ಕಾಸರಗೋಡು: ಸಾಹಿತ್ಯ, ಸಾಂಸ್ಕೃತಿಕ ಸಂಘಟನೆಯಾದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ನೂತನ ಅಧ್ಯಕ್ಷರಾಗಿ ಯಕ್ಷಗಾನ ಕಲಾವಿದ ಚನಿಯಪ್ಪ ನಾಯ್ಕ ಆಯ್ಕೆಯಾಗಿರುವರು. ಪ್ರಧಾನ ಕಾರ್ಯದರ್ಶಿ ಛಾಯಾಗ್ರಾಹಕ, ಪತ್ರಕರ್ತ ಅಖಿಲೇಶ್ ನಗುಮುಗಂ ಮತ್ತು ಕೋಶಾಧಿಕಾರಿ ಸಂಘಟಕ ಝಡ್.ಎ.ಕಯ್ಯಾರು ಅವರನ್ನು ಆಯ್ಕೆಮಾಡಲಾಗಿದೆ.