ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ( ಕೇರಳ ಸೆಂಟ್ರಲ್ ಯೂನಿವರ್ಸಿಟಿ) ವಿವಿಧ ವಿಭಾಗಗಳಲ್ಲಿ ಬೋಧಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಒಟ್ಟು ಹುದ್ದೆಗಳು: 71
ಹುದ್ದೆ ವಿವರ
* ಪ್ರೊಫೆಸರ್ - 15
* ಅಸೋಸಿಯೇಟ್ ಪ್ರೊಫೆಸರ್ - 29
* ಅಸಿಸ್ಟೆಂಟ್ ಪ್ರೊಫೆಸರ್ - 27
ಯಾವ ವಿಭಾಗಗಳಲ್ಲಿ ನೇಮಕ?: ಕಾಮರ್ಸ್ ಆಂಡ್ ಇಂಟರ್ನ್ಯಾಷನಲ್ ಬಿಜಿನೆಸ್, ಇಂಗ್ಲಿಷ್ ಆಂಡ್ ಕಂಪ್ಯಾರೇಟಿವ್ ಲಿಟೆರೇಚರ್, ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ, ಶಿಕ್ಷಣ, ಜಿನೋಮಿಕ್ ಸೈನ್ಸ್, ಜಿಯಾಲಜಿ, ಕನ್ನಡ, ಲಿಂಗ್ವಿಸ್ಟಿಕ್ಸ್, ಮ್ಯಾನೇಜ್ವೆುಂಟ್ ಸ್ಟಡೀಸ್, ಗಣಿತಶಾಸ್ತ್ರ, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಆಂಡ್ ಪಾಲಿಸಿ ಸ್ಟಡೀಸ್, ಪಬ್ಲಿಕ್ ಹೆಲ್ತ್ ಆಂಡ್ ಕಮ್ಯುನಿಟಿ ಮೆಡಿಸನ್, ಸೋಷಿಯಲ್ ವರ್ಕ್, ಟೂರಿಸಂ ಸ್ಟಡೀಸ್, ಕೆಮಿಸ್ಟ್ರಿ, ಎನ್ವಿರಾನ್ವೆುಂಟಲ್ ಸೈನ್ಸ್, ಹಿಂದಿ, ಇಂಟರ್ನ್ಯಾಷನಲ್ ರಿಲೇಷನ್ಸ್, ಕಾನೂನು, ಮಲಯಾಳಂ, ಪ್ಲಾಂಟ್ ಸೈನ್ಸ್, ಯೋಗ ಸ್ಟಡೀಸ್, ಝೂಲಾಜಿ, ಬಯೋಕೆಮಿಸ್ಟ್ರಿ ಆಂಡ್ ಮಾಲಿಕ್ಯುಲರ್ ಬಯಾಲಜಿ, ಫಿಜಿಕ್ಸ್ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಶೈಕ್ಷಣಿಕ ಅರ್ಹತೆ: ಕಲಾ, ವಾಣಿಜ್ಯ, ಶಿಕ್ಷಣ, ಕಾನೂನು, ಸಮಾಜ ವಿಜ್ಞಾನ, ಭಾಷೆ, ಯೋಗ, ಪಬ್ಲಿಕ್ ಹೆಲ್ತ್ ಮತ್ತು ಕಮ್ಯುನಿಟಿ ಮೆಡಿಸನ್ನಲ್ಲಿ 2018ರ ಯುಜಿಸಿ ನಿಯಮಾನುಸಾರ ಕನಿಷ್ಠ ಶಿಕ್ಷಣ ಪಡೆದಿರಬೇಕು. ಮ್ಯಾನೇಜ್ವೆುಂಟ್ ಸ್ಟಡೀಸ್ ಮತ್ತು ಟೂರಿಸಂ ಸ್ಟಡೀಸ್ಗೆ ಎಐಸಿಟಿಇಯ 2019ನೇ ನಿಯಮಾನುಸಾರ ಶಿಕ್ಷಣ ಪಡೆದಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ಶೇ.5 ಅಂಕ ವಿನಾಯಿತಿ ಇದೆ. ಪಿಎಚ್ಡಿ, ಎಂಫಿಲ್ ಮಾಡಿರುವ ಅಭ್ಯರ್ಥಿಗಳಿಗೂ ಶೇ.5 ಅಂಕ ವಿನಾಯಿತಿ ಜತೆ ಪಿಎಚ್.ಡಿ ಮತ್ತು ಎಂಫಿಲ್ ಮಾಡಲು ತೆಗೆದುಕೊಂಡ ಅವಧಿಯನ್ನು ವೃತ್ತಿ ಅನುಭವ ಎಂದು ಪರಿಗಣಿಸಲಾಗುವುದು.
ವೇತನ: ಪ್ರೊಫೆಸರ್ ಹುದ್ದೆಗೆ ಮಾಸಿಕ 1,44,200 ರೂ., ಅಸೋಸಿಯೇಟ್ ಪ್ರೊಫೆಸರ್ಗೆ ಮಾಸಿಕ 1,31,400 ರೂ., ಅಸಿಸ್ಟೆಂಟ್ ಪ್ರೊಫೆಸರ್ಗೆ ಮಾಸಿಕ 57,700 ರೂ. ವೇತನ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ (ಹೆಚ್ಚಿನ ವಿದ್ಯಾರ್ಹತೆ ಹೊಂದಿದವರಿಗೆ ಆದ್ಯತೆ), ವೃತ್ತಿ ಅನುಭವ ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನದಲ್ಲಿನ ಭಾಗವಹಿಸುವಿಕೆ ಆಧರಿಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಮಹಿಳಾ ಮತ್ತು ಡಿಎ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 1500 ರೂ. ಪ್ರೊಸೆಸಿಂಗ್ ಶುಲ್ಕವನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 20.12.2021
ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯದಿನ: 31.12.2021
ಅಂಚೆ ವಿಳಾಸ:The Recruitment Cell, Central University Of Kerala, Tejaswini Hills, Periye, Kasaragod- 671 320
ಅಧಿಸೂಚನೆಗೆ: https://bit.ly/3kO3kP1
ಮಾಹಿತಿಗೆ: https://www.cukerala.ac.in/