ಉಪ್ಪಳ: ಮಸೀದಿಯಲ್ಲಿ ವಿತರಿಸಲಾದ ಆಹಾರ ಸೇವಿಸಿದ ಮಕ್ಕಳ ಸಹಿತ 50 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಂದ್ಯೋಡ್ ಸಮೀಪದ ವಳಯಂ ಜುಮಾ ಮಸೀದಿಯಲ್ಲಿ ಧಿಕ್ರ್ ಕಾರ್ಯಕ್ರಮದ ಬಳಿಕ ವಿತರಿಸಲಾದ ಸೀರ್ನಿ ಯನ್ನು ಸೇವಿಸಿದ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಂತಿ, ಹೊಟ್ಟೆ ನೋವು, ಜ್ವರ ಸೇರಿದಂತೆ ಹಲವು ರೀತಿಯಲ್ಲಿ ಹಲವು ಮಂದಿ ಅಸ್ವಸ್ಥಗೊಂಡಿದ್ದಾರೆ. ಮೊಹಮ್ಮದ್ ಹಾಜಿ (84), ಸಲ್ಮಾ (75), ಖತೀಜ (67) ಸೇರಿದಂತೆ ಮಕ್ಕಳ ಸಹಿತ 50 ಕ್ಕಿಂತ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.