ಉಪ್ಪಳ: 200ಕ್ಕೂ ಅಧಿಕ ಟೈಪೋಗ್ರಾಫಿ ಚಿತ್ರರಚನೆಗೈದು ಏಶ್ಯನ್ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲೆ ಸೃಷ್ಟಿಸಿದ ಉಪ್ಪಳದ ರಾಫಿಯಾ ಅವರಿಗೆ ಮಾಜಿ ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರು ಭಾನುವಾರ ಪ್ರಮಾಣಪತ್ರ, ಗೌರವ ಫಲಕ ಹಸ್ತಾಂತರಿಸಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಸೃಷ್ಟಿಸಿ ಕಾಸರಗೋಡು ಜಿಲ್ಲಾಧಿಕಾರಿಗಳಿಂದ ಗೌರವ ಫಲಕ ಸ್ವೀಕರಿಸಿದ ಬೆನ್ನಲ್ಲೇ ಇದೀಗ ಏಶ್ಯನ್ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲಾಗಿದ್ದಾರೆ. ಟೈಫೆÇೀಗ್ರಾಫಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮಾಜಿ ಆರೋಗ್ಯ ಸಚಿವೆ ಶೈಲಜಾ ಟೀಚರ್, ಮಹಾತ್ಮಾಗಾಂಧಿ, ಸಿನಿಮಾ ತಾರೆಯರಾದ ಮೋಹನ್ ಲಾಲ್, ಮಮ್ಮುಟ್ಟಿ, ರಾಜಕೀಯ ನೇತಾರು, ಸಿನಿಮಾ ತಾರೆಯರು, ಕ್ರಿಕೆಟ್ ತಾರೆಯರು, ಗಣ್ಯ ವ್ಯಕ್ತಿಗಳ ಸಹಿತ ನೂರಕ್ಕಿಂತ ಅಧಿಕ ವ್ಯಕ್ತಿಗಳ ಭಾವಚಿತ್ರಗಳನ್ನು ರಚಿಸಿ ಸಾಧನೆಗೈದಿದ್ದಾರೆ. ಮಲಯಾಳ ಹಾಗೂ ಇಂಗ್ಲೀಷ್ ಅಕ್ಷರಗಳನ್ನು ಉಪಯೋಗಿಸಿ ರಾಫಿಯಾ ಚಿತ್ರಗಳನ್ನು ರಚಿಸಿದ್ದಾರೆ. ಬೇಕೂರು ಸರ್ರ್ಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪೂರೈಸಿರುವ ಇವರು ಮಂಗಳೂರಿನ ವಿವಿಧ ಕಾಲೇಜಿನಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಚಿಕ್ಕಂದಿನಲ್ಲೇ ಚಿತ್ರರಚನೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಶಾಲಾ ಕಲೋತ್ಸವಗಳಲ್ಲಿ ಚಿತ್ರ ರಚನೆ, ಪೈಂಟಿಂಗ್, ಪೆನ್ಸಿಲ್ ಡ್ರಾಯಿಂಗ್ ಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದರು. ಮುಂದೆ ಪದವಿ ಶಿಕ್ಷಣವನ್ನು ಕೈಗೊಳ್ಳುವಾಗಲೂ ಚಿತ್ರರಚನೆಯ ಆಸಕ್ತಿಯನ್ನು ಉಳಿಸಿಕೊಂಡಿದ್ದರು. ಮೂಡುಬಿದಿರೆ ಮೆಡಿಕಲ್ ಬಯೋಕೆಮಿಸ್ಟ್ರಿ ಉಪನ್ಯಾಸಕಿಯಾಗಿದ್ದರು. ಕಾಸರಗೋಡು ನಿವಾಸಿಯೂ ಕೊಲ್ಲಿ ಉದ್ಯೋಗಿ ಇರ್ಷಾದ್ ರವರ ಪತ್ನಿಯಾಗಿರುವ ಇವರು ಉಪ್ಪಳ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್-ಅಂಗನವಾಡಿ ಕಾರ್ಯಕರ್ತೆ ಜುಬೈದ ದಂಪತಿ ಪುತ್ರಿಯಾಗಿದ್ದಾರೆ. ತನ್ನ ಚಿತ್ರರಚನೆಗೆ ಕುಟುಂಬದ ಎಲ್ಲಾ ರೀತಿಯ ಪೆÇ್ರೀತ್ಸಾಹ ಲಭಿಸುತ್ತಿದೆ ಎಂದು ರಾಫಿಯಾ ತಿಳಿಸುತ್ತಾರೆ. ಚಿತ್ರರಚನೆಯನ್ನು ಮುಂದುವರಿಸುತ್ತಿದ್ದಾರೆ.