ಕಣ್ಣೂರು: ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಶಿಕ್ಷಕರು ಲಸಿಕೆ ಹಾಕಿಸಿಕೊಂಡಿಲ್ಲ. ಅಂತಹ ಶಿಕ್ಷಕರು ಅನಗತ್ಯವಾಗಿ ಶಾಲೆಗೆ ಬರಬಾರದು ಎಂದು ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಹೇಳಿರುವರು.
ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿ ಚರ್ಚೆಯಲ್ಲಿ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ.
ಲಸಿಕೆ ಹಾಕಿಸಿಕೊಳ್ಳದವರೂ ಕ್ಯಾಂಪಸ್‌ಗೆ ಪ್ರವೇಶಿಸಬಾರದು ಎಂದು ಮಾರ್ಗಸೂಚಿ ಹೇಳುತ್ತದೆ. ಅವರು ಕೇವಲ ಆನ್‌ಲೈನ್ ತರಗತಿಗೆ ಹಾಜರಾಗಬೇಕು. ಕೇವಲ 5,000 ಮಂದಿ ಜನರಿಗೆ ಮಾತ್ರ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಹಕ್ಕಿಲ್ಲ ಎಂದು ಸಚಿವರು ಪ್ರತಿಕ್ರಿಯಿಸಿದರು.
ಲಸಿಕೆ ಹಾಕದ ಶಿಕ್ಷಕರನ್ನು ತರಗತಿಗೆ ಅನುಮತಿಸಲಾಗದು. ಲಸಿಕೆ ಹಾಕಿಸದೇ ಇರುವುದಕ್ಕೆ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳುವವರಿದ್ದಾರೆ, ಬೇರೆ ಬೇರೆ ಮಾತುಗಳನ್ನಾಡುವವರಿದ್ದಾರೆ, ಎಲ್ಲರೂ ಪುರಾವೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ ಎಂದರು.
ಲಸಿಕೆ ಹಾಕಿಸಿಕೊಳ್ಳದೇ ಇರುವವರು ಸಮುದಾಯದ ಒಟ್ಟಾರೆ ಅಗತ್ಯಗಳನ್ನು ಅರಿತು ಲಸಿಕೆ ಹಾಕಿಸಿಕೊಳ್ಳಲು ಮುಂದಾಗುವರು ಎಂಬ ವಿಶ್ವಾಸವಿದೆ. ಏಕೆ ಲಸಿಕೆ ಹಾಕಿಲ್ಲ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ 47 ಲಕ್ಷ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಮಸ್ಯೆಯಾಗಿದೆ.
ಲಸಿಕೆ ಹಾಕಿಸಿಕೊಳ್ಳದ ಶಿಕ್ಷಕರ ಪಟ್ಟಿಯನ್ನು ಶಿಕ್ಷಣ ನಿರ್ದೇಶಕರು ಕೋರಿದ್ದಾರೆ.
ಪ್ರಮುಖ ಆರೋಗ್ಯ ಸಮಸ್ಯೆಗಳಿದ್ದಲ್ಲಿ, ಆರೋಗ್ಯ ವೃತ್ತಿಪರರ ಪ್ರಮಾಣಪತ್ರಗಳನ್ನು ಪಡೆದು ಶಿಕ್ಷಣ ಇಲಾಖೆಗೆ ಸಲ್ಲಿಸಬಹುದು, ಆ ದಾಖಲೆಗಳ ಆಧಾರದ ಮೇಲೆ ವಿಷಯಗಳನ್ನು ಪರಿಗಣಿಸಲಾಗುವುದು ಎಂದು ಸಚಿವರು ಹೇಳಿದರು.
ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುವ ಬಹುತೇಕ ಶಿಕ್ಷಕರು ತಮ್ಮ ಧಾರ್ಮಿಕ ನಂಬಿಕೆಗಳ ಅಲ್ಪಸಂಖ್ಯಾತ ಸಮುದಾಯದವರು.