ಕೊಟ್ಟಾಯಂ: ಮಳೆ ಕೆಲವೊಮ್ಮೆ ಬಹಳಷ್ಟು ಸಂತೋಷವನ್ನು ಉಡುಗೊರೆಯಾಗಿ ನೀಡುತ್ತದೆ. ಇದಕ್ಕೆ ಉದಾಹರಣೆ ಕೊಟ್ಟಾಯಂನ ತಿರುವಂಚೂರಿನ ಕುರಿಯನಾಡಿನ ಅದೃಷ್ಟಶಾಲಿ ಸಾಜಿಮೋನ್.
ಲಾಟರಿ ಡೀಲರ್ ಸಾಜಿಮೋನ್ ಎಂಬುವರು ಮಳೆಯಿಂದಾಗಿ ಮಾರಾಟವಾಗದ ಟಿಕೇಟ್ ನಿಂದ 80 ಲಕ್ಷ ರೂ.ಬಹುಮಾನ ಗಳಿಸಿಕೊಂಡಿದ್ದಾರೆ. ಕಾರುಣ್ಯ ಪ್ಲಸ್ (ಕೆಎನ್-393) ಲಾಟರಿ ಟಿಕೆಟ್ ಸಂಖ್ಯೆ ಪಿಎನ್-567732 ದೀಪಾವಳಿ ದಿನದಂದು 80 ಲಕ್ಷ ರೂ. ಬಹುಮಾನ ಒದಗಿಬಂದಿದೆ.
ಕೆಲವು ದಿನಗಳ ಹಿಂದೆ ಸಾಜಿ ಭಾರ ಹೊತ್ತೊಯ್ಯುತ್ತಿದ್ದಾಗ ಅಪಘಾತವಾಗಿ ಬೆನ್ನುಮೂಳೆಗೆ ಪೆಟ್ಟು ಬಿದ್ದಿತ್ತು. ನಂತರ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಆಪರೇಷನ್ ಮಾಡಲಾಗಿತ್ತು. ನಂತರ ಹೆಚ್ಚಿನ ಕೆಲಸದ ಹೊರೆ ತಾಳಲಾರದೆ ಲಾಟರಿ ವ್ಯಾಪಾರಕ್ಕಿಳಿದಿದ್ದರು.
ಕೊಟ್ಟಾಯಂ ಕರಪ್ಪುಳ ಶ್ರೀಕಾಂತ್ ವೇಣುಗೋಪಾಲನ್ ನಾಯರ್ ಅವರ ಶ್ರೀಭದ್ರ ಲಾಟರಿ ಏಜೆನ್ಸಿಯಿಂದ ಮತ್ತು ಕೊಟ್ಟಾಯಂನ ತಿರುನಕ್ಕರದಲ್ಲಿರುವ ಶ್ರೀಕೃಷ್ಣ ಮತ್ತು ಭಾಗ್ಯಮಾಲಾ ಲಾಟರಿ ಅಂಗಡಿಯಿಂದ ಸಜಿಮೋನ್ ಟಿಕೆಟ್ ಖರೀದಿಸಿದ್ದಾರೆ. ಬೆಳಗ್ಗೆಯಿಂದ ಲಾಟರಿ ಮಾರಾಟಕ್ಕಾಗಿ ಕಾದು ಕುಳಿತಿದ್ದರೂ ಮಳೆಯಿಂದಾಗಿ ಯಾರೂ ಟಿಕೆಟ್ ಖರೀದಿಸಲು ಬಂದಿರಲಿಲ್ಲ.
ಬಳಿಕ ಸಜಿಮೋನ್ ಟಿಕೆಟ್ ವಾಪಸ್ ಕೊಡದೆ ಇಟ್ಟುಕೊಂಡಿದ್ದರು. ಮಾರಾಟವಾಗದ ಐದು ಲಾಟರಿಗಳಲ್ಲಿ ಒಂದು ಬಹುಮಾನವನ್ನು ಗೆದ್ದಿದೆ. ಐವತ್ತೆಂಟನೇ ವಯಸ್ಸಿನ ಸಜಿಮೋನ್ ಗೆ ಅನಿರೀಕ್ಷಿತ ಉಡುಗೊರೆ ಹುಡುಕಿಕೊಂಡು ಬಂದಿದೆ. ಆದರೆ ಈ ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಮನೆಯನ್ನು ನವೀಕರಿಸಲು ಮತ್ತು ಸಾಲವನ್ನು ತೀರಿಸಲು ಇದು ಏಕೈಕ ಮಾರ್ಗವಾಗಿದೆ ಎಂದಿರುವರು.