ಕಾಸರಗೋಡು: ರಾಜ್ಯ ಸರಕಾರದ ದೂರಗಾಮಿ ದೃಷ್ಟಿಕೋನದ ಯೋಜನೆಗಳ ಮೂಲಕ ಕಾಸರಗೋಡು ಜಿಲ್ಲೆ ಮುನ್ನಡೆಯ ಹಾದಿಯಲ್ಲಿದೆ.
ಆರೋಗ್ಯ, ಕೃಷಿ, ಶಿಕ್ಷಣ ವಲಯಗಳ ಮೂಲಕ ಸ್ಥಳೀಯ ಮಟ್ಟದಿಂದ ತೊಡಗಿ ಬೃಹತ್ ಸಾಧನೆಗಳು ಕಳೆದ 6 ತಿಂಗಳ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಡೆದಿವೆ. ಜನತೆಯ ಮ,ಊಲಭೂತ ಅಗತ್ಯಗಳನ್ನು, ನಾಡಿನ ದೀರ್ಘಾವಧಿ ಮೂಲಭೂತ ಅಭಿವೃದ್ಧಿ ಗುರಿಯಾಗಿಸಿ ರಾಜ್ಯ ಸರಕಾರ ಜಿಲ್ಲೆಯಲ್ಲಿ ಸಾಧನೆಗಳನ್ನು ನಡೆಸಿದೆ.
ಆರೋಗ್ಯ ಪೂರ್ಣ ಚಿಕಿತ್ಸಾಲಯಗಳು
ಕಾಸರಗೋಡು ಜಿಲ್ಲಾ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಡಿಸೆಂಬರ್ ತಿಂಗಳ ವೇಳೆಗೆ ಹೊರರೋಗಿ ವಿಭಾಗ ಆರಂಭಿಸುವುದಾಗಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಘೋಷಿಸಿರುವುದು ಜಿಲ್ಲೆಯ ಆರೋಗಹ್ಯ ವಲಯಕ್ಕೆ ಹೆಚ್ಚುವರಿ ಚೈತನ್ಯ ನೀಡಿದೆ. ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ 2023-24ನೇ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಶಿಕ್ಷಣ ಆರಂಭಿಸುವ ನಿಟ್ಟಿನಲ್ಲಿ ಚಟುವಟಿಕೆಗಳು ಮುಂದೆ ಸಾಗುತ್ತಿವೆ. ಟಾಟಾ ಸರಕಾರಿ ಕೋವಿಡ್ ಆಸ್ಪತ್ರೆ ಸ್ವೀವೇಜ್ ಟ್ರೀಟ್ ಮೆಂಟ್ ಪ್ಲಾಂಟ್ ಗೆ 1.10 ಕೋಟಿ ರೂ.ನ ಯೋಜನೆಗೆ ಆಡಳಿತೆ ಮಂಜೂರಾತಿ ಲಭಿಸಿರುವುದೂ ಈ ಕಾಲಾವಧಿಯಲ್ಲೇ. ಕಾಞಂಗಾಡಿನ ಅಮ್ಮ ಮತ್ತು ಮಗು ಆಸ್ಪತ್ರೆ ಮಾರ್ಚ್ ತಿಂಗಳಲ್ಲಿ ಚಟುವಟಿಕೆ ಆರಂಭಿಸಲಿದೆ.
ಕೋವಿಡ್ ಅನಂತರದ ಅವಧಿಯ ಪ್ರವಾಸೋದ್ಯಮ
ಕೋವಿಡ್ ಅನಂತರದ ಅವಧಿಯಲ್ಲಿ ಪ್ರವಾಸೋದ್ಯಮ ರಂಗಕ್ಕೆ ಪುನಶ್ಚೇತನ ನಿಡುವ ನಿಟ್ಟಿನಲ್ಲಿ ಲಿಟಲ್ ಇಂಡಿಯಾ ಕಾಸರಗೋಡು ಯೋಜನೆಗೆ ಈ ಅವಧಿಯಲ್ಲಿ ಚಾಲನೆ ನೀಡಲಾಗಿದೆ. ಸರಿಸುಮಾರು 30 ಭಾಷೆಗಳು ಮತ್ತು ಸಂಸ್ಕøತಿ ಇರುವ ಕಾಸರಗೋಡು ಜಿಲ್ಲೆಯನ್ನು ಬೃಹತ್ ಪ್ರವಾಸೋದ್ಯಮ ಹಬ್ಬಾಗಿ ಮಾರ್ಪಡಿಸಲು ಲಿಟಲ್ ಇಂಡಿಯಾ ಕಾಸರಗೋಡು ಯೋಜನೆ ಗುರಿಯಿರಿಸಿದೆ. ಜಿಲ್ಲೆಯ ಆಕರ್ಷಕ ತಾಣಗಳನ್ನು ಇನ್ನಷ್ಟು ಆಕರ್ಷಕವಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಡಿ.ಟಿ.ಪಿ.ಸಿ. ನೇತೃತ್ವದಲ್ಲಿ ಅನೇಕ ಯೋಜನೆಗಳು ಜಾರಿಗೊಳ್ಳುತ್ತಿವೆ. ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದಲ್ಲಿ ಟ್ಯೂರಿಸಂ ಸ್ಪಾಟ್ ಗಳನ್ನು ಪತ್ತೆ ಮಾಡಿ ಅಭಿವೃದ್ಧಿಗೊಳಿಸಲು ಟ್ಯೂರಿಸಂ ಮಿಷನ್ ಮೂಲಕ ಹೆಚ್ಚುವರಿ ಸಾಧ್ಯತೆಗಳನ್ನು ಜಿಲ್ಲೆಯಲ್ಲಿ ಪತ್ತೆ ಮಾಡುವ ಯೋಜನೆಗಳನ್ನು ರಚಿಸಿ ಜಾರಿಗೊಳಿಸಲಾಗುತ್ತಿದೆ.
ಬೆದ್ರಡ್ಕ ನವರತ್ನ ಕಂಪನಿಯಾಗಿರುವ ಭೆಲ್ ಇ.ಎಂ.ಎಲ್.ನ ಯೂನಿಟ್ ರಾಜ್ಯ ಸರಕಾರ ವಹಿಸಿಕೊಂಡಿದೆ. ಕೇಂದ್ರ ಸಾರ್ವಜನಿಕ ಸಂಸ್ಥೆ ಭೆಲ್ ನ ಶೇ 51 ಶೇರುಗಳನ್ನು ರಾಜ್ಯಸರಕಾರ ಪಡೆದಿದೆ. ಕೋಟಿಗಟ್ಟಲೆ ರೂ.ನ ನಷ್ಟದಲ್ಲಿರುವ ಕಂಪನಿಯ ಕಾರ್ಮಿಕರಿಗೆ ಅನೇಕ ತಿಂಗಳುಗಳಿಂದ ವೇತನ ಮೊಟಕುಗೊಂಡಿದ್ದು, ಸಂಸ್ಥೆ ಮುಚ್ಚುಗಡೆಯ ಹಂತದಲ್ಲಿರುವ ವೇಳೆ ಸರಕಾರ ಹೊಣೆ ವಹಿಸಿಕೊಂಡಿದೆ.
ಮಂಜೇಶ್ವರ ಅರಣ್ಯ ಚೆಕ್ ಪೆÇೀಸ್ಟ್ ಚಟುವಟಿಕೆ ಆರಂಭಿಸಿರುವುದು, ಚಂದ್ರಗಿರಿ ತೀರದಲ್ಲಿ ಪ್ರವಾಸಿ ಕೇಂದ್ರ ನಿರ್ಮಾಣ, ರಾಜ್ಯ ಲೀಗಲ್ ಮೆಟ್ರಾಲಜಿ ಇಲಾಖೆ ವ್ಯಾಪ್ತಿಯಲ್ಲಿ ಉತ್ತರ ಮಲಬಾರ್ ಪ್ರದೇಶದ ಪ್ರಥಮ ಸೆಕೆಂಡರಿ ಸ್ಟಾಂಡರ್ಡ್ ಲೆಬೋರೆಟರಿ, ಟಾಂಕರ್ ಲಾರಿ, ಕಾಲಿಬ್ರೇಷನ್ ಯೂನಿಟ್ ನಿರ್ಮಾಣ ಬಟ್ಟತ್ತೂರಿನಲ್ಲಿ ನಡೆದಿದೆ. ಹೀಗೆ ಅನೇಕ ಯೋಜನೆಗಳು 6 ತಿಂಗಳ ಅವಧಿಯಲ್ಲಿ ಜಾರಿಯಾಗಿವೆ.