HEALTH TIPS

ಕಣ್ಣೂರು ವಿವಿಯ 8 ನೇ ಕ್ಯಾಂಪಸ್ ಮಂಜೇಶ್ವರದಲ್ಲಿ ಆರಂಭ: ಮುಖ್ಯಮಂತ್ರಿಯಿಂದ ಉದ್ಘಾಟನೆ: ಮಂಜೇಶ್ವರ ಕ್ಯಾಂಪಸ್ ನಲ್ಲಿ ಮುಂದಿನ ವರ್ಷ ಎಲ್.ಎಲ್.ಬಿ. ಆರಂಭಕ್ಕೆ ಉದ್ದೇಶ: ಮುಖ್ಯಮಂತ್ರಿ

                                        

              ಮಂಜೇಶ್ವರ: ಕಾಸರಗೋಡನ್ನು ಉನ್ನತ ಶಿಕ್ಷಣದ ಕೇಂದ್ರವಾಗಿಸುವ ಉದ್ದೇಶದ ಸಂಕೇತವಾಗಿ ಕಣ್ಣೂರು ವಿವಿಯ ಮಂಜೇಶ್ವರ ಕ್ಯಾಂಪಸ್ ಆರಂಭಗೊಂಡಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. 

                   ಕಣ್ಣೂರು ವಿವಿಯ ಮಂಜೇಶ್ವರ ಕ್ಯಾಂಪಸ್ ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. 

              ಈ ವರ್ಷವೇ ಕಾನೂನು ಶಿಕ್ಷಣ ಆರಂಭಿಸುವ ಉದ್ದೇಶದಿಂದ ಕೋಸ್ರ್ನ ಪ್ರವೇಶಾತಿ ಕ್ರಮಪೂರ್ತಿಗೊಳಿಸಲಾಗಿದೆ. ಮುಂದಿನ ವರ್ಷ ಎಲ್.ಎಲ್.ಬಿ. ಕೋರ್ಸ್ ಆರಂಭಿಸಲು ಗುರಿಯಿರಿಸಲಾಗಿದೆ. ಮಂಜೇಶ್ವರ ಕ್ಯಾಂಪಸ್ ನ್ನು ಅಕಾಡೆಮಿಕ್ ಸಾಧನೆಯ ಕೇಂದ್ರವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಮುಂದಿನ 5 ವರ್ಷಗಳ ಅವಧಿಯಲ್ಲಿ ಇದನ್ನು ಭಾಷಾ ವೈವಿಧ್ಯ ಅಧ್ಯಯನ ಕೇಂದ್ರವಾಗಿ ಬೆಳೆಸಲು ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದವರು ನುಡಿದರು. 


                 ಕನ್ನಡ, ತುಳು, ಬ್ಯಾರಿ, ಕೊಂಕಣಿ, ಉರ್ದು ಸಹಿತ ಭಾಷೆಗಳಿಗೆ ಸೂಕ್ತ ಸ್ಥಾನ ಮಾನ ಒದಗಿಸಲು ಯತ್ನ ನಡೆಯಲಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುವ ವೇಳೆ ಕಾಸರಗೋಡು ಜಿಲ್ಲೆಗೂ ಅದರ ಪ್ರಯೋಜನ ಲಭಿಸಬೇಕಿದೆ. ಎಲ್ಲ ವಲಯಗಳಲ್ಲೂ ಕಾಸರಗೋಡು ಜಿಲ್ಲೆ ಏಳಿಗೆ ಕಾಣಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರಕಾರ ಯತ್ನ ನಡೆಸುತ್ತಿದೆ ಎಂದವರು ನುಡಿದರು. 


                                  ಕಣ್ಣೂರು ವಿವಿಯಲ್ಲಿ ಶಾಶ್ವತ ಶಿಕ್ಷಕರ ಕೊರತೆ ಪರಿಹಾರಕ್ಕೆ ಕ್ರಮ: ಸಚಿವೆ ಆರ್.ಬಿಂದು 

                ಕಣ್ಣೂರು ವಿವಿಯಲ್ಲಿ ಶಾಶ್ವತ ಶಿಕ್ಷಕರ ಕೊರತೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಆರ್.ಬಿಂದು ತಿಳಿಸಿದರು. 

                ಆನ್ ಲೈನ್ ಮುಖಾಂತರ ಜರುಗಿದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

                  ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲೇ ಉನ್ನತ ಶಿಕ್ಷಣ ಒದಗಿಸುವ ಸೌಲಭ್ಯ ಒದಗಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಈಗ 72 ಮಂದಿ ಶಾಶ್ವತ ಉಪನ್ಯಾಸಕರು, 113 ಕರಾರು ಮೇರೆಗಿನ ಉಪನ್ಯಾಸಕರು ಕಣ್ಣೂರು ವಿವಿಯಲ್ಲಿ ಕರ್ತವ್ಯದಲ್ಲಿದ್ದಾರೆ. ಸೂಕ್ತ ಪ್ರಮಾಣದ ಶಿಕ್ಷಕರ ಹುದ್ದೆಗಳನ್ನು ಸೃಷ್ಟಿಸಿ ಇಂದಿನ ಸಮಸ್ಯೆಗೆ ಪರಿಹಾರ ಕಾಣುವ ವಿಚಾರ ಪರಿಶೀಲನೆಯಲ್ಲಿದೆ ಎಂದವರು ತಿಳಿಸಿದರು. 




                ಶಾಸಕ ಎ.ಕೆ.ಎಂ.ಅಶ್ರಫ್ ಶಿಲಾಫಲಕ ಅನಾವರಣಗೊಳಿಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಉಪ ನ್ಯಾಯಮೂರ್ತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಎಂ.ಷುಹೈಬ್ ಮುಖ್ಯ ಅತಿಥಿಯಾಗಿದ್ದರು.  ಜಿಲ್ಲಾ ಪಂಚಾಯತ್ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಸರಿತಾ, ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಷಮೀಲಾ ಟೀಚರ್, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮಂಥೆರೋ ಮೊದಲಾದವರು ಉಪಸ್ಥಿತರಿದ್ದರು. ಕಣ್ಣೂರು ವಿವಿ ಉಪಕುಲಪತಿ ಪೆÇ್ರ.ಗೋಪಿನಾಥ್ ರವೀಂದ್ರನ್ ಸ್ವಾಗತಿಸಿದರು. ಸಿಂಡಿಕೆಟ್ ಸದಸ್ಯ ಡಾ.ಎ.ಅಶೋಕನ್ ವರದಿ ವಾಚಿಸಿದರು. ಉಪಕುಲಪತಿ ಪ್ರೊ. ಎ.ಸಾಬು ವಂದಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries