ತಿರುವನಂತಪುರ: ಹೋಟೆಲ್ ಗಳಲ್ಲಿ ಹಲಾಲ್ ಬೋರ್ಡ್ ಹಾಕಿರುವುದನ್ನು ಯುಡಿಎಫ್ ಸಂಚಾಲಕ ಎಂ.ಎಂ.ಹಸನ್ ಟೀಕಿಸಿದ್ದಾರೆ. ಹೋಟೆಲ್ ಗಳು ಹಲಾಲ್ ಬೋರ್ಡ್‍ಗಳನ್ನು ಏಕೆ ಹಾಕುತ್ತವೆ ಎಂದು ಹಸನ್ ಕೇಳಿರುವರು. ಹೋಟೆಲ್ ಗಳಿಗೆ ಹೋಗಿ ಬೇಕಾದ ಆಹಾರ ಸೇವಿಸಿದರೆ ಸಾಲದೇ ಎಂದು ಕೇಳಿರುವರು. ಹಲಾಲ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಹಸನ್ ಕೂಡ ಸಾರ್ವಜನಿಕವಾಗಿ ಹಲಾಲ್ ಸಂಸ್ಕøತಿ ವಿರುದ್ಧ ಹರಿಹಾಯ್ದಿದ್ದಾರೆ.
ಆದರೆ, ಹಲಾಲ್ ವಿವಾದವು ಕೇರಳದ ಧಾರ್ಮಿಕ ಸಾಮರಸ್ಯವನ್ನು ಹಾಳು ಮಾಡುವ ಕ್ರಮವಾಗಿದೆ ಎಂದು ಸಿಪಿಎಂ ಪಾಲಿಟ್‍ಬ್ಯುರೊ ಸದಸ್ಯ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ. ಆರ್ ಎಸ್ ಎಸ್ ನ ಕ್ರಮವು ಸಮುದಾಯವನ್ನು ಧಾರ್ಮಿಕವಾಗಿ ಪ್ರತ್ಯೇಕಿಸುವುದಾಗಿದೆ ಮತ್ತು ಕೇರಳ ಸಮುದಾಯ ಇದನ್ನು ಯಾವುದೇ ರೀತಿಯಲ್ಲಿ ಒಪ್ಪಿಕೊಳ್ಳುವುದಿಲ್ಲ ಎಂದು ಕೊಡಿಯೇರಿ ಪ್ರತಿಪಾದಿಸಿರುವರು.