ತಿರುವನಂತಪುರಂ: ರಾಜ್ಯದಲ್ಲಿ ಇಂದು 6580 ಮಂದಿ ಜನರಿಗೆ ಕೋವಿಡ್-19 ದೃಢಪಟ್ಟಿದೆ. ತಿರುವನಂತಪುರ 878, ಎರ್ನಾಕುಳಂ 791, ತ್ರಿಶೂರ್ 743, ಕೊಲ್ಲಂ 698, ಕೋಝಿಕ್ಕೋಡ್ 663, ಕೊಟ್ಟಾಯಂ 422, ಪತ್ತನಂತಿಟ್ಟ 415, ಇಡುಕ್ಕಿ 412, ಕಣ್ಣೂರು 341, ಆಲಪ್ಪುಳ 333, ವಯನಾಡ್ 285, ಮಲಪ್ಪುರಂ 240, ಪಾಲಕ್ಕಾಡ್ 234, ಕಾಸರಗೋಡು 125 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 62,219 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತ 10 ಕ್ಕಿಂತ ಹೆಚ್ಚಿನ 39 ಸ್ಥಳೀಯ ಸಂಸ್ಥೆಗಳಲ್ಲಿ 46 ವಾರ್ಡ್‍ಗಳಿವೆ . ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,47,485 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 2,40,859 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 6,626 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಒಟ್ಟು 442 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ 73,733 ಕೋವಿಡ್ ಪ್ರಕರಣಗಳಲ್ಲಿ, ಕೇವಲ 7.3 ಪ್ರತಿಶತದಷ್ಟು ಮಂದಿ ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 46 ಮಂದಿ ಕೋವಿಡ್ ಬಾ|ಧಿಸಿ ಮೃತಪಟ್ಟಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಮೇಲ್ಮನವಿಯಲ್ಲಿ 111 ಸಾವುಗಳು ವರದಿಯಾಗಿವೆ ಮತ್ತು ಕಳೆದ ವರ್ಷ ಜೂನ್ 18 ರವರೆಗೆ ಸಮರ್ಪಕ ದಾಖಲೆಗಳ ಕೊರತೆಯಿಂದ 157 ಸಾವುಗಳು ಸಂಭವಿಸಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 33,048ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 22 ಮಂದಿ ಹೊರ ರಾಜ್ಯದವರು. 6167 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 352 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮೂವತ್ತೊಂಬತ್ತು ಆರೋಗ್ಯ ಕಾರ್ಯಕರ್ತರಿಗೆ ಸೋ|ಂಕು ದೃಢಪಟ್ಟಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 7085 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1202, ಕೊಲ್ಲಂ 626, ಪತ್ತನಂತಿಟ್ಟ 180, ಆಲಪ್ಪುಳ 214, ಕೊಟ್ಟಾಯಂ 255, ಇಡುಕ್ಕಿ 502, ಎರ್ನಾಕುಳಂ 1345, ತ್ರಿಶೂರ್ 27, ಪಾಲಕ್ಕಾಡ್ 369, ಮಲಪ್ಪುರಂ 402, ಕೋಝಿಕ್ಕೋಡ್ 1147, ವಯನಾಡ್ 204, ಕಣ್ಣೂರು 420, ಕಾಸರಗೋಡು 192 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 73,733 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 48,94,435 ಮಂದಿ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.