ತಿರುವನಂತಪುರ: ಕೊರೊನಾ ಲಸಿಕೆ ಸ್ವೀಕರಿಸದ ಶಿಕ್ಷಕರನ್ನು ಟೀಕಿಸಿರುವ ಶಿಕ್ಷಣ ಸಚಿವ ವಿ. ಶಿವಂಕುಟ್ಟಿ ಅವರು ಶಾಲೆಗಳು ಪುನರಾರಂಭಗೊಂಡರೂ ಹಲವು ಶಿಕ್ಷಕರು ಇನ್ನೂ ಲಸಿಕೆ ಹಾಕಿಸಿಕೊಳ್ಳದ ವರದಿ ಲಭ್ಯವಾಗಿದ್ದು ಇದು ಸ್ವೀಕಾರಾರ್ಹವಲ್ಲ ಎಂದಿರುವರು. ಯಾವುದೇ ಕಾರಣಕ್ಕೂ ಲಸಿಕೆ ಹಾಕದೇ ಇರುವುದನ್ನು ಒಪ್ಪಿಕೊಳ್ಳಲಾಗದು, ಸರ್ಕಾರಕ್ಕೆ ಮಕ್ಕಳ ಆರೋಗ್ಯ ಮುಖ್ಯ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಸುಮಾರು 5000 ಶಿಕ್ಷಕರು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಬಹುಪಾಲು ಜನರ ನಂಬಿಕೆಗಳನ್ನು ಉಲ್ಲೇಖಿಸಿ 47 ಲಕ್ಷ ವಿದ್ಯಾರ್ಥಿಗಳ ಆರೋಗ್ಯದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು.
ಕೆಲವು ಶಿಕ್ಷಕರು ಲಸಿಕೆ ಹಾಕದೆ ಶಾಲೆಗೆ ಬರುತ್ತಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಇಲಾಖೆ ಗಮನಕ್ಕೆ ತರಲಾಗುವುದು. ಲಸಿಕೆ ಹಾಕಿಸಿಕೊಳ್ಳದ ಶಿಕ್ಷಕರನ್ನು ಶಾಲೆಗೆ ಬರುವಂತೆ ಕೆಲವು ಶಾಲಾ ಅಧಿಕಾರಿಗಳು ಒತ್ತಾಯಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಸಚಿವ ಶಿವಂಕುಟ್ಟಿ ಹೇಳಿರುವರು.