2021ರ ಕೊನೆಯ ತಿಂಗಳಿಗೆ ಬಂದು ಮುಟ್ಟಿದ್ದೇವೆ. 2020ಕ್ಕೆ ಹೋಲಿಸಿದರೆ ಕೊರೊನಾ ಸ್ವಲ್ಪ ಕಡಿಮೆಯಾಗಿರುವುದರಿಂದ 2021 ಸ್ವಲ್ಪ ಪರ್ವಾಗಿರಲಿಲ್ಲ, ನಾವು ಆಚರಿಸಿಕೊಂಡು ಬರುತ್ತಿರುವ ಹಬ್ಬ-ಹರಿದಿನಗಳನ್ನು ನಮ್ಮ ನೆಂಟರಿಷ್ಟರು ಹಾಗೂ ಸ್ನೇಹಿತರ ಜೊತೆಗೂಡಿ ಆಚರಿಸಲು ಸಾಧ್ಯವಾಗಿದೆ. ಊರ ಹಬ್ಬಗಳು ನಡೆದಿವೆ.
ಇದೀಗ ಕಾರ್ತಿಕ ಮಾಸ ನಡೆಯುತ್ತಾ ಇದೆ, ಡಿಸೆಂಬರ್ 5ರಂದು ಮಾರ್ಗಶಿರ ಮಾಸ ಶುರುವಾಗುವುದು. ಈ ತಿಂಗಳು ಹಲವಾರು ಕಾರಣಗಳಿಂದಾಗಿ ತುಂಬಾನೇ ವಿಶೇಷವಾಗಿದೆ, ವಿವಾಹ ಪಂಚಮಿ, ಗೀತಾ ಜಯಂತಿ, ವೈಕುಂಠ ಏಕಾದಶಿ, ಕ್ರಿಸ್ಮೆಸ್ ಮುಂತಾದ ಆಚರಣೆಗಳಿವೆ.
ಡಿಸೆಂಬರ್ 2 ಮತ್ತು 17ಕ್ಕೆ ಪ್ರದೋಷ ವ್ರತ: ಪ್ರತಿ ತಿಂಗಳು ಶುಕ್ಲ ಪಕ್ಷದ ತ್ರಯೋದಶಿಯಂದು ಶಿವನ ಆರಾಧನೆ ಮಾಡಲಾಗುವುದು. ಈ ದಿನ ಭಕ್ತರು ಉಪವಾಸವಿದ್ದು ಶಿವನ ಆರಾಧನೆ ಮಾಡುತ್ತಾರೆ. ಈ ತಿಂಗಳಿನಲ್ಲಿ ಪ್ರದೋಷ ವ್ರತ ಡಿಸೆಂಬರ್ ಎರಡು ಹಾಗೂ 17ರಂದು ಬಂದಿದೆ.
ವಿನಾಯಕ ಚತುರ್ಥಿ: ಡಿಸೆಂಬರ್ 7ಕ್ಕೆ ಪ್ರತಿ ತಿಂಗಳು ಬರುವ ವಿನಾಯಕ ಚತುರ್ಥಿ ಡಿಸೆಂಬರ್ 7ಕ್ಕೆ ಬಂದಿದೆ. ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ವಿನಾಯಕ ಚತುರ್ಥಿ ಆಚರಿಸಲಾಗುವುದು. ಈ ದಿನ ಉಪವಾಸವಿದ್ದು ಗಣೇಶನ ಆರಾಧನೆ ಮಾಡುವುದರಿಂದ ಬದುಕಿನಲ್ಲಿರುವ ಕಷ್ಟಗಳೆಲ್ಲಾ ದೂರವಾಗುವುದು. ವಿವಾಹ ಪಂಚಮಿ: ಡಿಸೆಂಬರ್ 8ಕ್ಕೆ ವಿವಾಹ ಪಂಚಮಿಗಳಿಗೆ ಹಿಂದೂಗಳಿಗೆ ಮಹತ್ವವಾದ ಆಚರಣೆಗಳಲ್ಲಿ ಒಂದಾಗಿದೆ. ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಶ್ರೀರಾಮ ಸೀತೆಯನ್ನು ಮದುವೆಯಾದ ಎಂದು ರಾಮಾಯಣದಲ್ಲಿ ಉಲ್ಲೇಖವಿದೆ.
ಗೀತಾ ಜಯಂತಿ: ಡಿಸೆಂಬರ್ 14ಕ್ಕೆ ಹಿಂದೂಗಳ ಪವಿತ್ರ ಗ್ರಂಥವಾಗಿರುವ ಭಗವದ್ಗೀತೆ ಮಾರ್ಗಶಿರ ಮಾಸದ ಶುಕ್ಲಪಕ್ಷದ ಮಾರ್ಗಶಿರ ಮಾಸದಲ್ಲಿ ರಚಿಸಲಾಯಿತು. ಈ ವರ್ಷಕ್ಕೆ ನಾವು 5158 ಗೀತಾಜಯಂತಿ ಆಚರಿಸುತ್ತಿದ್ದೇವೆ. ಮಾರ್ಗಶಿರ ಪೂರ್ಣಿಮೆ ವ್ರತ ಹಿಂದೂಗಳಿಗೆ ಮಾರ್ಗಶಿರ ಪೂರ್ಣಿಮೆ ತುಂಬಾ ಮಹತ್ವವಾದ ದಿನವಾಗಿದೆ. ಈ ದಿನ ಸತ್ಯನಾರಾಯಣ ಪೂಜೆಗೆ ತುಂಬಾ ಶ್ರೇಷ್ಠವಾದ ದಿನವಾಗಿದೆ. ಈ ದಿನ ಭಕ್ತರು ಉಪವಾಸವಿದ್ದು ಸತ್ಯನಾರಾಯಣ ಪೂಜೆ ಮಾಡುತ್ತಾರೆ. ದತ್ತಾತ್ರೇಯ ಜಯಂತಿ ಮಾರ್ಗಶಿರ ಮಾಸದ ಪೂರ್ಣಿಮೆ ತಿಥಿಯಂದು ದತ್ತಾತ್ರೇಯ ಜಯಂತಿ ಆಚರಿಸಲಾಗುವುದು. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಶಿವನ ಸ್ವರೂಪವೇ ದತ್ತಾತ್ರೇಯ. ದತ್ತಾತ್ರೇಯಯನ್ನು ಪೂಜಿಸುವುದರಿಂದ ತ್ರಿಮೂರ್ತಿಗಳನ್ನು ಪೂಜಿಸಿದಷ್ಟೇ ಪುಣ್ಯದ ಫಲ ಸಿಗುವುದು.

ಅನ್ನಪೂರ್ಣ ಜಯಂತಿ ಮತ್ತು ಭೈರವಿ ಜಯಂತಿ: ಡಿಸೆಂಬರ್ 19ಕ್ಕೆ ಈ ದಿನ ದೇವತೆಗಳ ಮಾತೆಯಾದ ಅನ್ನಪೂರ್ಣವನ್ನು ಆರಾಧಿಸಲಾಗುವುದು. ಈಕೆಯೂ ಎಲ್ಲರ ಹಸಿವು ನೀಗಿಸುವ ತಾಯಿ, ಆದ್ದರಿಂದಲೇ ಈಕೆಯನ್ನು ಅನ್ನಪೂರ್ಣ ಎಂದು ಕರೆಯಲಾಗುವುದು. ಈ ದಿನ ದಶ ಮಹಾವಿದ್ಯೆಯರು-ಕಾಳಿ, ತಾರಾ, ಶೋಡಶಿ, ಭುವನೇಶ್ವರಿ, ಭೈರವಿ, ಚಿನ್ನಮಾಸ್ತಾ, ಧೂಮಾವತಿ, ಬಗಲಮುಖಿ, ಮಾತಾಂಗಿ, ಕಮಲ ಇವರನ್ನು ಆರಾಧಿಸಲಾಗುವುದು.
ಆಕೃತಾ ಸಂಕಷ್ಟಿ ಚತುರ್ಥಿ: ಡಿಸೆಂಬರ್ 22ಕ್ಕೆ ಆಕೃತಾ ಸಂಕಷ್ಟಿ ಚತುರ್ಥಿಯನ್ನು ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುವುದು. ಈ ದಿನ ವಿಘ್ನ ನಿವಾರಕನ ಆರಾಧನೆ ಮಾಡಲಾಗುವುದು. ಕ್ರಿಸ್ಮಸ್: ಡಿಸೆಂಬರ್ 25ಕ್ಕೆ ಯೇಸುಕ್ರಿಸಸ್ತನು ಹುಟ್ಟಿದ ದಿನವನ್ನು ಈ ದಿನ ಸಂಭ್ರಮಿಸಲಾಗುವುದು. ದೈವ ಪ್ರೀತಿಯನ್ನು ಮನುಷ್ಯನಿಗೆ ಸಾರುವ ದಿನವಾಗಿದೆ.
ಸಫಲ ಏಕಾದಶಿ: ಡಿಸೆಂಬರ್ 30ಕ್ಕೆ ಈ ದಿನ ವಿಷ್ಣುವಿನ ಆರಾಧನೆ ಮಾಡಲಾಗುವುದು. ದಶಮಿ ತಿಥಿಯ ಮಧ್ಯಾಹ್ನದಿಂದ ಉಪವಾಸ ಪ್ರಾರಂಭವಾಗುವುದು. ದ್ವಾದಶಿ ತಿಥಿಯಂದು ಸೂರ್ಯ ಉದಯಿಸಿದ ನಂತರ ಉಪವಾಸ ಮುಕ್ತಾಯವಾಗುತ್ತದೆ.