ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದಲ್ಲಿ ದೀಪಾವಳಿ ಪರ್ವದ ಆಚರಣೆಯನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಿ ಬಲಿಪಾಡ್ಯದಂದು ತುಳಸೀ ಪೂಜೆಯನ್ನು ಮೊದಲ್ಗೊಂಡು ಹನ್ನೆರಡು ದಿವಸಗಳ ಪರ್ಯಂತ ನಿರಂತರ ತುಳಸೀ ಪೂಜೆಯನ್ನು ನೆರವೇರಿ, ಉತ್ಥಾನ ದ್ವಾದಶಿಯಂದು ತುಳಸೀ ವೃಂದಾವನದಲ್ಲಿ ನೆಲ್ಲಿಕಾಯಿ ಗಿಡವನ್ನು ನೆಟ್ಟು ವಿಶೇóಷ ಪೂಜೆಯನ್ನು ನೆಲ್ಲಿಕಾಯಿಯ ತುಪ್ಪದ ದೀಪಗಳನ್ನು ಬೆಳಗಿಸಿ ಆರಾಧನೆಗೊಂಡು ಕ್ಷೀರಾಬ್ಧೀಷೇಕ ವಿಶೇಷ ಸೇವೆಯನ್ನು ಭಕ್ತಿ ಶ್ರದ್ಧೆಗಳಿಂದ ನೆರವೇರಿಸಲಾಯಿತು.
ತುಳಸೀ ಪೂಜಾ ಕ್ಷೀರಾಭಿಷೇಕ ಸಲುವಾಗಿ ಮೊಕ್ತೇಸರ ಪವಿತ್ರಪಾಣಿಯವರ ನೇತೃತ್ವದಲ್ಲಿ ರಾಮಕೃಷ್ಣ ಪ್ರಸಾದ್ ಹಾಗೂ ಶಿವರಾಜ ಇವರ ಸಹಕಾರದೊಂದಿಗೆ ವಿಶೇಷ ಸೇವೆಗಳು ನಡೆಯಿತು.