ನವದೆಹಲಿ:ನವೆಂಬರ್ 8, 2016ರಂದು ಕೇಂದ್ರ ಸರಕಾರ ನೋಟು ಅಮಾನ್ಯೀಕರಣ ಘೋಷಿಸಿದ ನಂತರ ಡಿಜಿಟಲ್ ಪಾವತಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು ಹಾಗೂ ಈ ನಿಟ್ಟಿನಲ್ಲಿ ಸಾಕಷ್ಟು ಸಫಲತೆ ಸಾಧಿಸಲಾಗಿದೆ ಎಂದು ಸರಕಾರವೂ ಹೇಳಿಕೊಂಡಿತ್ತು.
ನವದೆಹಲಿ:ನವೆಂಬರ್ 8, 2016ರಂದು ಕೇಂದ್ರ ಸರಕಾರ ನೋಟು ಅಮಾನ್ಯೀಕರಣ ಘೋಷಿಸಿದ ನಂತರ ಡಿಜಿಟಲ್ ಪಾವತಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು ಹಾಗೂ ಈ ನಿಟ್ಟಿನಲ್ಲಿ ಸಾಕಷ್ಟು ಸಫಲತೆ ಸಾಧಿಸಲಾಗಿದೆ ಎಂದು ಸರಕಾರವೂ ಹೇಳಿಕೊಂಡಿತ್ತು.
ಆದರೆ ನೋಟು ಅಮಾನ್ಯೀಕರಣ ಜಾರಿಯಾಗಿ ಐದು ವರ್ಷಗಳ ನಂತರವೂ ಸಾರ್ವಜನಿಕರು ಪಾವತಿಗಳನ್ನು ನಗದು ರೂಪದಲ್ಲಿಯೇ ಮಾಡಲು ಇಚ್ಛಿಸುತ್ತಿದ್ದಾರೆಂಬುದು ವಾಸ್ತವ ಎಂದು indianexpress.com ವರದಿ ಮಾಡಿದೆ.
ಅಕ್ಟೋಬರ್ 8, 2021ರಲ್ಲಿದ್ದಂತೆ ದೇಶದಲ್ಲಿ ನಗದು ಪ್ರಮಾಣ ಗರಿಷ್ಠ ರೂ 28.30 ಕೋಟಿಯಾಗಿದೆ ಇದು ನವೆಂಬರ್ 4, 2016ರಲ್ಲಿದ್ದ ರೂ 17.97 ಲಕ್ಷಕ್ಕಿಂತ ಶೇ 57.48ರಷ್ಟು ಹೆಚ್ಚಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿಯಂತೆ ಅಕ್ಟೋಬರ್ 23, 2020ರಲ್ಲಿದ್ದಂತೆ ಅದು ಕೂಡ ದೀಪಾವಳಿಯ ಮುನ್ನ ಜನರ ಕೈಯ್ಯಲ್ಲಿದ್ದ ನಗದು ರೂ 15,582 ಕೋಟಿಯಷ್ಟು ಹೆಚ್ಚಾಗಿದೆ ಅಥವಾ ವರ್ಷಕ್ಕೆ ಶೇ 8.5ರಷ್ಟು ಅಥವಾ ರೂ 2.21 ಲಕ್ಷ ಕೋಟಿಯಷ್ಟು ಏರಿಕೆ ಕಂಡಿದೆ ಎಂದು ವರದಿ ಉಲ್ಲೇಖಿಸಿದೆ.
ನವೆಂಬರ್ 2016ರಲ್ಲಿ ರೂ 500 ಹಾಗೂ ರೂ 1000 ನೋಟುಗಳ ಅಮಾನ್ಯೀಕರಣ ಸಂದರ್ಭ ಜನರ ಕೈಯ್ಯಲ್ಲಿದ್ದ ನಗದು ರೂ 17.97 ಲಕ್ಷ ಕೋಟಿಯಾಗಿದ್ದರೆ ಜನವರಿ 2017ರಲ್ಲಿ ಈ ಪ್ರಮಾಣ ಶೇ 7.8 ಲಕ್ಷ ಕೋಟಿಯಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಜನರ ಕೈಯ್ಯಲ್ಲಿರುವ ನಗದು ಪ್ರಮಾಣ ಏರಿಕೆಯಾಗುತ್ತಲೇ ಇದೆ ಹಾಗೂ ಜನರು ಇನ್ನೂ ತಮ್ಮ ವ್ಯವಹಾರಗಳಿಗೆ ನಗದು ಬಳಸಲು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.