ತಿರುವನಂತಪುರ: ರಾಜ್ಯದಲ್ಲಿ ಇಂದು 6546 ಮಂದಿ ಜನರಿಗೆ ಕೋವಿಡ್-19 ದೃಢಪಟ್ಟಿದೆ. ಎರ್ನಾಕುಳಂ 1037, ತಿರುವನಂತಪುರ 888, ಕೊಲ್ಲಂ 774, ಕೋಝಿಕ್ಕೋಡ್ 754, ತ್ರಿಶೂರ್ 724, ಕೊಟ್ಟಾಯಂ 508, ಕಣ್ಣೂರು 394, ಪಾಲಕ್ಕಾಡ್ 343, ಪತ್ತನಂತಿಟ್ಟ 267, ವಯನಾಡ್ 220, ಮಲಪ್ಪುರಂ 215, ಇಡುಕ್ಕಿ 181, ಆಲಪ್ಪುಳ 142, ಕಾಸರಗೋಡುಟಲಷಡಅಲ್ಲದೆ ಅಲ್ಲದೇಕ 99 ಎಂಬಂತೆ ಸೋಂಕು ಕಂಡುಬಂದಿದೆ.
ಕಳೆದ 24 ಗಂಟೆಗಳಲ್ಲಿ 66,486 ಮಾದರಿಗಳನ್ನು ಪರೀಕ್ಷಿಸಲಾಗಿದೆ. ವಾರದ ಸೋಂಕಿನ ಜನಸಂಖ್ಯೆಯ ಅನುಪಾತ (WIPR) 10 ಕ್ಕಿಂತ ಹೆಚ್ಚಿನ 39 ಸ್ಥಳೀಯ ಸಂಸ್ಥೆಗಳಲ್ಲಿ 46 ವಾರ್ಡ್ ಗಳಿವೆ. ಇಲ್ಲಿ ಕಟ್ಟು ನಿಟ್ಟಿನ ನಿಯಂತ್ರಣ ಇರಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,40,336 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 2,33,927 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 6409 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 332 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ, 72,876 ಕೋವಿಡ್ ಪ್ರಕರಣಗಳಲ್ಲಿ, ಕೇವಲ 7 ಪ್ರತಿಶತವನ್ನು ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 50 ಮಂದಿ ಮೃತಪಟ್ಟಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದಂತೆ 231 ಸಾವುಗಳು ವರದಿಯಾಗಿವೆ ಮತ್ತು ಕಳೆದ ವರ್ಷ ಜೂನ್ 18 ರವರೆಗೆ 186 ಸಾವುಗಳು ಸಾಕಷ್ಟು ದಾಖಲೆಗಳ ಕೊರತೆಯಿಂದ ದೃಢೀಕರಿಸಲ್ಪಟ್ಟಿಲ್ಲ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 33,515ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 16 ಮಂದಿ ಹೊರ ರಾಜ್ಯದವರು. 6041 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 448 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 41 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 6934 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1229, ಕೊಲ್ಲಂ 554, ಪತ್ತನಂತಿಟ್ಟ 585, ಆಲಪ್ಪುಳ 307, ಕೊಟ್ಟಾಯಂ 591, ಇಡುಕ್ಕಿ 399, ಎರ್ನಾಕುಳಂ 944, ತ್ರಿಶೂರ್ 119, ಪಾಲಕ್ಕಾಡ್ 300, ಮಲಪ್ಪುರಂ 319, ಕೋಝಿಕೋಡ್ 816, ವಯನಾಡ್ 293, ಕಣ್ಣೂರು 369, ಕಾಸರಗೋಡು 109 ಎಂಬಂತೆ ಗುಣಮುಖರಾಗಿದ್ದಾರೆ.