸರಕನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಚೀನಾ ಸಾಮಗ್ರಿಗಳ ಆಮದು ಸ್ಥಗಿತವಾಗುವ ಕಾರಣ ಆ ರಾಷ್ಟ್ರಕ್ಕೆ 50 ಸಾವಿರ ಕೋಟಿ ರೂಪಾಯಿ ನಷ್ಟವಾಗುವ ಸಾಧ್ಯತೆಯಿದೆ.
ಇಟಾನಗರ: ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ ಜಿಲ್ಲೆಯ ಸೆಪ್ಪಾ ಗ್ರಾಮದಲ್ಲಿ ಕಮೆಂಗ್ ನದಿಯ ನೀರು ಕಪು$್ಪ ಬಣ್ಣಕ್ಕೆ ತಿರುಗಿದ್ದು, ಸಾವಿರಾರು ಮೀನುಗಳು ಸತ್ತಿವೆ. ನೀರು ಕಲುಷಿತವಾಗಿರುವ ಕಾರಣ ಹೀಗಾಗಿದ್ದು, ಮೀನುಗಳನ್ನು ತಿನ್ನಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಕರಗುವಂತಹ ವಿಷಕಾರಿ ವಸ್ತುವಿನ (ಟಿಡಿಎಸ್) ಅಂಶ ಮಿತಿಮೀರಿದ ಪ್ರಮಾಣದಲ್ಲಿ ಇರುವ ಕಾರಣ ಮೀನುಗಳು ಅಪಾರ ಸಂಖ್ಯೆಯಲ್ಲಿ ಸಾವನ್ನಪ್ಪಿವೆ. ಟಿಡಿಎಸ್ ಸಾಂದ್ರತೆ ಹೆಚ್ಚಿದ್ದ ಕಾರಣ ಮೀನುಗಳಿಗೆ ಗೋಚರ ಶಕ್ತಿ ಣಿಸಿತು ಎಂದು ರಾಜ್ಯ ಮೀನುಗಾರಿಕಾ ಇಲಾಖೆ ಹೇಳಿದೆ.
ಸಾಮಾನ್ಯವಾಗಿ ಪ್ರತಿ ಲೀಟರ್ ನೀರಿನಲ್ಲಿ ಟಿಡಿಎಸ್ ಪ್ರಮಾಣ 300ರಿಂದ 1,200 ಎಂಜಿ ಇರಬೇಕು. ಆದರೆ, ಕಮೆಂಗ್ ನದಿ ನೀರಿನಲ್ಲಿ ಈ ಪ್ರಮಾಣ 6,800 ಎಂಜಿ ಇತ್ತು. ಟಿಡಿಎಸ್ ಪ್ರಮಾಣ ಇದೇ ರೀತಿ ಮುಂದುವರಿದರೆ ಎಲ್ಲ ಮೀನುಗಳೂ ಸಾಯುತ್ತವೆ ಎಂದು ಜಿಲ್ಲಾ ಮೀನುಗಾರಿಕೆ ಅಧಿಕಾರಿ ಹಲಿ ತಾಜೊ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ, ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಲು ಚೀನಾ ಕಾರಣ ಎಂದು ಸೆಪ್ಪಾ ಗ್ರಾಮಸ್ಥರು ದೂರಿದ್ದಾರೆ. ನದಿಯ ಮೇಲ್ಭಾಗದಲ್ಲಿ ಚೀನಾ ವತಿಯಿಂದ ದೊಡ್ಡ ಮಟ್ಟದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದರ ತ್ಯಾಜ್ಯಗಳನ್ನು ನದಿಯಲ್ಲಿ ಹಾಕುತ್ತಿರುವುದರಿಂದ ಈ ರೀತಿ ಆಗಿದೆ ಎಂದು ಜನರು ದೂರಿದ್ದಾರೆ. ಈ ಟನೆ ಬಗ್ಗೆ ತನಿಖೆ ನಡೆಸಲು ಕೂಡಲೇ ತಜ್ಞರ ಸಮಿತಿ ರಚಿಸುವಂತೆ ಪೂರ್ವ ಸೆಪ್ಪಾದ ಶಾಸಕ ತಪುಕ್ ಟಾಕು ಸರ್ಕಾರವನ್ನು ಆಗ್ರಹಿಸಿದ್ದಾರೆ. 2017 ರಲ್ಲಿ ಪಾಸಿ ಘಾಟ್ನಲ್ಲಿ ಸಿಯಾಂಗ್ ನದಿ ನೀರು ಕರ್ಪೂರದ ಬಣ್ಣಕ್ಕೆ ತಿರುಗಿತ್ತು. ನದಿಯ ಮೇಲ್ಪಾತ್ರದಲ್ಲಿ ಚೀನಾ, ಸಿಯಾಂಗ್ನಿಂದ ಕ್ಸಿನ್ಜಿಯಾಂಗ್ ಪ್ರಾಂತ್ಯದ ತಕ್ಲಾಮಕನ್ ಮರುಭೂಮಿಗೆ ನೀರು ಪೂರೈಸಲು 10 ಸಾವಿರ ಕಿ.ಮೀ. ಉದ್ದದ ಸುರಂಗ ನಿರ್ಮಿಸುತ್ತಿರುವ ಕಾರಣ ನದಿ ಕಲುಷಿತವಾಗಿದೆ ಎಂದು ಕಾಂಗ್ರೆಸ್ ಶಾಸಕ ನಿನೊಂಗ್ ಇರಿಂಗ್ ಆಪಾದಿಸಿದ್ದರು. ಆದರೆ, ಚೀನಾ ಇದನ್ನು ಅಲ್ಲಗಳೆದಿತ್ತು.
ಕಾಳಸಂತೆಯಲ್ಲಿ ಅಂಗಾಂಗ ಮಾರಾಟ
ಮೆಲ್ಬೋರ್ನ್: ಚೀನಾದಲ್ಲಿ ಉಯ್ಘರ್ ಅಲ್ಪಸಂಖ್ಯಾ ತರ ಅಂಗಾಂಗಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಯಕೃತ್ (ಲಿವರ್) 1.19 ಕೋಟಿ ರೂ.ಗೆ (1.60 ಲಕ್ಷ ಡಾಲರ್) ದೊರೆಯುತ್ತದೆ ಎಂದು ಆಸ್ಟ್ರೆಲಿಯಾದ ಪತ್ರಿಕೆಯೊಂದು ವರದಿ ಮಾಡಿದೆ. ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ನೆಲೆಸಿರುವ ಉಯ್ಘ್ಘರ್ ಸಮುದಾಯದ ಮೇಲೆ ಚೀನಾ ಸರ್ಕಾರ ಅಂಕೆಶಂಕೆ ಇಲ್ಲದೆ ದೌರ್ಜನ್ಯ ಎಸಗುತ್ತಿದೆ ಎಂಬ ದೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ವಾಗಿರುವ ಬೆನ್ನಿಗೆ ಈ ಸಮುದಾಯದವರ ಅಂಗಾಂಗ ಕಳ್ಳಸಾಗಣೆ ಮಾಡುತ್ತಿದೆ ಎಂಬ ಆರೋಪ ಇನ್ನಷ್ಟು ಆಘಾತ ನೀಡಿದೆ. ಈ ಆರೋಪ ದೃಢಪಟ್ಟಲ್ಲಿ ವಿಶ್ವ ಸಮುದಾಯದ ದೃಷ್ಟಿಯಲ್ಲಿ ಚೀನಾ ಸ್ಥಾನಮಾನ ಮತ್ತಷ್ಟು ಕೆಳಗಿಳಿಯಲಿದೆ. ಬುಡಕಟ್ಟು ಜನರು, ಭಾಷಾ ಅಥವಾ ಧಾರ್ಮಿಕ ಅಲ್ಪಸಂಖ್ಯಾತರನ್ನು ವಶದಲ್ಲಿ ಇರಿಸಿ ಕೊಂಡು ಅವರಿಗೆ ರಕ್ತ ಪರೀೆ, ಅಂಗಾಂಗಗಳ ಪರೀೆ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಎಕ್ಸ್&ರೇ ಮಾಡುವ ನೆಪದಲ್ಲಿ ಅಂಗಾಂಗಗಳನ್ನು ಕದಿಯಲಾಗುತ್ತಿದೆ. ಉಯ್ಘರ್ ಮಾತ್ರವಲ್ಲದೆ ಾಲುನ್ ಗಾಂಗ್, ಟಿಬೆಟಿಯನ್ನರು, ಮುಸ್ಲಿಮರು, ಕೆಸ್ತರು ಇಂಥ ಅಲ್ಪಸಂಖ್ಯಾತ ಸಮುದಾಯದವರನ್ನು ಗುರಿಯಾಗಿರಿಸಿಕೊಂಡು ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಯನ್ನು ಬಲವಂತವಾಗಿ ಮಾಡಲಾಗುತ್ತಿದೆ ಎಂದು ಮಾನವಹಕ್ಕು ಕಾರ್ಯಕರ್ತರು ಆಪಾದಿಸಿ ದ್ದಾರೆ. ಈ ಪರೀಕ್ಷೆಗಳ ಅಂಕಿಅಂಶಗಳನ್ನು ಡೇಟಾ ಬೇಸ್ನಲ್ಲಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇಂಥ ಪರೀಕ್ಷೆ ಗಳನ್ನು ನಡೆಸುವ ಆಸ್ಪತ್ರೆಗಳು ಅಲ್ಪಸಂಖ್ಯಾತರನ್ನು ಇರಿಸುವ ಬಂಧನ ಕೇಂದ್ರಗಳ ಸನಿಹವೇ ಇರುವುದು ಸಂಶಯವನ್ನು ಹೆಚ್ಚಿಸಿದೆ. ಬೀಜಿಂಗ್ನ ಕಾಳಮಾರು ಕಟ್ಟೆಯಲ್ಲಿ ಆರೋಗ್ಯವಂತ ಮನುಷ್ಯನ ಲಿವರ್ 1.60 ಲಕ್ಷ ಡಾಲರ್ವರೆಗೂ ಬಿಕರಿಯಾಗುತ್ತಿದೆ. ಈ ರೀತಿಯ ಅಂಗಾಂಗ ಮಾರಾಟದಿಂದ ಚೀನಾ ಕೋಟ್ಯಂತರ ಡಾಲರ್ ಗಳಿಸುತ್ತಿದೆ ಎಂದು ಮೆಲ್ಬೋರ್ನ್ ನಗರದಿಂದ ಪ್ರಕಟವಾಗುವ 'ಹೆರಾಲ್ಡ್ ಸನ್' ವರದಿ ತಿಳಿಸಿದೆ.
ಉಯ್ಘರ್ ಸಮುದಾಯದವರನ್ನು ಬಂಧಿಸಿಟ್ಟಿರುವ ಕೇಂದ್ರಗಳಲ್ಲಿ ಅಮಾನವೀಯ ಕೃತ್ಯಗಳು ವ್ಯಾಪಕವಾಗಿ ನಡೆಯುತ್ತಿದೆ ಎಂಬ ದೂರು ವಿಶ್ವಸಂಸ್ಥೆಯ ಮಾನವಹಕ್ಕು ಆಯೋಗದ (ಯುಎನ್ಎಚ್ಆರ್ಸಿ) ಮುಂದೆ ಕಳೆದ ಜೂನ್ನಲ್ಲಿ ವ್ಯಕ್ತವಾಗಿತ್ತು. ಚೀನಾ ಈ ಆಪಾದನೆಗಳನ್ನು ಅಲ್ಲಗಳೆದಿದೆಯಾದರೂ, ಅಂತಾರಾಷ್ಟ್ರೀಯ ಸಮುದಾಯ ನಂಬಲು ಸಿದ್ಧವಿಲ್ಲ.