ಹಬ್ಬ ಅಂದ್ರೆ ನೆನಪಾಗೋದೇ ತರಹೇವಾರಿ ಸಿಹಿತಿಂಡಿಗಳು, ಭಕ್ಷ್ಯ ಭೋಜನ ಇತ್ಯಾದಿ. ಆದರೆ ಪ್ರತಿಸಲ ಹೊರಗಿನಂದಲೇ ಸಿಹಿ ತಂದು ತಿನ್ನುವುದು ಕೆಲವರಿಗೆ ತೃಪ್ತಿ ನೀಡಲಾರದು. ಅಂತಹವರು ಮನೆಯಲ್ಲಿಯೇ ಏನಾದರೂ ಸ್ವೀಟ್ ಮಾಡ್ಬೇಕು ಅಂತ ಯೋಚನೆ ಮಾಡ್ತಾ ಇರ್ತಾರೆ. ಅಂಥವರಿಗೆ ನಾವಿಂದು ಸ್ಪೆಷಲ್ ಕಡಲೆಹಿಟ್ಟಿನ ಪೇಡಾ ರೆಸಿಪಿ ಹೇಳಿಕೊಡಲಿದ್ದೇವೆ. ಕಡಲೆಹಿಟ್ಟಿನ ಪೇಡಾ ಮಾಡುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:
ಸ್ವೀಟ್ ಪ್ರಿಯರಿಗೆ ಕಡಲೆಹಿಟ್ಟಿನ ಪೇಡಾ ರೆಸಿಪಿ
ಬೇಕಾಗುವ ಸಾಮಾಗ್ರಿಗಳು: ¼ ಕಪ್ ತುಪ್ಪ 1 ಕಪ್ ಕಡಲೆಹಿಟ್ಟು ¼ ಕಪ್ ಹಾಲಿನ ಪುಡಿ ½ ಕಪ್ ತೆಂಗಿನಕಾಯಿ (ತುರಿದ) 1 ಕಪ್ ಹಾಲು ¾ ಕಪ್ ಸಕ್ಕರೆ
ತಯಾರಿಸುವ ವಿಧಾನ: ಮೊದಲು, ಒಂದು ದೊಡ್ಡ ಕಡಾಯಿಯಲ್ಲಿ ¼ ಕಪ್ ತುಪ್ಪ ಮತ್ತು 1 ಕಪ್ ಕಡಲೆಹಿಟ್ಟು ಹಾಕಿ, ಹಸಿ ವಾಸನೆ ಹೋಗುವವರೆಗೆ ಲೋ ಫ್ಲೇಮ್‌ನಲ್ಲಿ ಹುರಿಯಿರಿ. 15 ನಿಮಿಷಗಳ ಕಾಲ ಹುರಿದ ನಂತರ, ಕಡಲೆಹಿಟ್ಟು ಗೋಲ್ಡನ್ ಭ್ರೌನ್ ಬಣ್ಣಕ್ಕೆ ತಿರುಗಲು ಪ್ರಾರಂಭವಾಗುತ್ತದೆ. ಈಗ ಇದಕ್ಕೆ 1 ಟೀಸ್ಪೂನ್ ತುಪ್ಪ ಸೇರಿಸಿ, ಹುರಿಯುವುದನ್ನು ಮುಂದುವರಿಸಿ. ಈ ಹಂತದಲ್ಲಿ ತುಪ್ಪ ಬಿಡುಗಡೆಯಾಗಲು ಪ್ರಾರಂಭವಾಗುತ್ತದೆ, ಇದು ಸಂಪೂರ್ಣವಾಗಿ ಬೆಂದಿದೆ ಎಂದು ಸೂಚಿಸುತ್ತದೆ. ಈಗ ಇದಕ್ಕೆ ¼ ಕಪ್ ಹಾಲಿನ ಪುಡಿ ಮತ್ತು ½ ಕಪ್ ತೆಂಗಿನಕಾಯಿ ಸೇರಿಸಿ, 2 ನಿಮಿಷಗಳ ಕಾಲ ಹುರಿಯಿರಿ. ಮುಂದೆ, 1 ಕಪ್ ಹಾಲು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ಹಾಲನ್ನು ಹೀರಿಕೊಂಡು ದಪ್ಪವಾಗಲು ಪ್ರಾರಂಭವಾಗುತ್ತದೆ. ಇದು ಉಂಡೆ ಕಟ್ಟಲು ಬರುವವರೆಗೆ ಬೇಯಿಸಿ. ಈಗ ¾ ಕಪ್ ಸಕ್ಕರೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಕರಗಿದ ನಂತರ ಅದಕ್ಕೆ 1 ಟೀಸ್ಪೂನ್ ತುಪ್ಪವನ್ನು ಸೇರಿಸಿ. ಮಿಶ್ರಣವು ಇನ್ನೂ ಬೆಚ್ಚಗಿರುವಾಗ, ಪೇಡಾ ವಿನ್ಯಾಸದ ಅಚ್ಚು ಬಳಸಿ, ಪೇಡಾ ತಯಾರಿಸಿ. ಬಡಿಸುವ ಮೊದಲು ಪೇಡಾವನ್ನು 1 ಗಂಟೆ ಫ್ರಿಜರ್‌ನಲ್ಲಿಡಿ. ಈಗ ಸವಿಯಲು ಕಡಲೆಹಿಟ್ಟಿನ ಪೇಡಾ ಸವಿಯು ಸಿದ್ಧ.
INSTRUCTIONS NUTRITIONAL INFORMATION ಕ್ಯಾಲೋರಿಗಳು - 94 ಕೆ.ಸಿ.ಎಲ್ ಕೊಬ್ಬು - 4 ಗ್ರಾಂ ಪ್ರೋಟೀನ್ - 2 ಗ್ರಾಂ ಕಾರ್ಬೋಹೈಡ್ರೇಟ್ಗಳು - 12 ಗ್ರಾಂ ಫೈಬರ್ - 1 ಗ್ರಾಂ