HEALTH TIPS

ಓಮೈಕ್ರಾನ್‌ ಕಳವಳ: 'ದೇಶದಲ್ಲಿ ಒಂದು ಪ್ರಕರಣವೂ ದೃಢಪಟ್ಟಿಲ್ಲ'

      ನವದೆಹಲಿ: 'ಭಾರತದಲ್ಲಿ ಈವರೆಗೆ ಓಮೈಕ್ರಾನ್ ರೂಪಾಂತರ ತಳಿಯಿಂದ ಕೋವಿಡ್‌ ಬಂದಿರುವ ಒಂದು ಪ್ರಕರಣವೂ ದೃಢಪಟ್ಟಿಲ್ಲ' ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

      ಈಚಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಸುತ್ತಮುತ್ತಲಿನ ದೇಶಗಳಿಂದ ಭಾರತಕ್ಕೆ ಬಂದಿರುವ ವ್ಯಕ್ತಿಗಳನ್ನು ಪತ್ತೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.

       ದಕ್ಷಿಣ ಆಫ್ರಿಕಾ ದಿಂದ ಕಳೆದ ವಾರ ಮಹಾರಾಷ್ಟ್ರಕ್ಕೆ ವಾಪಸಾಗಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್ ತಗುಲಿದೆ. ಆ ವ್ಯಕ್ತಿಯನ್ನು ಪ್ರತ್ಯೇಕವಾಸದಲ್ಲಿ ಇರಿಸ ಲಾಗಿದೆ

       'ಈಚಿನ ದಿನಗಳಲ್ಲಿ ವಿದೇಶಗಳಿಂದ ಬಂದವ ರಲ್ಲಿ ಕೋವಿಡ್‌ ದೃಢಪಟ್ಟವರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ವೈರಾಣು ಸಂರಚನೆ ವಿಶ್ಲೇಷ ಣೆಗೆ (ಜಿನೋಮ್ ಸೀಕ್ವೆನ್ಸ್‌) ಕಳುಹಿ ಸಲಾಗಿದೆ' ಎಂದು ಅಧಿಕಾರಿಯು ಹೇಳಿದ್ದಾರೆ.

      'ದಕ್ಷಿಣ ಆಫ್ರಿಕಾದಿಂದ ಕಳೆದ ವಾರ ಮಹಾರಾಷ್ಟ್ರಕ್ಕೆ ವಾಪಸಾಗಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್ ತಗುಲಿದೆ. ಆದರೆ ಅವರಿಗೆ ಓಮೈಕ್ರಾನ್‌ ರೂಪಾಂತರ ತಳಿಯಿಂದಲೇ ಕೋವಿಡ್‌ ಬಂದಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಅವರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಕಳಹಿಸಲಾಗಿದೆ. ಅದರ ವರದಿ ಬರಲು ಇನ್ನೂ ಒಂದ ವಾರ ಬೇಕಾಗುತ್ತದೆ. ಆ ವ್ಯಕ್ತಿಯನ್ನು ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ' ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

      'ಆ ವ್ಯಕ್ತಿಯು ತನ್ನ ಕುಟುಂಬದ ಇನ್ನೂ ಐವರ ಜತೆಗೆ ದಕ್ಷಿಣ ಆಫ್ರಿಕಾದಿಂದ ಬಂದಿದ್ದರು. ಆರು ಜನರೂ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಿಸಿದ್ದಾರೆ. ಅವರಲ್ಲಿ ಒಬ್ಬರಲ್ಲಿ ಮಾತ್ರವೇ ಕೋವಿಡ್‌ ಇರುವುದು ಪತ್ತೆಯಾಗಿದೆ. ಆ ವ್ಯಕ್ತಿಯಲ್ಲಿ ಕೋವಿಡ್‌ನ ಯಾವುದೇ ಲಕ್ಷಣಗಳು ಇಲ್ಲ. ಆದರೆ ಮಾನಸಿಕವಾಗಿ ಅವರು ಕುಗ್ಗಿದ್ದಾರೆ. ಅವರಿಗೆ ಆಪ್ತ ಸಮಾಲೋಚನೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಲಾಗಿದೆ. ಮತ್ತು ಅವರು ವಾಪಸಾದ ದಿನದಿಂದ ಅವರ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ' ಎಂದು ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

       ಬೋಟ್ಸ್‌ವಾನ ಮಹಿಳೆ   ಪತ್ತೆ: 

       ಬೋಟ್ಸ್‌ವಾನದಿಂದ ದೆಹಲಿಗೆ, ಅಲ್ಲಿಂದ ಜಬಲ್‌ಪುರಕ್ಕೆ ಬಂದಿದ್ದ ಮಹಿಳೆಯನ್ನು ಜಬಲ್‌ಪುರ ಆರೋಗ್ಯ ಇಲಾಖೆಯು ಸೋಮವಾರ ಪತ್ತೆ ಮಾಡಿದೆ.

        ಬೋಟ್ಸ್‌ವಾನದಿಂದ ಮಹಿಳೆ ಯೊಬ್ಬರು ದೆಹಲಿ ಮೂಲಕ ಜಬಲ್‌ ಪುರಕ್ಕೆ ಬಂದಿದ್ದಾರೆ. ಅವರನ್ನು ಪತ್ತೆ ಮಾಡಿ, ಕೋವಿಡ್‌ ಇದೆಯೇ ಎಂಬುದನ್ನು ಪರಿಶೀಲಿಸಿ ಎಂದು ಕೇಂದ್ರ ಸರ್ಕಾರವು ಮಧ್ಯಪ್ರದೇಶ ಸರ್ಕಾರಕ್ಕೆ ಭಾನುವಾರ ಸೂಚನೆ ನೀಡಿತ್ತು. ಹೀಗಾಗಿ ಆ ಮಹಿಳೆಯನ್ನು ಪತ್ತೆ ಮಾಡಲು ಭಾನುವಾರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಒಂದು ದಿನವಾದರೂ ಅವರು ಪತ್ತೆಯಾಗದೇ ಇದ್ದುದ್ದಕ್ಕೆ ಭಾರಿ ಕಳವಳ ವ್ಯಕ್ತವಾಗಿತ್ತು. ಆದರೆ ಸೋಮವಾರ ಸಂಜೆ ವೇಳೆಗೆ ಅವರು ಪತ್ತೆಯಾಗಿದ್ದಾರೆ ಮತ್ತು ಅವರಿಗೆ ಕೋವಿಡ್‌ ಇಲ್ಲ ಎಂಬುದು ದೃಢಪಟ್ಟಿದೆ.

      'ಆ ಮಹಿಳೆಯು ಬೋಟ್ಸ್‌ವಾನ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದಾರೆ. ತರಬೇತಿಯ ಕಾರಣಕ್ಕೆ ಜಬಲ್‌ಪುರ ದಲ್ಲಿರುವ ಭಾರತೀಯ ಸೇನೆಯ 'ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್ ಕಾಲೇಜ್‌'ಗೆ ಬಂದಿದ್ದಾರೆ. ಇಲ್ಲಿಗೆ ಬಂದ ನಂತರ ಅವರನ್ನು 10 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

           'ಕೇಂದ್ರ ಮಾಹಿತಿ ಹಂಚಿಕೊಳ್ಳಲಿ'

       'ವಿದೇಶಗಳಿಂದ ಬಂದ ಪ್ರಯಾಣಿಕರ ಮಾಹಿತಿಯನ್ನು ಕೇಂದ್ರ ಸರ್ಕಾರವು ನಿಯಮಿತವಾಗಿ ರಾಜ್ಯ ಸರ್ಕಾರಗಳಿಗೆ ನೀಡಿದರೆ ಮಾತ್ರ, ಅಂತಹ ಪ್ರಯಾಣಿಕರನ್ನು ಪತ್ತೆ ಮಾಡಲು ಸಾಧ್ಯ' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

      'ಮುಂಬೈ ಮತ್ತು ಮಹಾರಾಷ್ಟ್ರದ ಬೇರೆ ವಿಮಾನ ನಿಲ್ದಾಣಗಳಿಗೆ ಬಂದಿಳಿದ ವಿದೇಶಿ ಪ್ರಯಾಣಿಕರನ್ನು ಪತ್ತೆ ಮಾಡಲು ನಮಗೆ ಸಾಧ್ಯವಾಗುತ್ತದೆ. ಆದರೆ ಬೇರೆ ರಾಜ್ಯದ ವಿಮಾನ ನಿಲ್ದಾಣಗಳಿಗೆ ಬಂದಿಳಿದು ಆನಂತರ ಬಸ್‌, ರೈಲು, ಕಾರು, ದೇಶೀಯ ವಿಮಾನದ ಮೂಲಕ ಮಹಾರಾಷ್ಟ್ರಕ್ಕೆ ಬರುವ ವಿದೇಶಿ ಪ್ರಯಾಣಿಕರನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಅವರಿಗೆ ಓಮೈಕ್ರಾನ್‌ ತಳಿಯಿಂದ ಕೋವಿಡ್‌ ತಗುಲಿದ್ದರೆ, ಅದನ್ನು ಪತ್ತೆ ಮಾಡುವುದೂ ಸಾಧ್ಯವಿಲ್ಲ' ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

      'ಈ ಅಪಾಯವನ್ನು ತಡೆಯಬೇಕೆಂದರೆ, ವಿದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರ ವಿವರವನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.

          ಅತಿ ಹೆಚ್ಚು ಅಪಾಯದ ಸಾಧ್ಯತೆ- ವಿಶ್ವ ಆರೋಗ್ಯ ಸಂಸ್ಥೆ

      ಜಿನೀವಾ (ರಾಯಿಟರ್ಸ್): ಕೋವಿಡ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಜಾಗತಿಕವಾಗಿ ಹರಡುವ ಸಾಧ್ಯತೆಯಿದ್ದು, ಕೆಲವು ಸ್ಥಳಗಳಲ್ಲಿ ಹೆಚ್ಚಿನ ಅಪಾಯವನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

       ಓಮೈಕ್ರಾನ್‌ನಿಂದ ಮೃತಪಟ್ಟ ಪ್ರಕರಣಗಳು ಜಗತ್ತಿನ ಎಲ್ಲಿಯೂ ಈವರೆಗೆ ವರದಿಯಾಗಿಲ್ಲ. ಆದರೂ, ಸೋಂಕಿನಿಂದ ಅಥವಾ ಲಸಿಕೆಯಿಂದ ಸೃಷ್ಟಿಯಾಗಿರುವ ಮನುಷ್ಯನ ರೋಗನಿರೋಧಕ ಶಕ್ತಿಯನ್ನು ಭೇದಿಸುವ ಶಕ್ತಿಯನ್ನು ಇದು ಹೊಂದಿದೆ ಎಂಬ ಕಾರಣಕ್ಕೆ ಈ ಕುರಿತ ಇನ್ನಷ್ಟು ಅಧ್ಯಯನ ಅಗತ್ಯ ಎಂದು ಅಭಿಪ್ರಾಯಪಟ್ಟಿದೆ.

       ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಂಸ್ಥೆಯು, ಆದ್ಯತೆಯ ಗುಂಪುಗಳಿಗೆ ಲಸಿಕೆ ನೀಡಿಕೆಯ ವೇಗ ಹೆಚ್ಚಿಸುವಂತೆ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಸನ್ನದ್ಧವಾಗಿ ಇರಿಸುವಂತೆ ತನ್ನ 194 ಸದಸ್ಯ ದೇಶಗಳಿಗೆ ಕರೆ ನೀಡಿದೆ.

       'ಓಮೈಕ್ರಾನ್ ತಳಿಯು ಅತಿಹೆಚ್ಚು ಸ್ಪೈಕ್ ಪ್ರೊಟೀನ್‌ ಗಳನ್ನು ಹೊಂದಿದ್ದು, ಈ ಪೈಕಿ ಕೆಲವು ಸ್ಪೈಕ್ ಪ್ರೊಟೀನ್‌ಗಳು ಪ್ರಸ್ತುತ ಸಾಂಕ್ರಾಮಿಕದ ಮೇಲೆ ಉಂಟುಮಾಡಬಲ್ಲ ಸಂಭಾವ್ಯ ಪರಿಣಾಮ ಕಳವಳಕಾರಿ. ಈ ರೂಪಾಂತರಕ್ಕೆ ಸಂಬಂಧಿಸಿದ ಒಟ್ಟಾರೆ ಜಾಗತಿಕ ಸ್ಥಿತಿಯನ್ನು ಅತಿಹೆಚ್ಚು ಅಪಾಯಕಾರಿ ಎಂದು ನಿರ್ಣಯಿಸಲಾಗಿದೆ' ಎಂದು ಸಂಸ್ಥೆ ತಿಳಿಸಿದೆ.

      ಹೊಸ ತಳಿ ಕಾಣಿಸಿಕೊಂಡಿರುವ ವಿವಿಧ ದೇಶಗಳಿಗೆ ಅಂತರರಾಷ್ಟ್ರೀಯ ವಿಮಾನಯಾನ ನಿರ್ಬಂಧಿಸುವ ಪ್ರವೃತ್ತಿ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆ, ಅಂತರರಾಷ್ಟ್ರೀಯ ಪ್ರಯಾಣ ವ್ಯವಸ್ಥೆಯನ್ನು ಸಮಯೋಚಿತವಾಗಿ ಸರಿಹೊಂದಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

       ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಗೇಬ್ರೆಯಸಸ್ ಅವರು ಆರೋಗ್ಯ ಸಚಿವರ ಸಭೆಯಲ್ಲಿ ಓಮೈಕ್ರಾನ್‌ ಬಗ್ಗೆ ದನಿ ಎತ್ತಿದ್ದಾರೆ. ಭವಿಷ್ಯದ ಸಾಂಕ್ರಾಮಿಕಗಳ ತಡೆ ಕುರಿತ ಅಂತರರಾಷ್ಟ್ರೀಯ ಒಪ್ಪಂದ ಮಾತುಕತೆಯನ್ನು ಈ ಸಭೆ ಆರಂಭಿಸುವ ನಿರೀಕ್ಷೆಯಿದೆ. 2024ರ ಮೇ ತಿಂಗಳ ಹೊತ್ತಿಗೆ ಹೊಸ ಜಾಗತಿಕ ಒಪ್ಪಂದ ಏರ್ಪಡಲಿದೆ. ದತ್ತಾಂಶ, ವೈರಾಣುವಿನ ಸಂರಚನೆ ವಿಶ್ಲೇಷಣೆ (ಜಿನೋಮ್ ಸೀಕ್ವೆನ್ಸಿಂಗ್) ಮತ್ತು ಲಸಿಕೆಯ ಮಾಹಿತಿಯನ್ನು ದೇಶಗಳು ಪರಸ್ಪರ ಹಂಚಿಕೊಳ್ಳಬೇಕು ಎಂಬದನ್ನು ಈ ಒಪ್ಪಂದ ಒಳಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries