ಮಂಜೇಶ್ವರ: ಜಲಜೀವನ ಮಿಷನ್ ಯೋಜನೆ ಸಂಬಂಧ ಮೀಂಜ ಗ್ರಾಮ ಪಂಚಾಯತಿ ಮಟ್ಟದ ಕಾರ್ಯಾಗಾರ ಜರಗಿತು. ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ ಉದ್ಘಾಟಿಸಿದರು. ಉಪಾಧ್ಯಕ್ಷ ಜಯರಾಮ ಬಲ್ಲಂಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷ ಬಾಬು, ಜಲಪ್ರಾಧಿಕಾರ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಎಂ.ಟಿ.ಪದ್ಮನಾಭನ್, ಸಹಾಯಕ ಇಂಜಿನಿಯರ್ ಮಧು ಎನ್., ಯೋಜನೆಯ ನಿರ್ವಹಣೆ ಸಹಾಯ ಏಜೆನ್ಸಿ ಶ್ರೀ ಸತ್ಯಸಾಯಿ ಆರ್ಪನೇಜ್ ಟ್ರಸ್ಟ್ ಮೀಂಜ ಪಂಚಾಯತ್ ಟೀಂ ಲೀಡರ್ ಕೀರ್ತಿಪ್ರಿಯಾ, ಪಂಚಾಯತಿ ಕಾರ್ಯದರ್ಶಿ ನಂದಗೋಪಾಲ ಕೆ., ಕುಟುಂಬಶ್ರೀ ಉಪಾಧ್ಯಕ್ಷೆ ಗಾಯತ್ರಿ ಸುಂದರ್ ಮೊದಲಾದವರು ಉಪಸ್ಥಿತರಿದ್ದರು.