ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮಜಿಬೈಲು ಸರ್ಕಾರಿ ಕಿರಿಯ ಪ್ರಾಥಮಿಕÀ ಶಾಲೆಯಿಂದ ಮುಖ್ಯ ಶಿಕ್ಷಕಿಯಾಗಿ ಭಡ್ತಿಗೊಂಡು ಮುಳಿಂಜ ವಿದ್ಯಾ ಸಂಸ್ಥೆಗೆ ವರ್ಗಾವಣೆಗೊಂಡ ಚಿತ್ರಾವತಿ ವೈ ರಾವ್ ಚಿಗುರುಪಾದೆಯವರನ್ನು ಇತ್ತೀಚೆಗೆ ಶ್ರೀ ಅಯ್ಯಪ್ಪ ಭಜನಾಮಂದಿರ ಮಜಿಬೈಲು ಕ್ಷೇತ್ರದಲ್ಲಿ ಗಣ್ಯರ ಸಮಕ್ಷಮದಲ್ಲಿ ಅಭಿನಂದಿಸಿ ಗೌರವಿಸಲಾಯಿತು.