ಕಾಸರಗೋಡು: ಹೈದರಾಬಾದಿನಲ್ಲಿ ನ. 12ರಿಂದ ನಡೆಯಲಿರುವ ಅಂತಾರಾಜ್ಯ ಏಕದಿನ ಕ್ರಿಕೆಟ್ ಪಂದ್ಯಾಟಕ್ಕೆ ಅಂಡರ್ 25 ಕೇರಳ ಟೀಮ್‍ನಲ್ಲಿ ಶ್ರೀ ಹರಿ ನಾಯರ್ ಸ್ಥಾನ ಪಡೆದುಕೊಂಡಿದ್ದಾರೆ. ಎಡಗೈ ಸ್ಪಿನ್ ಬೌಲರ್ ಆಗಿರುವ ಶ್ರೀಹರಿ ನಾಯರ್ ಅಂಡರ್ 23 ಹಾಗೂ ಅಂಡರ್ 25 ತಂಡದಲ್ಲಿ ಜಿಲ್ಲಾ ಕಪ್ತಾನರಾಗಿದ್ದರು.
ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಅಕಾಡಮಿ ಹಾಗೂ ಎರ್ನಾಕುಳಂ ಕೆ.ಸಿ.ಎ ಸೀನಿಯರ್ ಅಕಾಡಮಿಯಲ್ಲಿ ಪಳಗಿ ಬಂದಿರುವ ಶ್ರೀಹರಿ ನಾಯರ್ ಅವರು ನೀಲೇಶ್ವರ ನಿವಾಸಿಯಾಗಿದ್ದಾರೆ.