ಬೆಂಗಳೂರು: ತಮಿಳಿನಲ್ಲಿ ನಿರ್ಮಾಣಗೊಂಡು ತೆಲುಗು, ಹಿಂದಿ, ಕನ್ನಡ ಹಾಗೂ ಮಲೆಯಾಳಂಗೆ ಡಬ್ ಆಗಿ, ಅಮೆಜಾನ್ ಫ್ರೈಮ್‌ನಲ್ಲಿ ನಿನ್ನೆಯಷ್ಟೇ ಬಿಡುಗಡೆಯಾಗಿರುವ ಸೂರ್ಯಾ ನಟನೆಯ 'ಜೈ ಭೀಮ್' ಸಿನಿಮಾ ಹಿಂದಿ ಭಾಷಾ ವಿವಾದದ ಕಿಡಿ ಹೊತ್ತಿಸಿದೆ.
ಬೆಂಗಳೂರು: ತಮಿಳಿನಲ್ಲಿ ನಿರ್ಮಾಣಗೊಂಡು ತೆಲುಗು, ಹಿಂದಿ, ಕನ್ನಡ ಹಾಗೂ ಮಲೆಯಾಳಂಗೆ ಡಬ್ ಆಗಿ, ಅಮೆಜಾನ್ ಫ್ರೈಮ್‌ನಲ್ಲಿ ನಿನ್ನೆಯಷ್ಟೇ ಬಿಡುಗಡೆಯಾಗಿರುವ ಸೂರ್ಯಾ ನಟನೆಯ 'ಜೈ ಭೀಮ್' ಸಿನಿಮಾ ಹಿಂದಿ ಭಾಷಾ ವಿವಾದದ ಕಿಡಿ ಹೊತ್ತಿಸಿದೆ.
ಚಿತ್ರದ ಸನ್ನಿವೇಶವೊಂದರಲ್ಲಿ ನಟ ಪ್ರಕಾಶ್ ರೈ ಹಾಗೂ ಸಹನಟನ ನಡುವೆ ಸಂಭಾಷಣೆ ನಡೆಯುತ್ತಿರುತ್ತದೆ. ಈ ವೇಳೆ ಹಿಂದಿಯಲ್ಲಿ ಮಾತನಾಡಿದ ಸಹನಟನಿಗೆ ಅಧಿಕಾರಿಯಾಗಿ ನಟಿಸಿರುವ ಪ್ರಕಾಶ್ ರಾಜ್ ಕೆನ್ನೆಗೆ ಭಾರಿಸುತ್ತಾರೆ. 'ತಮಿಳಿನಲ್ಲಿ ಮಾತನಾಡು' ಎಂದು ಗದರಿಸುತ್ತಾರೆ. ನಂತರ ಆತ ತಮಿಳಿನಲ್ಲಿ ಮಾತನಾಡುತ್ತಾನೆ.
ಈ ಸನ್ನಿವೇಶ ಇದೀಗ ಭಾಷಾ ವಿವಾದದ ಕಿಡಿ ಹೊತ್ತಿಸಿದ್ದು, ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾ ಬಂದಿರುವ ದಕ್ಷಿಣ ಭಾರತದ ಅನೇಕರು ಪ್ರಕಾಶ್ ರಾಜ್ ಅವರನ್ನು ಹೊಗುಳುತ್ತಿದ್ದಾರೆ. ಆದರೆ, ಕೆಲವರು ಪ್ರಕಾಶ್ ರಾಜ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಯಾವ ಭಾಷೆ ಮಾತನಾಡಬೇಕು ಎಂಬುದು ಅವರ ಇಷ್ಟ. ಕೆನ್ನಗೆ ಹೊಡೆಯುವ ಅಧಿಕಾರವನ್ನು ಕೊಟ್ಟವರು ಯಾರು? ಎಂದು ಕೆಲವರು ಪ್ರಶ್ನಿಸಿದ್ದಾರೆ.
ಇನ್ನೂ ಕೆಲವರು ನಿರ್ದೇಶಕರು ಹೇಳಿದಷ್ಟು ನಟ ಪ್ರಕಾಶ್ ರಾಜ್ ಮಾಡಿದ್ದಾರೆ. ಇದಕ್ಕಾಗಿ ಅವರನ್ನು ವಿರೋಧಿಸುವುದು ತರವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೂರ್ಯಾ ಹಾಗೂ ಅವರ ಪತ್ನಿ ಜ್ಯೋತಿಕಾ ಒಡೆತನದ '2ಡಿ ಎಂಟರ್‌ಟೈನ್‌ಮೆಂಟ್' ಸಂಸ್ಥೆ ನಿರ್ಮಾಣ ಮಾಡಿರುವ 'ಜೈ ಭೀಮ್' ನ್ನು ಜ್ಞಾನವೇಲ ನಿರ್ದೇಶಿಸಿದ್ದಾರೆ. ನ್ಯಾಯಾಂಗ ಹಾಗೂ ಬಡವರ ಹೋರಾಟದ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಸೂರ್ಯಾ ಅವರು ಲಾಯರ್ ಚಂದ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಚಿತ್ರದಲ್ಲಿ ಪ್ರಕಾಶ್ ರಾಜ್, ರಾಜಿಶಾ ವಿಜಯನ್, ಲಿಜ್‌ಮೋಲ್ ಜೋಶ್ ಇದ್ದಾರೆ. ಕನ್ನಡ, ತೆಲುಗು ಹಾಗೂ ಮಲೆಯಾಳಂನಲ್ಲೂ ಈ ಚಿತ್ರ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಮೆಚ್ಚುಗೆಗಳಿಸುತ್ತಿದೆ.