ತಿರುವನಂತಪುರ: ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಕ್ಷೇತ್ರದಲ್ಲಿ ಎಂಟು ಲಕ್ಷ ಹೊಸ ಅವಕಾಶಗಳನ್ನು ತೆರೆಯಲಾಗಿದೆ ಎಂದು ಕೇಂದ್ರ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಐಟಿ ಮತ್ತು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಕೇರಳ ಉತ್ತಮ ಸಾಮಥ್ರ್ಯ ಹೊಂದಿದ್ದು, ರಾಜ್ಯವು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕೇಂದ್ರ ಸಚಿವರಾದ ನಂತರ ರಾಜೀವ್ ಚಂದ್ರಶೇಖರ್ ಅವರು ಟೆಕ್ನೋಪಾರ್ಕ್‍ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಅವರು ಟೆಕ್ನೋಪಾರ್ಕ್‍ನ ಸಿ ಡಾಕ್‍ನಲ್ಲಿ ಸೈಬರ್ ಫೆÇರೆನ್ಸಿಕ್ಸ್ ಗ್ರೂಪ್‍ನ ಹೊಸ ಪ್ರಯೋಗಾಲಯವನ್ನು ನಿನ್ನೆ ಉದ್ಘಾಟಿಸಿ ಮಾತನಾಡಿದರು.
ಎಲೆಕ್ಟ್ರಾನಿಕ್ಸ್ ಐಟಿ ಕ್ಷೇತ್ರದ ಅಪಾರ ಸಾಮಥ್ರ್ಯವನ್ನು ಹಂಚಿಕೊಂಡ ಅವರು ಕೊರೋನಾ ಬಿಕ್ಕಟ್ಟಿನಿಂದ ಯಶಸ್ವಿಯಾಗಿ ಪಾರಾಗಿರುವ ಭಾರತಕ್ಕೆ ಈಗ ಭಾರಿ ಹೂಡಿಕೆಗಳು ಬರುತ್ತಿವೆ ಎಂದು ಹೇಳಿದರು. ರಾಜೀವ್ ಚಂದ್ರಶೇಖರ್ ಅವರು ಕೇರಳದಲ್ಲಿ ದೊಡ್ಡ ಉದ್ಯಮಗಳು ಇಲ್ಲದಿರುವುದು ಕೊರತೆಯಾಗಿದೆ ಎಂದು ತಿಳಿಸಿದರು.
ಡಿಜಿಟಲ್ ಇಂಡಿಯಾ ಎಂಬ ಪ್ರಧಾನಮಂತ್ರಿಯವರ ದೂರದೃಷ್ಟಿಯಲ್ಲಿ ಪ್ರಮುಖವಾದ ಎಲೆಕ್ಟ್ರಾನಿಕ್ಸ್ ವಿನ್ಯಾಸ ಪರಿಸರ ಸ್ನೇಹೀ ವ್ಯವಸ್ಥೆಯಾಗಿದೆ. ಈ ದೃಷ್ಟಿಕೋನವನ್ನು ಸಾಧಿಸಲು ಸಿ-ಡಾಕ್‍ನಂತಹ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಹೆಚ್ಚು ಶ್ರಮಿಸಬೇಕಾಗಿದೆ. ಕೇರಳದಲ್ಲಿ ಸ್ಟಾರ್ಟ್ ಅಪ್ ವ್ಯವಸ್ಥೆಗೆ ಎಲ್ಲ ಬೆಂಬಲ ನೀಡಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.