ಕಾಸರಗೋಡು: ಯುವಮೋರ್ಚಾ ಮುಖಂಡರಾಗಿದ್ದ ಸ್ವರ್ಗೀಯ ಕೆ.ಟಿ ಜಯಕೃಷ್ಣನ್ ಮಾಸ್ಟರ್ ಬಲಿದಾನ ದಿನಾಚರಣೆ ಡಿ.1ರಂದು ಕಾಞಂಗಾಡಿನಲ್ಲಿ ಜರುಗಲಿದೆ. ಯುವಮೋರ್ಚಾ ಜಿಲ್ಲಾ ಸಮಿತಿ ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಬೃಹತ್ ರ್ಯಾಲಿ, ಸಾರ್ವಜನಿಕ ಸಮಾರಂಭ ನಡೆಯುವುದು. ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿಯಲ್ಲಿ ಜರುಗಿತು. ಈ ಸಂದರ್ಭ ಬಲಿದಾನ ದಿನಾಚರಣೆಯ ಪ್ರಚಾರ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.
ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಕೆ. ಶ್ರೀಕಾಂತ್ ಸಮಾರಂಭ ಉದ್ಘಾಟಿಸಿ, ಮಾತನಾಡಿ, ಕೇರಳದಲ್ಲಿ ಭಯೋತ್ಪಾದನಾ ನಂಟು ಹೊಂದಿರುವ ಎಸ್‍ಡಿಪಿಐ-ಪಾಪ್ಯುಲರ್ ಫ್ರಂಟ್‍ನ ಬೆಂಬಲ ಪಡೆದಿರುವ ಸಿಪಿಎಂ, ಇಂತಹ ಸಂಘಟನೆಗಳು ನಡೆಸುವ ಕ್ರಿಮಿನಲ್ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳದೆ ಅವರು ನಡೆಸುವ ಕೃತ್ಯಗಳಿಗೆ ಸಹಾಯ ಒದಗಿಸುತ್ತಿದೆ. ಪೊಲೀಸ್ ಮತ್ತು ಆಡಳಿತ ಇಂತಹ ಮೂಲಭೂತವಾದಿಗಳ ವಿರುದ್ಧ ಕ್ರªಮ ಕೈಗೊಳ್ಳಲು ಮುಂದಾಗದಿದ್ದಲ್ಲಿ, ರಾಜ್ಯದಲ್ಲಿ ಬಿಜೆಪಿ ಪ್ರಬಲ ಹೋರಾಟಕ್ಕೆ ನೇತೃತ್ವ ನೀಡಲಿರುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎ.ವೇಲಾಯುಧನ್, ವಿಜಯ್ ಕುಮಾರ್ ರೈ, ಪಿ.ರಮೇಶ್, ಧನಂಜಯ ಮಧೂರ್, ಬಲ್‍ರಾಜ್, ಎನ್. ಮಧು ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ಕೆ.ಶ್ರೀಕಾಂತ್, ರವೀಶ ತಂತ್ರಿ ಕುಂಟಾರು, ಪ್ರಪುಲ್‍ಕೃಷ್ಣನ್, ಕೊವ್ವಲ್ ದಾಮೋದರನ್ ಅವರು ರಕ್ಷಾಧಿಕಾರಿಗಳಾಗಿರುವ ಸ್ವಾಗತ ಸಮಿತಿಯನ್ನು ರಚಿಸಲಾಯಿತು.