ಮಂಜೇಶ್ವರ: ಅಯೋಧ್ಯೆಯ ವಿವಾದಿತ ಕಟ್ಟಡದ ಮೇಲೆ ಪ್ರಥಮ ಬಾರಿಗೆ ಹಿಂದೂ ಧ್ವಜ ಇರಿಸಿದ ರಾಮ ಕೊಠಾರಿ ಹಾಗೂ ಶರದ್ ಕೊಟ್ಟಾರಿ ಅವರ ಬಲಿದಾನ್ ದಿವಸ ಪ್ರಯುಕ್ತ ನವಂಬರ್ 7. ಹೊಸಂಗಡಿಯ ಪ್ರೇರಣಾ ಜಿಲ್ಲಾ ಕಾರ್ಯಾಲಯದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ವಿಹಿಂಪ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ ದೀಪ ಬೆಳಗಿಸಿ ಬೆಳಿಗ್ಗೆ 9 ಕ್ಕೆ ಉದ್ಘಾಟಿಸುವರು. ವಿಹಿಂಪ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಉದ್ಯಾವರ ಮಾಡ ಶ್ರೀಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಡಾ.ಜಯಪಾಲ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕೆಎಂಸಿ ಆಸ್ಪತ್ರೆ ಮಂಗಳೂರಿನ ರಕ್ತನಿಧಿ ಅಧಿಕಾರಿ ಡಾ. ಭವಾನಿ ಶಂಕರ್ ಉಪಸ್ಥಿತರಿರುವರು. ಭಜರಂಗದಳ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ಮುರಳಿ ಕೃಷ್ಣ ಹಸಂತಡ್ಕ ಭದ್ದಿಕ್ ನೀಡುವರು.ಬಜರಂಗದಳ ಮಂಜೇಶ್ವರ ಪ್ರಖಂಡ ಸಂಯೋಜಕ ಆನಂದ ಬಾಯರು, ಮಂಜೇಶ್ವರ ಖಂಡ ಸಮಿತಿ ಸಂಯೋಜಕ ಅಭಿಲಾಷ್ ಬೆಂಗರೆ ಉಪಸ್ಥಿತರಿರುವರು. ಮಂಜೇಶ್ವರ ವಿಧಾನಸಭೆಗೆ ಒಳಪಟ್ಟ ಎಲ್ಲಾ ಸಂಘ, ಸಂಸ್ಥೆ ಭಜನಾ ಮಂದಿರ, ದೇವಸ್ಥಾನ, ವ್ಯಾಯಾಮಶಾಲೆ, ಆಟ್ರ್ಸ್ ಅಂಡ್ ಸ್ಫೋಟ್ರ್ಸ್ ಕ್ಲಬ್ ಗಳ ಹೆಚ್ಚಿನ ಕಾರ್ಯಕರ್ತ ಬಂಧುಗಳು ಸ್ವಇಚ್ಛೆಯಿಂದ ರಕ್ತದಾನಗೈದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.