ಕಾಸರಗೋಡು: ಕಾಞಂಗಾಡು ಜಿಲ್ಲಾ ಕಾರಾಗೃಹದಲ್ಲಿ ಕಳೆಯುತ್ತಿರುವ ಕೈದಿಗಳ ಮಾನಸಿಕ ಒತ್ತಡ ಕಡಿಮೆಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಕಾರಾಗೃಹ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಞಂಗಾಡು ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಕುಮಾರ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಕಾರಾಗೃಹ ಮೇಲ್ವಿಚಾರಕ ಕೆ. ವೇಣು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಸ್ಪತ್ರೆಯ ಮಾನಸಿಕ ರಓಗ ತಜ್ಞ ಡಾ. ಶ್ರೀಜಿತ್, ವೈದ್ಯಾಧಿಕಾರಿ ಡಾ. ಸಿದ್ಧಾರ್ಥ್‍ರವೀಂದ್ರನ್, ಸ್ಪೆಶ್ಯಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಪಿ. ಬಿಂದು, ಹಸಿರು ಕೇರಳ ಜಿಲ್ಲಾ ಸಮನ್ವಯಾಧಿಕಾರಿ ಎಂ.ಪಿ ಸುಬ್ರಹ್ಮಣ್ಯನ್, ಮೃದುಲಾ ಪಿ.ನಾಯರ್, ಪಿ.ಕೆ. ಷಣ್ಮುಖನ್, ಜಿಮ್ಮಿ ಜಾನ್ಸನ್, ಸಹಾಯಕ ಕಾರಾಗೃಹ ಅಧಿಕಾರಿ ಎನ್.ಪಿ ಪುಷ್ಪರಾಜು, ಮಧು, ಧನರಾಜ್, ಸೋಜಾ ನಾಲಕತ್, ನಾರಾಯಣನ್ ಉಪಸ್ಥಿತರಿದ್ದರು.