ಪಣಜಿ: ಭಾರತದ 52ನೆಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾದಲ್ಲಿ ಚಾಲನೆ ಸಿಕ್ಕಿದ್ದು, ಜಗಮಗಿಸುವ ಬಣ್ಣದ ಲೋಕ ಅನಾವರಣಗೊಂಡಿದೆ. ವಿಶೇಷವೆಂದರೆ ಈ ಸಲದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜತೆಗೇ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಕೂಡ ನಡೆಯಲಿದೆ.

ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಸಂದರ್ಭದಲ್ಲಿ ಮಾತನಾಡುತ್ತ, ಚಲನಚಿತ್ರೋತ್ಸವದ ಮೂಲಕ ಹಲವಾರು ಸಾಮಾಜಿಕ ಹಾಗೂ ಸಾಂಸ್ಕೃತಿಕ ನೈತಿಕತೆ ಅರಿಯಲು ಸಾಧ್ಯ ಎಂದು ಹೇಳಿದ ಅವರು, ಸಿನಿಮಾ ಕ್ಷೇತ್ರದಿಂದ 75 ಯುವ ಸೃಜನಶೀಲ ಪ್ರತಿಭಾವಂತರಿಗೆ ವಿಶೇಷ ಅವಕಾಶ ಕೊಡುವ ಯೋಜನೆ ಕುರಿತು ಪ್ರಸ್ತಾಪಿಸಿದರು.
ಡ್ರೀಮ್ ಗರ್ಲ್ ಎಂದೇ ಹೆಸರಾಗಿರುವ ಖ್ಯಾತ ನಟಿ ಹಾಗೂ ಸಂಸದೆ ಕೂಡ ಆಗಿರುವ ಹೇಮಮಾಲಿನಿ ಅವರಿಗೆ ಇಂಡಿಯನ್ ಫಿಲ್ಮ್ ಪರ್ಸನಾಲಿಟಿ ಆಫ್ ದ ಇಯರ್-2021 ಪ್ರಶಸ್ತಿ ನೀಡಲಾಯಿತು.
ಹಲವಾರು ಮೊದಲುಗಳಿಗೂ ಈ ಸಲದ ಚಿತ್ರೋತ್ಸವ ಸಾಕ್ಷಿಯಾಗಿದೆ. ಮೊದಲ ಬಾರಿಗೆ ಈ ಸಿನಿಮೋತ್ಸವದಲ್ಲಿ ಬ್ರಿಕ್ಸ್ ಪಾಲ್ಗೊಳ್ಳುತ್ತಿದೆ. ಅಂದರೆ ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕ (BRICS) ಸಿನಿಮಾಗಳು ಈ ಸಲದ ಉತ್ಸವದಲ್ಲಿ ಇರಲಿವೆ. ಅಲ್ಲದೆ ಈ ಸಲ ಒಟಿಟಿಗೂ ಅವಕಾಶವಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ತಿಳಿಸಿದ್ದಾರೆ.
ಕೋವಿಡ್ ಕರಿಛಾಯೆಯ ನಡುವೆಯೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ತನ್ನ ಹೊಳಲು ಕಳೆದುಕೊಂಡಿಲ್ಲ. ಕಳೆದ ಸಲ 69 ದೇಶಗಳಿಂದ ಸಿನಿಮಾಗಳು ಬಂದಿದ್ದರೆ ಈ ಸಲ 96 ದೇಶಗಳಿಂದ 624 ಸಿನಿಮಾಗಳು ಬಂದಿವೆ. ಅದರಲ್ಲೂ ಭಾರತದ 18 ಭಾಷೆಗಳ 44 ಚಿತ್ರಗಳು ಇಂಡಿಯನ್ ಪನೋರಮಾದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.