HEALTH TIPS

99 ರಾಷ್ಟ್ರಗಳ ಪ್ರಯಾಣಿಕರಿಗೆ ಕ್ವಾರಂಟೈನ್ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿದ ಭಾರತ

            ನವದೆಹಲಿಕೋವಿಡ್-19 ಸಾಂಕ್ರಾಮಿಕ ನಿರ್ಬಂಧ ಹೇರಲಾಗಿದ್ದ ಸುಮಾರು 20 ತಿಂಗಳ ನಂತರ 99 ರಾಷ್ಟ್ರಗಳಿಂದ ಆಗಮಿಸುವ ಪ್ರವಾಸಿಗರು ಕ್ವಾರಂಟೈನ್ ಇಲ್ಲದೆ ಮುಕ್ತವಾಗಿ ಪ್ರಯಾಣಿಸಲು ಸೋಮವಾರ ಅವಕಾಶ ನೀಡಲಾಗಿದೆ.

            ಕೇಂದ್ರ ಆರೋಗ್ಯ ಸಚಿವಾಲಯ ನವೆಂಬರ್ 1 ರಂದು ಅಂತಾರಾಷ್ಟ್ರೀಯ ಪ್ರವಾಸಿಗರಿಗಾಗಿ ಪರಿಷ್ಕರಿಸಲಾದ ಮಾರ್ಗಸೂಚಿ ಪ್ರಕಾರ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ , ಜರ್ಮನಿ, ಆಸ್ಟ್ರೇಲಿಯಾ, ನೆದರ್ ಲ್ಯಾಂಡ್ ಮತ್ತು ರಷ್ಯ ಸೇರಿದಂತೆ ಎ ಕೆಟಗರಿ ಪಟ್ಟಿಯಲ್ಲಿ ಬರುವ 99 ರಾಷ್ಟ್ರಗಳ, ಸಂಪೂರ್ಣ ಡೋಸ್ ಪಡೆದ ಪ್ರವಾಸಿಗರು ಕೋವಿಡ್-19 ಆರ್ ಟಿ- ಪಿಸಿಆರ್ ನೆಗೆಟಿವ್ ವರದಿ ಅಪ್ ಲೋಡ್ ಮಾಡುವುದರ ಹೊರತಾಗಿ ಸ್ವಯಂ ಘೋಷಣೆಯ ಫಾರಂ ಒಂದನ್ನು ಏರ್ ಸುವಿಧಾ ಪೋರ್ಟಲ್ ನಲ್ಲಿ ಸಲ್ಲಿಸಬೇಕಾಗುತ್ತದೆ.

             ಪರಸ್ಪರ ಸಂಬಂಧದ ಆಧಾರದ ಮೇಲೆ (ಎ ಕೆಟಗರಿ) ಅಡಿಯಲ್ಲಿ ಬರುವ ಈ ಎಲ್ಲಾ ರಾಷ್ಟ್ರಗಳ ಪ್ರವಾಸಿಗರಿಗೆ ಕ್ವಾರಂಟೈನ್ ಇಲ್ಲದೆ ಮುಕ್ತವಾಗಿ ದೇಶ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries