ಕುಂಬಳೆ: ಬದಿಯಡ್ಕದಲ್ಲಿ ಕಾರ್ಯನಿರ್ವಹಿಸುತ್ತಿರುವ "ಬೆರ್ಕ" ಎಂಬ ಸಂಸ್ಥೆಯ ಪೆಟ್ರೋಲ್ ಪಂಪಿನಲ್ಲಿ ಪ್ರಬಂಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಾಡೂರಿನ ಪ್ರವೀಣ್ ಪೂಜಾರಿ ಎಂಬ ಯುವಕನನ್ನು ಅದೇ ಸಂಸ್ಥೆಯಲ್ಲಿ ದುಡಿಯುತ್ತಿರುವ ಅನ್ಯಮತೀಯ ನೌಕರ ಸಂಸ್ಥೆಯ ಯಜಮಾನರ ಸಹಕಾರದೊಂದಿಗೆ ಮತಾಂತರ ಮಾಡುವ ಉದ್ದೇಶದಿಂದ ಅಪಹರಣ ಮಾಡಿದಂತಹ ಘಟನೆ ಇತ್ತೀಚೆಗೆ ನಡೆದಿದ್ದು, ಪ್ರವೀಣ್ ಪೂಜಾರಿಯವರ ಬಾಡೂರಿನ ಮನೆಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಭಾನುವಾರ ಭೇಟಿ ನೀಡಿ ತಂದೆ,ತಾಯಿಗೆ ಸಾಂತ್ವನ ಹೇಳಿದರು.
ಪ್ರವೀಣ್ ಪೂಜಾರಿಯನ್ನು ಪತ್ತೆ ಹಚ್ಚುವ ವಿಷಯದಲ್ಲಿ ಕೇರಳ ಪೋಲೀಸರ ಅನಾಸ್ತೆಯ ಬಗ್ಗೆ ಅವರ ತಂದೆ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ, ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಧನಂಜಯ ಮಧೂರು, ಬಿಜೆಪಿ ಪುತ್ತಿಗೆ ಪಂಚಾಯತಿ ಅಧ್ಯಕ್ಷ ಸುನಿಲ್ ಅನಂತಪುರ ಕಾರ್ಯದರ್ಶಿ ಸ್ವಾಗತ್ ಸೀತಂಗೊಳಿ ಉಪಸ್ಥಿತರಿದ್ದರು.