ತಿರುವನಂತಪುರ: ರಾಜ್ಯದಲ್ಲಿ ಇಂದು 6075 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತಿರುವನಂತಪುರ 949, ಎರ್ನಾಕುಳಂ 835, ಕೊಲ್ಲಂ 772, ತ್ರಿಶೂರ್ 722, ಕೋಝಿಕ್ಕೋಡ್ 553, ಕೊಟ್ಟಾಯಂ 488, ಕಣ್ಣೂರು 367, ಇಡುಕ್ಕಿ 241, ಮಲಪ್ಪುರಂ 215, ಆಲಪ್ಪುಳ 213, ಪತ್ತನಂತಿಟ್ಟ 212, ಪಾಲಕ್ಕಾಡ್ 205, ವಯನಾಡ್ 203, ಕಾಸರಗೋಡು 100 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 60,437 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತ (WIPR) 10 ಕ್ಕಿಂತ ಹೆಚ್ಚಿನ 39 ಸ್ಥಳೀಯಾಡಳಿತ ಪ್ರದೇಶಗಳಲ್ಲಿ 46 ವಾರ್ಡ್ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,92,854 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 1,87,692 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 5,162 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 302 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ 61,114 ಕರೋನಾ ಪ್ರಕರಣಗಳಲ್ಲಿ, ಕೇವಲ 6.8 ಶೇಕಡ ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿದ 216 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 37,299ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 24 ಮಂದಿ ಹೊರ ರಾಜ್ಯದವರು. 5686 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 330 ಮಂದಿಯ ಸಂಪರ್ಕ ಮೂಲವು ಸ್ಪಷ್ಟವಾಗಿಲ್ಲ. ಮೂವತ್ತೈದು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 6061 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1002, ಕೊಲ್ಲಂ 668, ಪತ್ತನಂತಿಟ್ಟ 29, ಆಲಪ್ಪುಳ 239, ಕೊಟ್ಟಾಯಂ 473, ಇಡುಕ್ಕಿ 288, ಎರ್ನಾಕುಲಂ 963, ತ್ರಿಶೂರ್ 507, ಪಾಲಕ್ಕಾಡ್ 187, ಮಲಪ್ಪುರಂ 158, ಕೋಝಿಕ್ಕೋಡ್ 775, ವಯನಾಡ್ 118, ಕಣ್ಣೂರು 471, ಕಾಸರಗೋಡು 183 ಎಂಬಂತೆ ಗುಣಮುಖರಾಗಿದ್ದಾರೆ.