ತಿರುವನಂತಪುರ: ರಾಜ್ಯದಲ್ಲಿ ಇಂದು 6468 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 907, ತಿರುವನಂತಪುರ 850, ತ್ರಿಶೂರ್ 772, ಕೋಝಿಕ್ಕೋಡ್ 748, ಕೊಲ್ಲಂ 591, ಕೊಟ್ಟಾಯಂ 515, ಕಣ್ಣೂರು 431, ಇಡುಕ್ಕಿ 325, ಪಾಲಕ್ಕಾಡ್ 313, ಆಲಪ್ಪುಳ 250, ಮಲಪ್ಪುರಂ 250, ವಯನಾಡ್ 192, ಪತ್ತನಂತಿಟ್ಟ್ 189, ಕಾಸರಗೋಡು 135 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 71,906 ಮಾದರಿಗಳನ್ನು ಪರೀಕ್ಷಿಸಲಾಗಿದೆ. ವಾರದ ಸೋಂಕಿನ ಜನಸಂಖ್ಯೆಯ ಅನುಪಾತ (WIPR) 10 ಕ್ಕಿಂತ ಹೆಚ್ಚಿನ 39 ಸ್ಥಳೀಯ ಸಂಸ್ಥೆಗಳಲ್ಲಿ 46 ವಾರ್ಡ್‌ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸದ್ಯ 2,25,227 ಮಂದಿ ಕಣ್ಗಾವಲಿನಲ್ಲಿದ್ದಾರೆ. ಇವರಲ್ಲಿ 2,19,885 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 5,342 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 345 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ, 68,630 ಕರೋನಾ ಪ್ರಕರಣಗಳಲ್ಲಿ, ಕೇವಲ 6.7 ಪ್ರತಿಶತದಷ್ಟು ಜನರು ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 23 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 151 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 35,685ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 28 ಮಂದಿ ಹೊರ ರಾಜ್ಯದವರು. 5914 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 497 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಒಟ್ಟು 29 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.
ಇಂದು ಸೋಂಕು ಬಾಧಿತರಾಗಿ ಚಿಕಿತ್ಸೆಯಲ್ಲಿದ್ದವರ ಪ್ಯೆಕಿ 6468 ಮಂದಿ ಗುಣಮುಖರಾಗಿದ್ದಾರೆ. ತಿರುವನಂತಪುರ 1017, ಕೊಲ್ಲಂ 517, ಪತ್ತನಂತಿಟ್ಟ 541, ಆಲಪ್ಪುಳ 217, ಕೊಟ್ಟಾಯಂ 546, ಇಡುಕ್ಕಿ 362, ಎರ್ನಾಕುಳಂ 772, ತ್ರಿಶೂರ್ 854, ಪಾಲಕ್ಕಾಡ್ 259, ಮಲಪ್ಪುರಂ 282, ಕೋಝಿಕ್ಕೋಡ್ 616, ವಯನಾಡ್ 56, ಕಣ್ಣೂರು 341, ಕಾಸರಗೋಡು 88 ಎಂಬಂತೆ ಗುಣಮುಖರಾಗಿದ್ದಾರೆ.