ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂಬುದು ಹಲವರ ಕನಸು. ಅದಕ್ಕಾಗಿ ಹಗಲಿರುಳು ಓದಿ ಯುಪಿಎಸ್ಸಿ ಸಾಧನೆ ಮಾಡಿದವರು ಬಹುತೇಕರಿದ್ದಾರೆ. ಸಾಧಕರ ಕತೆಗಳನ್ನು ನಾವು-ನೀವೆಲ್ಲ ಓದಿದ್ದೇವೆ.
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂಬುದು ಹಲವರ ಕನಸು. ಅದಕ್ಕಾಗಿ ಹಗಲಿರುಳು ಓದಿ ಯುಪಿಎಸ್ಸಿ ಸಾಧನೆ ಮಾಡಿದವರು ಬಹುತೇಕರಿದ್ದಾರೆ. ಸಾಧಕರ ಕತೆಗಳನ್ನು ನಾವು-ನೀವೆಲ್ಲ ಓದಿದ್ದೇವೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಯುಪಿಎಸ್ಸಿ ಫೇಲ್ ಆಗೋದು ಹೇಗೆ ಅಂತಾ ವಿಡಿಯೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 1 ನಿಮಿಷ 4 ಸೆಕೆಂಡ್ ವಿಡಿಯೋದಲ್ಲಿ ಫೇಲ್ ಆಗೋದು ಹೇಗೆ ಎಂಬುದನ್ನು ವಿವರಿಸಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್ಗಳ ಭರಾಟೆ ಜೋರಾಗಿದೆ.
ಸರಿಯಾದ ತಂತ್ರಗಾರಿಕೆ ಇಲ್ಲದೆ ಅಧ್ಯಯನ ಆರಂಭಿಸಿ. ಆಗಾಗ ನಿಮ್ಮ ತಂತ್ರಗಾರಿಕೆಯನ್ನು ಬದಲಾಯಿಸುತ್ತಿರಿ. ಯೂಟ್ಯೂಬ್ನಲ್ಲಿರುವ ಪ್ರತಿಯೊಂದು ತಂತ್ರಗಾರಿಕೆಯನ್ನು ನೋಡುತ್ತಿರಿ. ನಿಮ್ಮದೇ ಆದ ಯಾವುದೇ ಯೋಜನೆ ಹಾಕಿಕೊಳ್ಳಬೇಡಿ. ಕೇವಲ ಪ್ರಿಲಿಮ್ಸ್ ಪರೀಕ್ಷೆ ಮೇಲೆ ಮಾತ್ರ ಗಮನವಿಡಿ. ಪ್ರತಿದಿನ ನ್ಯೂಸ್ ಪೇಪರ್ ಓದಬೇಡಿ ಮತ್ತು ನ್ಯೂಸ್ ಪೇಪರ್ಗೆ ಸಬ್ಸ್ಕ್ರೈಬ್ ಆಗಿ ಆದರೆ ಸಂಪಾದಕೀಯ ವಿಭಾಗವನ್ನು ಓದಬೇಡಿ…ಹೀಗೆ ಅನೇಕ ಅಂಶಗಳನ್ನು ಅವನೀಶ್ ಶರಣ್ ಅವರು ಹಂಚಿಕೊಳ್ಳುವ ಮೂಲಕ ಯುಪಿಎಸ್ಸಿ ಆಕಾಂಕ್ಷಿಗಳನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಬೇಕೆಂಬುದನ್ನು ಈ ರೀತಿ ವಿಡಿಯೋ ಮೂಲಕ ವಿಭಿನ್ನವಾಗಿ ಅವನೀಶ್ ಶರಣ್ ತಿಳಿಸಿದ್ದಾರೆ. ಅಂದಹಾಗೆ ಅವನೀಶ್ ಶರಣ್ ಅವರು 2009 ಬ್ಯಾಚ್ನ ಐಎಎಸ್ ಅಧಿಕಾರಿ. ಇವರು ಛತ್ತೀಸ್ಗಢ ಕೇಡರ್ನವರು. ಆಲ್ ಇಂಡಿಯಾ ರ್ಯಾಂಕ್ 77 ಗಳಿಸುವ ಮೂಲಕ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವನೀಶ್ ಶರಣ್ ಅವರ ವಿಡಿಯೋ ಈಗಾಗಲೇ 60 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. 5 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.