ತಿರುವನಂತಪುರ: ಕೇರಳದಲ್ಲಿ ಇಂದು 5516 ಮಂದಿ ಜನರಿಗೆ ಕೊರೊನಾ ದೃಢಪಟ್ಟಿವೆ. ತಿರುವನಂತಪುರ 798, ತ್ರಿಶೂರ್ 732, ಕೊಟ್ಟಾಯಂ 624, ಕೋಝಿಕ್ಕೋಡ್ 615, ಎರ್ನಾಕುಳಂ 614, ಕಣ್ಣೂರು 368, ಕೊಲ್ಲಂ 357, ಪಾಲಕ್ಕಾಡ್ 285, ಪತ್ತನಂತಿಟ್ಟ 277, ಇಡುಕ್ಕಿ 236, ಮಲಪ್ಪುರಂ 208, ಅಲಪ್ಪುಳ 180, ಕಾಸಣಷರಗೋಡು 118, ವಯನಾಡ್ 104 ಎಂಬಂತೆ ಸೋಂಕು ಛದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 70,576 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತ (WIPR) 10 ಕ್ಕಿಂತ ಹೆಚ್ಚಿನ 39 ಸ್ಥಳೀಯ ಸಂಸ್ಥೆಗಳಲ್ಲಿ 46 ವಾರ್ಡ್‌ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,12,925 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 2,07,664 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 5,261 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 426 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 63,338 ಕರೋನಾ ಪ್ರಕರಣಗಳಲ್ಲಿ, ಕೇವಲ 7% ವ್ಯಕ್ತಿಗಳು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 39 ಮಂದಿ ಕೋವಿಡ್ ಬಾಧಿಸಿ ಮೃತರಾಗಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 171 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 36,087ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 25 ಮಂದಿ ಹೊರ ರಾಜ್ಯದವರು. 5105 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 336 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 50 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 6705 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 930, ಕೊಲ್ಲಂ 374, ಪತ್ತನಂತಿಟ್ಟ 714, ಆಲಪ್ಪುಳ 200, ಕೊಟ್ಟಾಯಂ 494, ಇಡುಕ್ಕಿ 413, ಎರ್ನಾಕುಳಂ 942, ತ್ರಿಶೂರ್ 658, ಪಾಲಕ್ಕಾಡ್ 287, ಮಲಪ್ಪುರಂ 248, ಕೋಝಿಕ್ಕೋಡ್ 669, ವಯನಾಡ್ 273, ಕಣ್ಣೂರು 388, ಕಾಸರಗೋಡು 118 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 63,338 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 49,71,080 ಮಂದಿ ಜನರು ಕೊರೋನಾದಿಂದ ಮುಕ್ತರಾಗಿದ್ದಾರೆ.