ಕಾಸರಗೋಡು: 68ನೇ ವರ್ಷದ ಸಹಕಾರಿ ವಾರಾಚರಣೆಯ ಜಿಲ್ಲಾಮಟ್ಟದ ಕಾರ್ಯಕ್ರಮ ಕೇರಳ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಜರುಗಿತು. ಶಾಸಕ ಎನ್.ಎ ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ಸರ್ಕಲ್ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದ್ದರು.
ಸಹಕಾರಿ ಇಲಾಖೆ ಜಂಟಿ ನಿಬಂಧಕಿ ಎ.ರಮಾ, ಕೇರಳ ಬ್ಯಾಂಕ್ ಆಡಳಿತ ಸಮಿತಿ ಸದಸ್ಯ ಸಾಬು ಅಬ್ರಹಾಂ, ರಾಜ್ಯ ಕೃಷಿ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಕೆ. ನೀಲಕಂಠನ್, ಸಹಾಯಕ ನಿಬಂಧಕರಾದ ಎ.ರವೀಂದ್ರನ್, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರಾದ ಎಸ್.ಜೆ ಪ್ರಸಾದ್, ವಕೀಲ ಎ.ಸಿ ಅಶೋಕ್ ಕುಮಾರ್, ಎಂ. ಸಂಜೀವ ಶೆಟ್ಟಿ, ಇ. ಅಬೂಬಕ್ಕರ್ ಹಾಜಿ ಉಪಸ್ಥಿತರಿದ್ದರು.
ಈ ಸಂದರ್ಭ 'ಕೋವಿಡ್ ಸಂಕಷ್ಟ ಎದುರಿಸುವ ಹಾಗೂ ಆರೋಗ್ಯ ವಲಯವನ್ನು ಬಲಪಡಿಸುವಲ್ಲಿ ಸಹಕಾರಿ ಸಂಘಟನೆಗಳ ಪಾತ್ರ'ಎಂಬ ವಿಷಯದಲ್ಲಿ ನಡೆದ ಕಾರ್ಯಾಗಾರವನ್ನು ಕೇರಳ ಬ್ಯಾಂಕ್ ಮಹಾ ಪ್ರಬಂಧಕ ಎ. ಅನಿಲ್ ಕುಮಾರ್ ಉದ್ಘಾಟಿಸಿದರು. ಸಹಾಯಕ ನಿಬಂಧಕ ಎಂ. ಆನಂದನ್ ಸಮನ್ವಯಕಾರರಾಗಿದ್ದರು. ಎಂ.ಕೆ ದಿನೇಶ್‍ಬಾಬು ವಿಷಯ ಮಂಡಿಸಿದರು. ಎ.ಚಂದ್ರಶೇಖರನ್, ವಕೀಲ ಕೆ. ಕರುಣಾಕರನ್ ನಂಬ್ಯಾರ್, ಯು.ಸುಧಾಕರನ್, ಪಿ.ಜಾನಕಿ, ಪಿ.ಕೆ ವಿನೋದ್ ಕುಮಾರ್, ಪಿ.ಸುರೇಂದ್ರನ್ ಸಂವಾದದಲ್ಲಿ ಪಾಲ್ಗೊಂಡರು.'ಸಂಪತ್ಸಮೃದ್ಧಿ ಸಹಕಾರಿ ವಲಯಗಳ ಮೂಲಕ'ಎಂಬ ಧ್ಯೇಯವಾಕ್ಯವನ್ನು ಈ ವರ್ಷದ ಸಹಕಾರಿ ವಾರಾಚರಣೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಹಕಾರಿ ವಾರಾಚರಣೆಯ ಜಿಲ್ಲಾ ಮಟ್ಟದ ಸಮಾರೋಪ ಕೋಟಚ್ಚೇರಿ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜರುಗಿಸಲು ತೀರ್ಮಾಣಿಸಿರುವುದಾಗಿ ಪ್ರಕಟಣೆ ತಿಳಿಸಿದೆ.