ಪಣಜಿ: ದೇಶದಲ್ಲಿ ಒಟಿಟಿ (ಓವರ್ ದಿ ಟಾಪ್) ಮನರಂಜನಾ ತಾಣಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಅದರಲ್ಲಿ ಪ್ರಸಾರವಾಗುತ್ತಿರುವ ಆಕ್ಷೇಪಾರ್ಹ ಸಿನಿಮಾಗಳು, ಧಾರಾವಾಹಿಗಳ ಬಗ್ಗೆ ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪ್ರಸೂನ್ ಜೋಶಿ ಕಿಡಿ ಕಾರಿದ್ದಾರೆ.
ಪಣಜಿ: ದೇಶದಲ್ಲಿ ಒಟಿಟಿ (ಓವರ್ ದಿ ಟಾಪ್) ಮನರಂಜನಾ ತಾಣಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಅದರಲ್ಲಿ ಪ್ರಸಾರವಾಗುತ್ತಿರುವ ಆಕ್ಷೇಪಾರ್ಹ ಸಿನಿಮಾಗಳು, ಧಾರಾವಾಹಿಗಳ ಬಗ್ಗೆ ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪ್ರಸೂನ್ ಜೋಶಿ ಕಿಡಿ ಕಾರಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ಇಂಟರ್ನೆಟ್ ಸಹಾಯದಿಂದ ಮನರಂಜನಾ ತಾಣಗಳು ಯಾವರೀತಿ ಉಗಮಗೊಳ್ಳುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣ ಇನ್ನೂ ದೊರೆತಿಲ್ಲ. ಪಬ್ಲಿಕ್ ನೀಡುವ ಹಣದಿಂದ ನೀವು ಲಾಭ ಮಾಡಿಕೊಳ್ಳುತ್ತೀರಿ ಎಂದಾದರೆ ಪಬ್ಲಿಕ್ ನ ಅಭಿಪ್ರಾಯವನ್ನು ನೀವು ಕೇಳಬೇಕಾಗುತ್ತದೆ ಎಂದು ಪ್ರಸೂನ್ ಜೋಶಿ ಹೇಳಿದ್ದಾರೆ.
ಈ ಹಿಂದೆ ಹಲವು ಒಟಿಟಿ ಪ್ಲಾಟ್ ಫಾರ್ಮುಗಳಲ್ಲಿ ಪ್ರಸಾರವಾದ ಕೆಲ ಧಾರಾವಾಹಿ ಸರಣಿ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಮುಖ್ಯವಾಗಿ ಬಲಪಂಥೀಯ ಪಕ್ಷಗಳು ಅವುಗಳ ವಿರುದ್ಧ ಪ್ರತಿಭಟನೆ ನಡೆಸಿದ್ದವು.