ತಿರುವನಂತಪುರ: ಕೆಎಸ್‍ಆರ್‍ಟಿಸಿಯಲ್ಲಿ ಖಾಸಗಿ ಸಹಭಾಗಿತ್ವವನ್ನು ಬಳಸಿಕೊಂಡು ಆಧುನೀಕರಣವನ್ನು ಖಚಿತಪಡಿಸಲಾಗುವುದು ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದರು. ಪ್ರಸ್ತುತ ಕೆಎಸ್‍ಆರ್‍ಟಿಸಿಗೆ ಸ್ವಂತವಾಗಿ ಆಧುನೀಕರಣ ಮಾಡುವ ಆರ್ಥಿಕ ಸಾಮಥ್ರ್ಯವಿಲ್ಲ. ಇದು ಖಾಸಗಿ ಸಹಭಾಗಿತ್ವದ ನಿರ್ಧಾರಕ್ಕೆ ಕಾರಣವಾಯಿತು ಎಂದು ಆಂಟನಿ ರಾಜು ವಿಧಾನಸಭೆಯಲ್ಲಿ ಹೇಳಿದರು.
ಬಸ್ ಶೆಲ್ಟರ್ ನಿರ್ಮಾಣ ಸೇರಿದಂತೆ ಖಾಸಗಿ ಸಹಭಾಗಿತ್ವದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಎಲ್ಲಾ ಡಿಪೆÇೀಗಳಿಂದ ಶಬರಿಮಲೆಗೆ ವಿಶೇಷ ಸೇವೆಗಳನ್ನು ಅನುಮತಿಸಲಾಗಿದೆ. ಈವರೆಗೆ 200 ಬಸ್‍ಗಳನ್ನು ಮಂಜೂರು ಮಾಡಲಾಗಿದೆ ಎಂದರು.
ಎಲೆಕ್ಟ್ರಿಕ್ ಬಸ್ ಗಳನ್ನು ಬಾಡಿಗೆಗೆ ಪಡೆದು ಕೆಎಸ್ ಆರ್ ಟಿಸಿಗೆ ನಷ್ಟವಾಗುತ್ತಿದೆ. ಹಾಗಾಗಿ ಸಿಎನ್‍ಜಿ ಬಸ್‍ಗಳಿಗೆ ಒತ್ತು ನೀಡಲಾಗಿದ್ದು, ಈ ಬಾರಿ ಬಸ್‍ಗಳ ಗುತ್ತಿಗೆ ಒಪ್ಪಂದವನ್ನು ನವೀಕರಿಸುವುದಿಲ್ಲ ಎಂದು ಸಚಿವ ಆಂಟನಿರಾಜು ತಿಳಿಸಿದ್ದಾರೆ.