ತಿರುವನಂತಪುರ: ಪಡಿತರ ಸೀಮೆಎಣ್ಣೆ ಬೆಲೆಯೂ ಭಾರೀ ಏರಿಕೆಯಾಗಿದೆ. ಪ್ರತಿ ಲೀಟರ್‍ಗೆ 8 ರೂ.ಗಳಷ್ಟು ಏರಿಕೆಯಾಗಿದೆ. ಇದರೊಂದಿಗೆ ಲೀಟರ್ ಬೆಲೆ 47 ರೂ.ನಿಂದ 55 ರೂ.ಗೆ ಏರಿಕೆಯಾಗಿದೆ. ಸಗಟು ದರವೂ ಲೀಟರ್‍ಗೆ 6.70 ರೂಪಾಯಿ ಏರಿಕೆಯಾಗಿದೆ. ಇದು ಇತಿಹಾಸದಲ್ಲೇ ಅತಿ ದೊಡ್ಡ ಬೆಲೆ ಏರಿಕೆಯಾಗಿದೆ.
ತೈಲ ಕಂಪನಿಗಳು ನವೆಂಬರ್‍ನಿಂದ ಪಡಿತರ ವರ್ತಕರಿಂದ ಸೀಮೆ ಎಣ್ಣೆಗೆ ಹೊಸ ಬೆಲೆಯನ್ನು ವಸೂಲಿ ಮಾಡುತ್ತಿವೆ. ಆದ್ಯತೆ ಮತ್ತು ಆದ್ಯತೆಯೇತರ ಸೇರಿದಂತೆ ಎಲ್ಲಾ ವರ್ಗಗಳಿಗೆ ಹೊಸ ಬೆಲೆಯನ್ನು ಪಾವತಿಸಬೇಕಾಗುತ್ತದೆ.
ಸೀಮೆಎಣ್ಣೆಯ ಮೂಲ ಬೆಲೆ ರೂ.45 ಇದ್ದು, ಹೆಚ್ಚುವರಿಯಾಗಿ, ಸಗಟು ದರವು ಡೀಲರ್ ಕಮಿಷನ್ ಸಾರಿಗೆ ದರ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಿಎಸ್‍ಟಿ ತೆರಿಗೆ ತಲಾ 2.5 ಶೇಕಡಾ| ಒಳಗೊಂಡಿದೆ. ಗ್ರಾಕರಿಗೆ ತಲಪುವಾಗ 55 ರೂ.ಆಗಿ ಏರಿಕೆಯಾಗುತ್ತದೆ.