ಕಾಸರಗೋಡು: ಲಕ್ಷ ವೃಕ್ಷ ಬೆಳೆಸಿದ ಮಾತೆ, ಪದ್ಮಶ್ರೀ ಪುರಸ್ಕøತೆ ತುಳಸೀಗೌಡ ಅವರಿಗೆ ಕಾಸರಗೋಡಿನ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆ ಕುಮಟಾದ ಮುಸುಗುಪ್ಪೆಯಲ್ಲಿ ಜರುಗಿತು. ಕಾಸರಗೋಡಿನ ರಂಗಚಿನ್ನಾರಿ ಸಂಸ್ಥೆ ವತಿಯಿಂದ ಸನ್ಮಾನ ಆಯೋಜಿಸಲಾಗಿತ್ತು.
ಐಕ್ಯ ಸರ್ಕಾರೇತರ ಸಂಸ್ಥೆ (ರಿ)ಕುಮಟ ಹಾಗೂ ಉತ್ತರ ಕನ್ನಡ ಬ್ಲಡ್ ಬ್ಯಾಂಕ್ ಕುಮಟಾ ಆಶ್ರಯದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ, ಚಿತ್ರನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅನುವಾದಿಸಿರುವ ಕೃತಿಗಳ ಬಿಡುಗಡೆ ಸಮಾರಂಭದ ಸಂದರ್ಭ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಸರಗೋಡು ಚಿನ್ನಾ ಅವರು ಪದ್ಮಶ್ರೀ ತುಳಸೀ ಗೌಡ ಅವರನ್ನು ಶಾಲು ಹೊದಿಸಿ, ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ಅವರು, ಪದ್ಮಶ್ರೀ ಪುಸ್ಕøತ ಹಾಲಕ್ಕಿ ಸಮುದಾಯದ ಇಬ್ಬರು ಮಹಾನ್ ಸಾಧಕಿಯರಾದ ಸುಕ್ರಿ ಗೌಡ ಹಾಗೂ ತುಳಸೀ ಗೌಡ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಆದರೆ ಈ ಸಮಾಜ ವಿವಿಧ ಸವಲತ್ತುಗಳಿಗಾಗಿ ನಡೆಸುತ್ತಿರುವ ಹೋರಾಟವನ್ನು ನಾವೆಲ್ಲರೂ ಮನಗಾಣಬೇಕಾಗಿದೆ ಎಂದು ತಿಳಿಸಿದರು.
ಕೊಂಕಣಿ ಅಕಾಡಮಿ ಸದಸ್ಯ ಚಿದಾನಂದ ಭಂಡಾರಿ, ಹಾಲಕ್ಕಿ ನೌಕರರ ಸಂಘದ ಪ್ರತಿನಿಧಿ ಡಾ. ಶ್ರೀಧರ ಗೌಡ ಉಪ್ಪಿನಗಣಪತಿ, ಒಕ್ಕಲಿಗ ಸಮಾಜದ ಮುಖಂಡ ರಾಜೇಶ್, ನಟ ಶಶಿಭೂಶಣ್ ಕಿಣಿ, ಡಾ. ಸುಧೇಶ್ ರಾವ್, ಅನಿಲ್ ನಾವೂರ್ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿದ ತುಳಸೀಗೌಡ ಅವರು ತೆಂಗಿನ ಸಸಿಯನ್ನು ಕಾಸರಗೋಡು ಚಿನ್ನಾ ಅವರಿಗೆ ಹಸ್ತಾಂತರಿಸಿದರು.