ಪೆರ್ಲ: 23ನೇ ಪಾರ್ಟಿ ಕಾಂಗ್ರೆಸ್ ಸಿಪಿಐಎಂ ಎಣ್ಮಕಜೆ ಲೋಕಲ್ ಸಮ್ಮೇಳನಕ್ಕೆ ಪಳ್ಳಕಾನ ಸನ್ ಪ್ಲವರ್ ಸಭಾಂಗಣದಲ್ಲಿ ವಿಶೇಷವಾಗಿ ಸಜ್ಜುಗೊಳಿಸಿದ ಮದನ ಮಾಸ್ತರ್ ನಗರದಲ್ಲಿ ಮಂಗಳವಾರ ಬೆಳಿಗ್ಗೆ ಉಜ್ವಲ ಚಾಲನೆ ನೀಡಲಾಯಿತು.
ನವಂಬರ್ 9 ಹಾಗೂ 10ರಂದು ದ್ಚಿದಿನಗಳಲ್ಲಾಗಿ ನಡೆಯುವ ಸಮ್ಮೇಳನದ ದ್ವಜಾರೋಹಣವನ್ನು ಪಕ್ಷದ ಹಿರಿಯ ಮುಂದಾಳು ಚನಿಯಪ್ಪ ಪೂಜಾರಿ ನಿರ್ವಹಿಸಿ ಚಾಲನೆ ನೀಡಿದರು. ಬಳಿಕ ನಡೆದ ಪ್ರತಿನಿಧಿ ಸಮ್ಮೇಳನವನ್ನು ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಕೆ.ಆರ್.ಜಯಾನಂದ ಉದ್ಘಾಟಿಸಿದರು. ನಾಸೀರಿದ್ದೀನ್ ಮಲಂಗರೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಸಮಿತಿ ಸದಸ್ಯ ಶಂಕರ ರೈ ಮಾಸ್ತರ್,ಕುಂಬಳೆ ಏರಿಯಾ ಸಮಿತಿ ಸದಸ್ಯ ಸುಬ್ಬಣ್ಣ ಆಳ್ವ ಬಾಡೂರು,ಇಬ್ರಾಹಿಂ ಪುತ್ತಿಗೆ,ಮಂಜುನಾಥ ಪಿ.ಕೆ,ಪುಷ್ಪಾ ಬೆದ್ರಂಪಳ್ಳ ಉಪಸ್ಥಿತರಿದ್ದರು. ರಾಮಕೃಷ್ಣ ರೈ ಸ್ವಾಗತಿಸಿ ಸೌಧಾಭಿ ಹನೀಫ್ ರಕ್ತಸಾಕ್ಷಿ ಪ್ರಮೇಯ ಮಂಡಿಸಿದರು. ಲೋಕಲ್ ಕಾರ್ಯದರ್ಶಿ ವಿನೋದ್ ಪೆರ್ಲ ವರದಿ ಮಂಡಿಸಿದರು.ವಿಶ್ವರಾಜ್ ಸಂಸ್ಮರಣಾ ಠರಾವು ಮಂಡಿಸಿದರು.ನ.10ರಂದು ಪೆರ್ಲ ಪೇಟೆಯಲ್ಲಿ ಬಹಿರಂಗ ಸಭೆ ನಡೆಯಲಿದೆ.