ಪಾಲಕ್ಕಾಡ್: ಪಾಲಕ್ಕಾಡ್ ನ ಕಣ್ಣನ್ನೂರಿನಲ್ಲಿ ಗೋಣಿಚೀಲದಲ್ಲಿ ಶಸ್ತ್ರಾಸ್ತ್ರಗಳನ್ನು ಎಸೆದು ಹೋಗಿರುವುದು ಪತ್ತೆಯಾಗಿದೆ. ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಎಲಪ್ಪಲ್ಲಿಯಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಸಂಜಿತ್‍ನನ್ನು ಕೊಲೆಗೈದ ಪಾತಕಿಗಳು ಶಸ್ತ್ರಾಸ್ತ್ರ ಎಸೆದು ಪರಾರಿಯಾಗಿರಬಹುದೆಂದು ಸಂಶಯಿಸಲಾಗಿದೆ.
ನಾಲ್ಕು ರಾಡ್ ಗಳನ್ನು ಗೋಣಿಚೀಲಗಳಲ್ಲಿ ಸುತ್ತಿ ಎಸೆದಿರುವುದು ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಬಳಿಯ ಸರ್ವೀಸ್ ರಸ್ತೆ ಬಳಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇದನ್ನು ಕಂಡವರು ಠಾಣೆಗೆ ಮಾಹಿತಿ ನೀಡಿದ ಬಳಿಕ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸಿಐಎ ನೇತೃತ್ವದ ಪೋಲೀಸರು ಶಸ್ತ್ರಾಸ್ತ್ರಗಳನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದ್ದಾರೆ.
ನಾಲ್ಕು ಸರಳುಗಳಲ್ಲಿ ಎರಡು ತುಕ್ಕು ಹಿಡಿದಿರುವುದು ಕಂಡು ಬಂದಿದೆ. ಆದರೆ ಒಂದು ಬಹುಮಟ್ಟಿಗೆ ಹೊಸದು. ರಕ್ತದ ಕಲೆಗಳು ಅಥವಾ ಇತರ ಚಿಹ್ನೆಗಳು ಸ್ಪಷ್ಟವಾಗಿಲ್ಲ. ವೈಜ್ಞಾನಿಕ ಪರೀಕ್ಷೆಯ ನಂತರವಷ್ಟೇ ಎಲಪುಲ್ಲಿಯಲ್ಲಿ ನಡೆದ ಕೊಲೆಗೂ ಆಯುಧಗಳಿಗೂ ಸಂಬಂಧವಿದೆಯೇ ಎಂಬುದು ಖಚಿತವಾಗಲಿದೆ ಎಂದು ಸಿಐ ತಿಳಿಸಿದ್ದಾರೆ.
ಸಂಜಿತ್ ಸಾವಿಗೀಡಾದ 24 ಗಂಟೆಗಳ ನಂತರವೂ ಹಂತಕರನ್ನು ಪತ್ತೆಹಚ್ಚುವುದಾಗಲಿ ಯಾವುದೇ ಸಾಕ್ಷ್ಯವನ್ನು ಹುಡುಕುವಲ್ಲಿ ಪೋಲೀಸರು ವಿಫಲರಾಗಿದ್ದಾರೆ ಎಂದು ಬಿಜೆಪಿ ತೀವ್ರವಾಗಿ ಟೀಕಿಸಿದೆ.